ಬಿ.ಹೆಚ್​.ರೋಡ್​ನಲ್ಲಿಯೇ ಕಳವು! ಮೊಬೈಲ್​ ಸ್ಟೋರ್​ನಿಂದ, 20 ಐಫೋನ್‌ ಸೇರಿ 32 ಲಕ್ಷದ ಫೋನ್​ ಕಳ್ತನ!

Published: 29 ಜುಲೈ 2026, 5:52 ಅಪರಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

Unilet Store in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಬಿ.ಹೆಚ್. ರಸ್ತೆಯಲ್ಲಿರುವ ಯುನಿಲೆಟ್ ಅಪ್ಲೈಯನ್ಸಸ್ ಸ್ಟೋರ್‌ಗೆ ನುಗ್ಗಿದ ಕಳ್ಳರು ಬರೋಬ್ಬರಿ 31,95,946 ರೂಪಾಯಿ ಮೌಲ್ಯದ 40 ಹೊಸ ಮೊಬೈಲ್ ಫೋನ್‌ ಕಳವು ಮಾಡಿದ್ದಾರೆ. ಕಳೆದ ಜುಲೈ 21 ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ದೀಪಕ್ ಪೆಟ್ರೋಲ್…

Unilet Store in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಬಿ.ಹೆಚ್. ರಸ್ತೆಯಲ್ಲಿರುವ ಯುನಿಲೆಟ್ ಅಪ್ಲೈಯನ್ಸಸ್ ಸ್ಟೋರ್‌ಗೆ ನುಗ್ಗಿದ ಕಳ್ಳರು ಬರೋಬ್ಬರಿ 31,95,946 ರೂಪಾಯಿ ಮೌಲ್ಯದ 40 ಹೊಸ ಮೊಬೈಲ್ ಫೋನ್‌ ಕಳವು ಮಾಡಿದ್ದಾರೆ. ಕಳೆದ ಜುಲೈ 21 ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ.

ದೀಪಕ್ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಈ ಯುನಿಲೆಟ್ ಸ್ಟೋರ್‌ನಲ್ಲಿ ಜುಲೈ 21 ರಂದು ಘಟನೆ ನಡೆದಿದ್ದು, ಮರುದಿನ ಸ್ಟೋರ್‌ನ ಹೆಚ್.ಎ. ಮ್ಯಾನೇಜರ್ ಕುಶಾಲ್ ಶೆಟರ್ ಓಪನ್ ಮಾಡಲು ಮುಂದಾದಾಗ ವಿಚಾರ ಗೊತ್ತಾಗಿದೆ. ಬಳಿಕ ಪರಿಶೀಲನೆ ನಡೆಸಿದಾಗ, ರಾಕ್‌ಗಳಲ್ಲಿ ಇರಿಸಲಾಗಿದ್ದ ಹೊಸ ಮೊಬೈಲ್‌ಗಳು ಕಳುವಾಗಿರುವುದು ಗೊತ್ತಾಗಿದೆ.

ಸ್ಟೋರ್‌ನ ಮುಂಭಾಗದಲ್ಲಿರುವ ಶೆಟರ್‌ನ ಎರಡು ಕಡೆಯ ಬೀಗ ಮುರಿದು ಒಳ್ಳನುಗ್ಗಿರುವ ಕಳ್ಳರು, ಫೋನ್​ಗಳನ್ನ ಮಾತ್ರ ಕದ್ದು ಅದರ ಬಾಕ್ಸ್​ಗಳನ್ನ ಅಲ್ಲಿಯೇ ಬಿಸಾಡಿ ಹೋಗಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಸ್ಟೋರ್‌ನಲ್ಲಿದ್ದ ಒಟ್ಟು 40 ಮೊಬೈಲ್‌ಗಳು ಕಳುವಾಗಿದ್ದು, ಈ ಪೈಕಿ 20,28,900 ರೂಪಾಯಿ ಮೌಲ್ಯದ 20 ಐಫೋನ್‌ಗಳು ಸೇರಿವೆ. ಇದರ ಜೊತೆಗೆ 7,72,980 ರೂಪಾಯಿ ಮೌಲ್ಯದ 12 ಒಪ್ಪೋ ಮೊಬೈಲ್‌ ಕದ್ದಿದ್ದಾರೆ.

ಘಟನೆ ಸಂಬಂಧ ಜುಲೈ 22 ರಂದು ರಾತ್ರಿ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಆಗಿದ್ದು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023 ರ ಕಲಂ 331(4) ಮತ್ತು 305 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರು ಇನ್ನೂ ಪತ್ತೆಯಾಗಿಲ್ಲ.

END OF STORY

ajjimane ganesh

Senior Journalist | Malenadu Today
✓ Verified Journalist