ಶಿವಮೊಗ್ಗ : ಶರಾವತಿ ನಗರದಲ್ಲಿ ನೇಣಿಗೆ ಶರಣಾದ ಯುವತಿ! ಘಟನೆ ವಿವರ ಹೀಗಿದೆ

Published: 01 ಆಗಷ್ಟ್ 2026, 8:51 ಫೂರ್ವಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜೀವನದಲ್ಲಿ ಎಂತದ್ದೆ ಸಮಸ್ಯೆ ಇದ್ದರೂ ಸಾವಿನ ದಾರಿಯನ್ನು ತುಳಿಯಬಾರದು. ಆದರೆ ಇಲ್ಲೊಬ್ಬ ಯುವತಿ ನಗರದ ಶರಾವತಿ ನಗರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಿನ್ನೆದಿನ ಮಲೆನಾಡುಟುಡೆಗೆ ವರದಿ ಲಭ್ಯವಾಗಿದೆ. ಘಟನೆಯ ವಿವರ ಗಮನಿಸುವುದಾದರೆ, ಈ ಕುರಿತು ಮೃತೆಯ ಕುಟುಂಬದ ದೂರಿನ…

in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜೀವನದಲ್ಲಿ ಎಂತದ್ದೆ ಸಮಸ್ಯೆ ಇದ್ದರೂ ಸಾವಿನ ದಾರಿಯನ್ನು ತುಳಿಯಬಾರದು. ಆದರೆ ಇಲ್ಲೊಬ್ಬ ಯುವತಿ ನಗರದ ಶರಾವತಿ ನಗರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಿನ್ನೆದಿನ ಮಲೆನಾಡುಟುಡೆಗೆ ವರದಿ ಲಭ್ಯವಾಗಿದೆ.

ಘಟನೆಯ ವಿವರ ಗಮನಿಸುವುದಾದರೆ, ಈ ಕುರಿತು ಮೃತೆಯ ಕುಟುಂಬದ ದೂರಿನ ಮೇರೆಗೆ ಪತಿ ವಿರುದ್ಧ ಕಿರುಕುಳ ನೀಡಿದ ಆರೋಪದಡಿ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ನಂದಿನಿ ಲವ್ ಮ್ಯಾರೇಜ್ ಆಗಿದ್ದರು, ನಾಲ್ಕು ವರ್ಷದ ಹಿಂದೆ ಶಿಕಾರಿಪುರ ಮೂಲದ ಸ್ಟೀವನ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ರು. ಆನಂತರ ಶಿಕಾರಿಪುರದಿಂದ ಪ್ಯಾಮಿಲಿ ಶಿವಮೊಗ್ಗಕ್ಕೆ ಶಿಫ್ಟ್ ಆಗಿತ್ತು.

ಈ ಮಧ್ಯೆ ನಂದಿನಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಘಟನೆಗೆ ಪತಿಯೇ ಕಾರಣ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಇನ್ನೂ ನಂದಿನಿಯ ಪತಿ ನಾಪತ್ತೆಯಾಗಿದ್ದಾರೆ.

END OF STORY

ajjimane ganesh

Senior Journalist | Malenadu Today
✓ Verified Journalist