Guddekal Balasubrahmanya ಶಿವಮೊಗ್ಗ: ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆಗಸ್ಟ್ 06 ರಂದು ಭರಣಿ ಕಾವಡಿ ಹಾಗೂ ಆಗಸ್ಟ್ 07 ರಂದು ಆಡಿಕೃತ್ತಿಕೆ ಹರೋಹರ ಜಾತ್ರೆಯನ್ನು ಆಚರಿಸಲಾಗುತ್ತಿದೆ ಎಂದು ಟ್ರಸ್ಟ್ನ ಅಧ್ಯಕ್ಷರಾದ ರಘುಕುಮಾರ್ ತಿಳಿಸಿದರು.
ಶಿವಮೊಗ್ಗ: ಸಿರಿಗೆರೆ ಬಳಿ ಭೀಕರ ಕಾರು ಅಪಘಾತ – ಬಿಎಸ್ಎನ್ಎಲ್ ನಿವೃತ್ತ ನೌಕರ ಸಾವು
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಿಕೃತ್ತಿಕೆ ಹರೋಹರ ಜಾತ್ರೆಯನ್ನು ಅನೇಕ ದಶಕಗಳಿಂದ ಅತ್ಯಂತ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಸಹ ಆಷಾಢ ತಿಂಗಳಲ್ಲಿ ಈ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ಭಕ್ತರು ತಮ್ಮ ಗ್ರಹ ದೋಷ, ಚರ್ಮದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಇಲ್ಲಿ ಹರಕೆ ಹೊರುತ್ತಾರೆ ಮತ್ತು ಜಾತ್ರೆಯ ದಿನದಂದು ಆ ಹರಕೆಯನ್ನು ತೀರಿಸುತ್ತಾರೆ.
ಅಷ್ಟೇ ಅಲ್ಲದೆ, ತಮಿಳು ಸಮುದಾಯದವರು ತಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಮೈಗೆ ವೇಲ್ (ಅಲಗು) ಚುಚ್ಚಿಕೊಂಡು, ದೇಹವನ್ನು ದಂಡಿಸಿಕೊಳ್ಳುವ ಮೂಲಕ ಹರಕೆ ತೀರಿಸುತ್ತಾರೆ” ಎಂದರು.
ಇನ್ನು ವಿಶ್ವದಲ್ಲೇ ಅತಿ ಎತ್ತರದ 151 ಅಡಿ ಬಾಲಸುಬ್ರಹ್ಮಣ್ಯ ಸ್ವಾಮಿಯ ಶಿಲಾ ಮೂರ್ತಿ ಸ್ಥಾಪನೆಯ ಕಾರ್ಯವನ್ನು ಆರಂಭಿಸಲಾಗಿದ್ದು, ಬೆಡ್ ಹಾಕಲಾಗಿದೆ. ಮೂರ್ತಿ ಸ್ಥಾಪನೆಗೆ 6 ಕೋಟಿ ಸೇರಿದಂತೆ, ಸಂಪೂರ್ಣ ಕಾಮಗಾರಿಗೆ 25 ಕೋಟಿ ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.
