SHIVAMOGGA NEWS TODAY

ಕಲುಬುರ್ಗಿ : ಜೈಲಿನಿಂದ ಎಸ್ಕೇಪ್​ ಆದ ಆರೋಪಿಗಳು: ಜೈಲಿನ ಸ್ಥಿತಿಗತಿ ಬಗ್ಗೆ ಶಿಗ್ಲಿ ಬಸ್ಯಾ ಹೇಳಿದ್ದೇನು

Prathapa thirthahalli ನವೀಕರಣ: 16 ಜುಲೈ 2026, 1:56 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Jail Escape ಶಿವಮೊಗ್ಗ: ಇತ್ತೀಚೆಗೆ ಗುಲ್ಬರ್ಗ ಜೈಲ್​ನಿಂದ 3 ಸಜಾ ಬಂಧಿಗಳು ಪರಾರಿಯಾದ ಬೆನ್ನಲ್ಲೆ ರಾಜ್ಯದ ಕಾರಗೃಹಗಳ ಭದ್ರಾತಾ ಸ್ಥಿತಿಗತಿಗಳನ್ನು ಪ್ರಶ್ನಿಸುವಂತಾಗಿದೆ. ಇದರ ನಡುವೆ ರಾಜ್ಯದ ವಿವಿಧ ಜೈಲುಗಳಲ್ಲಿ 33 ವರ್ಷ ಹಾಗೂ ಗುಲ್ಬರ್ಗ ಜೈಲಿನಲ್ಲಿ 10 ತಿಂಗಳು ಕಳೆದಿರುವ ಮಾಜಿ ಕಳ್ಳ ಶಿಗ್ಲಿ ಬಸ್ಯಾ ಜೈಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಜೈಲಿನಲ್ಲಿ ಇದ್ದುಕೊಂಡೇ 262 ಕಳ್ಳತನ ಪ್ರಕರಣಗಳನ್ನು ತಾನೇ ವಾದ ಮಾಡಿ ಗೆದ್ದು, ಶಿಗ್ಲಿ ಬಸ್ಯಾ ಈಗ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ಗುಲ್ಬರ್ಗ ಜೈಲಿನ ಬೆಳವಣಿಗೆ ಬಗ್ಗೆ ಮಾತನಾಡಿರುವ ಅವರು ಜೈಲು ಅವ್ಯವಸ್ಥೆಯನ್ನು ಎತ್ತಿ ಹಿಡಿದಿದ್ದಾರೆ.

ಈ ಕುರಿತು ಮಲೆನಾಡು ಟುಡೆಗೆ ಪ್ರತಿಕ್ರಿಯಿಸಿರುವ ಶಿಗ್ಲಿ ಬಸ್ಯಾ, ಗುಲ್ಬರ್ಗ ಜೈಲಿನಲ್ಲಿ ಮೂವರು ಖೈದಿಗಳು ಏಣಿ ಇಟ್ಟು, ಬಟ್ಟೆ ಕಟ್ಟಿ ತಪ್ಪಿಸಿಕೊಂಡಿರುವ ವಿಚಾರ ನನಗೆ ತಿಳಿಯಿತು. ನಾನು ಕೂಡ ಅದೇ ಜೈಲಿನಲ್ಲಿ 10 ತಿಂಗಳು ಕಳೆದು ಬಂದಿದ್ದೇನೆ. ಆ ಜೈಲು ಕೇವಲ ಜೈಲಲ್ಲ, ಅದು ಒಂದು ನರಕ. ಕೇವಲ ಗುಲ್ಬರ್ಗ ಮಾತ್ರವಲ್ಲ, ಶಿವಮೊಗ್ಗ ಹೊರತು ಪಡಿಸಿ ರಾಜ್ಯದ ವಿವಿಧ ಜೈಲುಗಳು ಇವತ್ತು ನರಕಗಳಾಗಿ ಮಾರ್ಪಟ್ಟಿವೆ. ಅಲ್ಲಿ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಖೈದಿಗಳು ಪರಾರಿಯಾಗಲು ಜೈಲಿನ ಅಧಿಕಾರಿಗಳು ಮತ್ತು ಪೊಲೀಸರ ಬೇಜವಾಬ್ದಾರಿಯೇ ಮುಖ್ಯ ಕಾರಣ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ. ಜೈಲಿನಲ್ಲಿ ನೀಡಲಾಗುವ ಮಾನಸಿಕ ಹಿಂಸೆಯಿಂದಾಗಿ ಖೈದಿಗಳು ಇಂತಹ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅಲ್ಲಿನ ಕಾರ್ಪೆಂಟ್ರಿ ಫ್ಯಾಕ್ಟರಿ ಮುಂತಾದ ಕೆಲಸದ ಜಾಗಗಳಿಂದ ತಮಗೆ ಬೇಕಾದ ಸವಲತ್ತುಗಳನ್ನು ಬಳಸಿಕೊಂಡು, ಅದನ್ನು ಆಯುಧಗಳನ್ನಾಗಿ ಬಳಸಿಕೊಳ್ಳುತ್ತಾರೆ. ಅದರ ಮೂಲಕ ಜೈಲಿನಲ್ಲಿ ಕಂಬಿ ಗೋಡೆಗಳನ್ನು ಕೊರೆಯುವುದು, ಜೈಲಿನ ಹೊರಗಡೆ ಕೆಲಸ ಮಾಡುವ ಕೈಡದಿಗಳಿಂದ ಮಾಹಿತಿ ಪಡೆದು ತಪ್ಪಿಸಿಕೊಳ್ಳಲು ಸ್ಕೆಚ್​ ಹಾಕುವುದು ಸಾಮಾನ್ಯವಾಗಿತ್ತು, ಸಜಾ ಬಂಧಿ ಕರ್ತವ್ಯ ನಿರ್ವಹಿಸುವ ಸ್ಥಳದ ಬಗ್ಗೆ ಜೈಲು ಸಿಬ್ಬಂದಿಗಳು ಹದ್ದಿನ ಕಣ್ಣಿಡಬೇಕಿದೆ

ಜೈಲುಗಳಲ್ಲಿ ಗಾಂಜಾ, ಅಫೀಮು ಮತ್ತು ಶಸ್ತ್ರಾಸ್ತ್ರಗಳ ಹಾವಳಿ!

ಜೈಲಿನೊಳಗಿನ ಕರಾಳ ಮುಖವನ್ನು ಬಿಚ್ಚಿಟ್ಟ ಬಸ್ಯಾ, ಖೈದಿಗಳಿಗೆ ಮಾನಸಿಕ ಹಿಂಸೆ ನೀಡುವುದರ ಜೊತೆಗೆ, ಜೈಲಿನೊಳಗೆ ನೈಟ್ರೋವೆಟ್ 10mg ಮಾತ್ರೆಗಳು, ಗಾಂಜಾ, ಚರಸ್, ಹಾಗೂ ಅಫೀಮು ಮುಂತಾದ ಮಾದಕ ದ್ರವ್ಯಗಳು ಸುಲಭವಾಗಿ ಸಿಗುತ್ತಿವೆ. ಇದರಿಂದ ಖೈದಿಗಳು ಮಾನಸಿಕವಾಗಿ ಮೈಂಡ್ ಚೇಂಜ್ ಮಾಡಿಕೊಳ್ಳುತ್ತಿದ್ದಾರೆ. ನಾನು ಜೈಲಿನಲ್ಲಿದ್ದಾಗ ಕೊಲೆಗಳಾಗಿದ್ದನ್ನು ನೋಡಿದ್ದೇನೆ ಎಂದರು.

ದೂರದ ಊರುಗಳಿಂದ ಬರುವ ಖೈದಿಗಳ ಸಂಬಂಧಿಕರಿಗೆ ಸರಿಯಾದ ಎಂಟ್ರಿ ಸಿಗುವುದಿಲ್ಲ. ಎಸ್‌ಕಾರ್ಟ್​ ವ್ಯವಸ್ಥೆ ಇರುವುದಿಲ್ಲ. ಕಾನೂನಾತ್ಮಕವಾಗಿ ಸಿಗಬೇಕಾದ ಯಾವುದೇ ಸವಲತ್ತುಗಳು ಸಿಗದೆ ನೂರಾರು ಸಮಸ್ಯೆಗಳಿಂದ ನೊಂದಾಗ ಖೈದಿಗಳು ಮಾನಸಿಕವಾಗಿ ಜಿಗುಪ್ಸೆಗೊಂಡು ಜೈಲಿನಿಂದ ಓಡಿಹೋಗುವ ನಿರ್ಧಾರ ಮಾಡುತ್ತಾರೆ. ಹೀಗೆ ಓಡಿಹೋಗುವಾಗ ಪೊಲೀಸರ ಗುಂಡಿಗೆ ಬಲಿಯಾಗುವ ಸಾಧ್ಯತೆಯೂ ಇರುತ್ತದೆ ಎಂದರು.

Jail Escape ಶಿಕ್ಷೆಯಿಂದ ಶಿಕ್ಷಣ ಕೊಡುವ ವ್ಯವಸ್ಥೆಯಾಗಲಿ

ಅಪರಾಧಿಗಳನ್ನು ಜೈಲಿನಲ್ಲಿಡುವ ಉದ್ದೇಶ ಅವರಲ್ಲಿ ಪರಿವರ್ತನೆ ತರುವುದಾಗಿರಬೇಕು. ಪರಿವರ್ತನೆ ಜಗದ ನಿಯಮ ಎನ್ನುವಂತೆ ಜೈಲುಗಳಲ್ಲಿ ವ್ಯವಸ್ಥೆ ಬದಲಾಗಬೇಕು. ಇವತ್ತು ಶಿಕ್ಷೆಯಿಂದ ಶಿಕ್ಷಣ ಕೊಡಬೇಕಾದ ಜೈಲುಗಳು ನರಕಗಳಾಗಿವೆ. ಅಪರಾಧಿಗಳಿಗೆ ಕೇವಲ ಶಿಕ್ಷೆ ನೀಡದೆ, ಅವರಿಗೆ ಸೂಕ್ತ ಶಿಕ್ಷಣ ನೀಡಿದರೆ ಯಾವ ಖೈದಿಯೂ ಜೈಲಿನಿಂದ ಓಡಿಹೋಗಲು ಪ್ರಯತ್ನಿಸುವುದಿಲ್ಲ. ಅಪರಾಧಿಗಳನ್ನು ಯಾವ ರೀತಿ ಸುಧಾರಿಸಿ, ಕಾಪಾಡಿಕೊಂಡು ಹೋಗಬೇಕು ಎಂಬುದನ್ನು ಜೈಲು ಅಧೀಕ್ಷಕರು ಹಾಗೂ ಜೈಲು ಐಜಿಗಳು ಇನ್ನು ಮುಂದಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಶಿಗ್ಲಿ ಬಸ್ಯಾ ಹೇಳಿದ್ದಾರೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.