ಮಂಡಗದ್ದೆ ಪಕ್ಷಿಧಾಮದ ಬಳಿ ಟಾಟಾ ಸಫಾರಿಗೆ ಡಿಕ್ಕಿ ಹೊಡೆದ ಕಾರು: ಪ್ರಯಾಣಿಕರಿಗೆ ಗಾಯ!

Published: 29 ಜುಲೈ 2026, 12:07 ಅಪರಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

Car Accident ಶಿವಮೊಗ್ಗ: ಟಾಟಾ ಸಫಾರಿ ಕಾರಿಗೆ ಹ್ಯುಂಡೈ ಗ್ರಾಂಡ್ ಐ-10 ಕಾರು ಡಿಕ್ಕಿ ಹೊಡೆದ ಪರಿಣಾಮ, ಹ್ಯುಂಡೈ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಮಂಡಗದ್ದೆ ಪಕ್ಷಿಧಾಮದ ಬಳಿ ಸಂಭವಿಸಿದೆ. ಶಿವಮೊಗ್ಗ: ಸೈಬರ್ ವಂಚನೆಗೆ ಒಳಗಾಗಿದ್ದ ಶಿಕಾರಿಪುರದ ಯುವಕನಿಗೆ 5.23 ಲಕ್ಷ ವಾಪಸ್ ಕೊಡಿಸಿದ ಪೊಲೀಸರು ನಿನ್ನೆ ಸಂಜೆ 4:30 ರ ಸುಮಾರಿಗೆ ಟಾಟಾ ಸಫಾರಿ…

Car Accident ಶಿವಮೊಗ್ಗ: ಟಾಟಾ ಸಫಾರಿ ಕಾರಿಗೆ ಹ್ಯುಂಡೈ ಗ್ರಾಂಡ್ ಐ-10 ಕಾರು ಡಿಕ್ಕಿ ಹೊಡೆದ ಪರಿಣಾಮ, ಹ್ಯುಂಡೈ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಮಂಡಗದ್ದೆ ಪಕ್ಷಿಧಾಮದ ಬಳಿ ಸಂಭವಿಸಿದೆ.

ಶಿವಮೊಗ್ಗ: ಸೈಬರ್ ವಂಚನೆಗೆ ಒಳಗಾಗಿದ್ದ ಶಿಕಾರಿಪುರದ ಯುವಕನಿಗೆ 5.23 ಲಕ್ಷ ವಾಪಸ್ ಕೊಡಿಸಿದ ಪೊಲೀಸರು

ನಿನ್ನೆ ಸಂಜೆ 4:30 ರ ಸುಮಾರಿಗೆ ಟಾಟಾ ಸಫಾರಿ ಕಾರು ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಅದೇ ವೇಳೆಗೆ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಗ್ರಾಂಡ್ ಐ-10 ಕಾರು ಚಾಲಕನ ನಿಯಂತ್ರಣ ತಪ್ಪಿ ಟಾಟಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಹ್ಯುಂಡೈ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾಳೂರು ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ.

END OF STORY

Prathapa thirthahalli

Senior Journalist | Malenadu Today
✓ Verified Journalist