01 ತಿಂಗಳಿನಿಂದ ಅನಾಥವಾಗಿದ್ದ ತಾಯಿ ಮತ್ತು ಮಗುವಿಗೆ ರಕ್ಷಣೆ

ಹಂಚಿಕೊಳ್ಳಿ
WhatsApp Facebook X Telegram
ಒಂದು ತಿಂಗಳಿನಿಂದ ಅನಾಥವಾಗಿದ್ದ ತಾಯಿ ಮತ್ತು ಮಗುವಿಗೆ ರಕ್ಷಣೆ

akkapade / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಕ್ಕ ಪಡೆಯ ಅಧಿಕಾರಿಗಳು ಕೆಎಸ್​ಆರ್​ಟಿಸಿ ಬಸ್​ ಸ್ಟಾಂಡ್​ನಲ್ಲಿ ಕಳೆದೊಂದು ತಿಂಗಳಿನಿಂದ ಅನಾಥವಾಗಿ ಆಶ್ರಯ ಪಡೆದಿದ್ದ ತಾಯಿ ಹಾಗೂ ಮಗಳನ್ನು ರಕ್ಷಣೆ ಮಾಡಿದ್ದಾರೆ.

ಎಎಸ್ಐ ಹೇಮಾವತಿ ಹಾಗೂ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಅಶ್ವಿನಿ ಅವರು ಸಿಟಿ ಪೆಟ್ರೋಲಿಂಗ್​ನಲ್ಲಿದ್ದಾಗ ಈ ಘಟನೆ ನಡೆದಿದೆ. ನಗರದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತೆರಳಿದ್ದ ಅವರಿಗೆ ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ಅನಾಥ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ.

ಬಳಿಕ ವಿಷಯ ತಿಳಿದು ಅಧಿಕಾರಿಗಳು ಆಕೆಯನ್ನು ವಿಚಾರಿಸಿದ್ದಾರೆ., ತನಗೆ ತಂದೆ ಕಡೆಯವರು, ಗಂಡನ ಕಡೆಯವರು ಅಥವಾ ಸಂಬಂಧಿಕರು ಇಲ್ಲವೆಂದು ವಿಚಾರಣೆ ವೇಳೆ ಮಹಿಳೆ ತಿಳಿಸಿದ್ದಾರೆ. ಆದರೆ ಆಕೆಯನ್ನು ಸುರಕ್ಷತೆಯಿಲ್ಲ ಸಿಬ್ಬಂದಿ ಅಲ್ಲಿಯೇ ಬಿಡುವಂತಿರಲಿಲ್ಲ. ಮೇಲಾಗಿ ಮಗುವೊಂದು ಇರುವುದು ಅಕ್ಕಾಪಡೆ ಸಿಬ್ಬಂದಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ.

ಹೀಗಾಗಿ ತಡಮಾಡದೇ ತಾಯಿ ಮತ್ತು ಮಗುವಿನ ಸುರಕ್ಷತೆಯ ಹಿತದೃಷ್ಟಿಯಿಂದ ಪೊಲೀಸರು ಅವರನ್ನು ಆಲ್ಕೊಳದಲ್ಲಿರುವ ಸಖಿ ಕೇಂದ್ರಕ್ಕೆ ಕರೆದೊಯ್ದು ಸುರಕ್ಷಿತವಾಗಿ ಆಶ್ರಯ ಕಲ್ಪಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor