ಹೊಸನಗರ: ತೋಟಕ್ಕೆ ದನ ನುಗ್ಗಿದೆ ಅಂತ 112 ಸಿಬ್ಬಂದಿಗೆ ಬಂತು ದೂರು: ಆಮೇಲೆ ?

Published: 01 ಆಗಷ್ಟ್ 2026, 3:19 ಅಪರಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

ಹೊಸನಗರ : ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿಗೆ ದನಗಳು ನುಗ್ಗಿ ಬೆಳೆ ಹಾಳುಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯನ್ನು 112 ಸಿಬ್ಬಂದಿ ಸ್ಥಳಕ್ಕೆ ತೆರಳಿ ಬಗೆಹರಿಸಿದ್ದಾರೆ. Hosanagara Police ಘಟನೆಯ ವಿವರ ಹೊಸನಗರ ಠಾಣೆ ವ್ಯಾಪ್ತಿಯ ರೈತರೊಬ್ಬರು 112ಗೆ ಕರೆ ಮಾಡಿ, ಎದುರುದಾರರ ದನಗಳು ತಮ್ಮ ಜಮೀನಿಗೆ ನುಗ್ಗಿ ಬೆಳೆಗಳನ್ನು…

ಹೊಸನಗರ : ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿಗೆ ದನಗಳು ನುಗ್ಗಿ ಬೆಳೆ ಹಾಳುಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯನ್ನು 112 ಸಿಬ್ಬಂದಿ ಸ್ಥಳಕ್ಕೆ ತೆರಳಿ ಬಗೆಹರಿಸಿದ್ದಾರೆ.

Hosanagara Police ಘಟನೆಯ ವಿವರ

ಹೊಸನಗರ ಠಾಣೆ ವ್ಯಾಪ್ತಿಯ ರೈತರೊಬ್ಬರು 112ಗೆ ಕರೆ ಮಾಡಿ, ಎದುರುದಾರರ ದನಗಳು ತಮ್ಮ ಜಮೀನಿಗೆ ನುಗ್ಗಿ ಬೆಳೆಗಳನ್ನು ಹಾಳುಮಾಡಿವೆ. ಈ ಕುರಿತು ಪ್ರಶ್ನಿಸಲು ಹೋದಾಗ ಎದುರುದಾರರು ಗಲಾಟೆ ನಡೆಸುತ್ತಿದ್ದಾರೆ ಎಂದು ದೂರು ನೀಡಿದ್ದರು.

ಕರೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ERV ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಜಗಳವನ್ನು ತಡೆದಿದ್ದಾರೆ. ಹಾಗೆಯೇ ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಮುಂದೆ ಮತ್ತೆ ಈ ರೀತಿಯ ತೊಂದರೆ ಅಥವಾ ಗಲಾಟೆಯಾದರೆ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.

END OF STORY

Prathapa thirthahalli

Senior Journalist | Malenadu Today
✓ Verified Journalist