ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಸಮೀಪದ ನಾಬಳ ಸೇತುವೆ ಮೇಲೆ ಹರಿಯುತ್ತಿದ್ದ ಪ್ರವಾಹದ ನೀರಿನಲ್ಲಿ ಹೊನ್ನಾವರ ಮೂಲದ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು ಸಿಲುಕಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದ ಆರೂ ಮಂದಿ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ವಿಪರೀತ ಮಳೆಯ ಹಿನ್ನೆಲೆ ರಸ್ತೆ ಬಂದ್ ಆಗಿರುವ ಮಾಹಿತಿ ಇಲ್ಲದೆ ಹೊನ್ನಾವರ ಮೂಲದ ಕುಟುಂಬವೊಂದು ಕಾರಿನಲ್ಲಿ ಶೃಂಗೇರಿಯತ್ತ ಹೊರಟಿತ್ತು….
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಸಮೀಪದ ನಾಬಳ ಸೇತುವೆ ಮೇಲೆ ಹರಿಯುತ್ತಿದ್ದ ಪ್ರವಾಹದ ನೀರಿನಲ್ಲಿ ಹೊನ್ನಾವರ ಮೂಲದ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು ಸಿಲುಕಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದ ಆರೂ ಮಂದಿ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ವಿಪರೀತ ಮಳೆಯ ಹಿನ್ನೆಲೆ ರಸ್ತೆ ಬಂದ್ ಆಗಿರುವ ಮಾಹಿತಿ ಇಲ್ಲದೆ ಹೊನ್ನಾವರ ಮೂಲದ ಕುಟುಂಬವೊಂದು ಕಾರಿನಲ್ಲಿ ಶೃಂಗೇರಿಯತ್ತ ಹೊರಟಿತ್ತು. ನಾಬಳ ಸೇತುವೆ ಬಳಿ ಬಂದಾಗ ನೀರಿನ ಆಳದ ಕಲ್ಪನೆ ಇಲ್ಲದೆ ಕಾರನ್ನು ಮುಂದಕ್ಕೆ ಚಲಾಯಿಸಿದ್ದಾರೆ. ಪರಿಣಾಮ ಕಾರು ಸೇತುವೆಯ ಮಧ್ಯಭಾಗದಲ್ಲಿ ಸಿಲುಕಿ ನೀರು ಆವರಿಸತೊಡಗಿದೆ. ಈ ಹಿನ್ನೆಲೆ ಕಾರಿನಲ್ಲಿದ್ದ ಮಗು ಸೇರಿದಂತೆ ಒಟ್ಟು 6 ಮಂದಿ ನೆರವಿಗಾಗಿ ಕೂಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಗ್ರಾಮಸ್ಥರು ಹಗ್ಗಗಳನ್ನು ಕಟ್ಟಿ ಕಾರನ್ನು ದಂಡೆಗೆ ಎಳೆದು ತಂದು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
Agumbe Rain Fury ಆಗುಂಬೆಯಲ್ಲಿ 286 ಮಿ.ಮೀ. ಮಳೆ: ಉಕ್ಕಿ ಹರಿದ ತುಂಗಾ, ಮಾಲತಿ ನದಿಗಳು
ಮಲೆನಾಡಿನ ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ ಬಿಡುವಿಲ್ಲದೆ ಮಳೆ ಮುಂದುವರಿದಿದೆ. ಅದರಲ್ಲೂ ಆಗುಂಬೆ ವ್ಯಾಪ್ತಿಯಲ್ಲಿ 286 ಮಿ.ಮೀ. ಭಾರಿ ಮಳೆ ದಾಖಲಾಗಿದ್ದು, ತುಂಗಾ ಹಾಗೂ ಮಾಲತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

