BJP ಶಿವಮೊಗ್ಗ : ಪೋಲೀಸ್ ಇಲಾಖೆಯ ವಾಹನದ ಮೇಲೇರಿ ಕಾಂಗ್ರೆಸ್ ಭಾವುಟವನ್ನು ಹಿಡಿದು ಪೋಲೀಸ್ನವರು ನಮ್ಮ ಬೆಂಬಲಕ್ಕೆ ಇದ್ದಾರೆ ಎಂಬುದರ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಭಯದ ವಾತಾವರಣವನ್ನು ಸೃಷ್ಟಿಸಿರುತ್ತಾರೆ, ಕಾಂಗ್ರೇಸ್ ಕಾರ್ಯಕರ್ತರ ಈ ಗೂಂಡ ವರ್ತನೆ ಮತ್ತು ಪೋಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ತನಿಖೆ ನೆಡೆಸಬೇಕು ಎಂದು ಜಿಲ್ಲಾ ಬಿಜೆಪಿ ಎಸ್ ಪಿ ನಿಖಿಲ್ ಬಿ ಅವರಿಗೆ ಮನವಿ ಮಾಡಿದೆ.
ಶಿವಮೊಗ್ಗ: ಸಚಿವ ಸಂಪುಟ ವಿಸ್ತರಣೆ ವಿಳಂಬ, ಕೆ ಎಸ್ ಈಶ್ವರಪ್ಪ ಹೇಳಿದ್ದೇನು
ಹೌದು ಇಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಎಸ್ ಕೆ ಜಗದೀಶ್ ನೇತೃತ್ವದಲ್ಲಿ ಇಂದು ಬಿಜೆಪಿಯ ಪ್ರಮುಖರು ಎಸ್ ಪಿ ಕಚೇರಿಯಲ್ಲಿ ಎಸ್ ನಿಖಿಲ್ ಬಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿಯಲ್ಲಿರುವಂತೆ, ಜುಲೈ 23 ರರ ಬೆಳಿಗ್ಗೆ 11.26 ರ ಸುಮಾರಿಗೆ, ಕಾಂಗ್ರೆಸ್ ಕಾರ್ಯಕರ್ತರು ಪೂರ್ವ ಅನುಮತಿ ಇಲ್ಲದೆ, ನಗರ ಬಿಜೆಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ನುಗ್ಗಿದ್ದಾರೆ. ಕಾರ್ಯಾಲಯಕ್ಕೆ ನುಗ್ಗುವ ಸಂದರ್ಭದಲ್ಲಿ ಕಾರ್ಯಾಲಯದ ಮೇಲೆ ಚಪ್ಪಲಿ ಎಸೆದಿರುವುದು, ಕಛೇರಿಯ ಪೀಠೋಪಕರಣವನ್ನು ಧ್ವಂಸ ಮಾಡಿರುವುದು, ಕಛೇರಿಗೆ ನುಗ್ಗುವ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಗಳು ಮತ್ತು ಸರ್ಕಲ್ ಇನ್ಸೆಪೆಕ್ಟರ್ಗಳ ಸಮ್ಮುಖದಲ್ಲಿ ಜಿಲ್ಲಾ ಬಿಜೆಪಿಗೆ ನುಗ್ಗಿ ಬಂಟಿಂಗ್ಸ್ ಹರಿದು, ಖರ್ಚಿಯನ್ನು ಮುರಿದು, ದ್ವಿಚಕ್ರ ವಾಹನಗಳಿಗೆ ಹಾನಿ ಮಾಡಿ, ಕಾರ್ಯಾಲಯ ಕಾರ್ಯದರ್ಶಿ ಚಿದಾನಂದ ಮತ್ತು ಯುವಮೋರ್ಚಾ ಅಧ್ಯಕ್ಷರು / ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಬಿದರೆಯವರ ಮೇಲೆ ಹಲ್ಲೆ ನೆಡಿಸಿರುತ್ತಾರೆ.
ಈ ಸಂದರ್ಭದಲ್ಲಿ ಪೋಲೀಸ್ನವರು ರಕ್ಷಣೆಯನ್ನು ನೀಡುವುದರಲ್ಲಿ ಸಂಪೂರ್ಣ ವಿಫಲವಾಗಿರುತ್ತದೆ. ಪೋಲೀಸ್ ಇಲಾಖೆಯ ವಾಹನದ ಮೇಲೇರಿ ಕಾಂಗ್ರೇಸ್ ಭಾವುಟವನ್ನು ಹಿಡಿದು ಪೋಲೀಸ್ನವರು ನಮ್ಮ ಬೆಂಬಲಕ್ಕೆ ಇದ್ದಾರೆ ಎಂಬುದರ ಮೂಲಕ ಭಯದ ವಾತಾವರಣವನ್ನು ಸೃಷ್ಟಿಸಿರುತ್ತಾರೆ. ಕಾಂಗ್ರೇಸ್ ಕಾರ್ಯಕರ್ತರ ಈ ಗೂಂಡ ವರ್ತನೆ ಮತ್ತು ಪೋಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ತನಿಖೆ ನೆಡೆಸಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಒತ್ತಾಯಿಸುತ್ತದೆ.
ಈ ದಿನ ಕಾಂಗ್ರೇಸ್ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿರುವ ಈ ಘಟನೆಯ ಸಂಪೂರ್ಣ ದೃಶ್ಯವನ್ನು ತಮ್ಮದೇ ಇಲಾಖೆಯ ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
