ಶಿವಮೊಗ್ಗ: ಕಾಲೇಜು ವಿದ್ಯಾರ್ಥಿನಿಯ ಫೋಟೋ ಎಡಿಟ್ ಮಾಡಿ ಅತ್ಯಾಚಾರ; ಕೇಸ್ ದಾಖಲು!

ಹಂಚಿಕೊಳ್ಳಿ
WhatsApp Facebook X Telegram
Shivamogga
Shivamogga

Shivamogga ಶಿವಮೊಗ್ಗ: ಇನ್‌ಸ್ಟಾಗ್ರಾಮ್ ಮುಖೇನ ಪರಿಚಯವಾದ ಕಾಲೇಜು ವಿದ್ಯಾರ್ಥಿನಿಯ ಫೋಟೋವನ್ನು ಅಸಭ್ಯವಾಗಿ ಎಡಿಟ್ ಮಾಡಿ, ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಆಕೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಘಟನೆ ಶಿವಮೊಗ್ಗ ಜಿಲ್ಲೆಯ ತಾಲೂಕೊಂದರಲ್ಲಿ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಸಹಕರಿಸಿದ ಹಾಗೂ ಯುವತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ ಒಟ್ಟು ಮೂವರು ಆರೋಪಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶಿವಮೊಗ್ಗ: ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ. ಬೃಹತ್ ಪ್ರತಿಭಟನೆ, ಸಾವಿರಾರು ವಿದ್ಯಾರ್ಥಿಗಳು ಭಾಗಿ

ನೊಂದ ಯುವತಿಯು ಸ್ಥಳೀಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವ್ಯಾಸಾಂಗ ಮಾಡುತ್ತಿದ್ದಾಳೆ. ಸುಮಾರು ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಮೊದಲನೇ ಆರೋಪಿಯು, ಯುವತಿ ಈ ಹಿಂದೆ ತನಗೆ ಕಳುಹಿಸಿದ್ದ ಫೋಟೋವನ್ನು ತನ್ನ ಫೋಟೋದೊಂದಿಗೆ ಅಸಭ್ಯವಾಗಿ ಎಡಿಟ್ ಮಾಡಿಕೊಂಡಿದ್ದನು. ಮೇ ತಿಂಗಳಿನಲ್ಲಿ ಯುವತಿ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಕಾಡಿನ ಪ್ರದೇಶಕ್ಕೆ ಕರೆದೊಯ್ದಿದ್ದನು. ನನ್ನೊಂದಿಗೆ ಸಹಕರಿಸದಿದ್ದರೆ ಎಡಿಟ್ ಮಾಡಿದ ಫೋಟೋವನ್ನು ನಿಮ್ಮ ತಂದೆಗೆ ಕಳುಹಿಸಿ, ಫೇಸ್‌ಬುಕ್‌ನಲ್ಲಿ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಆಕೆಯ ಮೇಲೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದನು ಎಂದು ಆರೋಪಿಸಲಾಗಿದೆ. 

ತದನಂತರ 2-3 ಬಾರಿ ಇದೇ ರೀತಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.  ಈ ಅ ಪರಿಸ್ಥಿತಿಯ ಲಾಭ ಪಡೆದ ಮೊದಲ ಆರೋಪಿಯ ಸಹಚರ ಹಾಗೂ ಎರಡನೇ ಆರೋಪಿಯು ಯುವತಿಯನ್ನು ನಡುರಸ್ತೆಯಲ್ಲಿ ತಡೆದು ನಿಲ್ಲಿಸಿದ್ದನು. ನಿನ್ನ ಮತ್ತು ಅವನ ವಿಚಾರ ನನಗೆ ಗೊತ್ತಿದೆ ಎಂದು ಹೇಳಿ ಆಕೆಯ ಮೈಕೈ ಮುಟ್ಟಿ ವಿಕೃತಿ ಮೆರೆಯಲು ಯತ್ನಿಸಿದ್ದಾನೆ. ಯುವತಿ ಇದಕ್ಕೆ ಪ್ರತಿರೋಧ ಒಡ್ಡಿದಾಗ, ನಾನು ಕರೆದಾಗ ಬರದಿದ್ದರೆ ಈ ರಹಸ್ಯವನ್ನು ಇಡೀ ಊರಿಗೆ ತಿಳಿಸಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಇವರಿಬ್ಬರ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಮೂರನೇ ಆರೋಪಿಯೂ ಈ ವಿಷಯ ತಿಳಿದು ಯುವತಿಯ ಮೊಬೈಲ್ ಸಂಖ್ಯೆ ಪಡೆದುಕೊಂಡು, ಆಕೆಗೆ ನಿರಂತರವಾಗಿ ಅಸಭ್ಯ ಹಾಗೂ ಅವಾಚ್ಯ ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡಲಾರಂಭಿಸಿದ್ದನು ಎನ್ನಲಾಗಿದೆ

ವಿದ್ಯಾರ್ಥಿನಿಯು ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಮೂರನೇ ಆರೋಪಿಯು ಹಿಂಬಾಲಿಸುತ್ತಾ ಕಿರುಕುಳ ನೀಡುತ್ತಿದ್ದರಿಂದ ನೊಂದ ಯುವತಿಯು ಅಂತಿಮವಾಗಿ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ಪೊಲೀಸರು  ವಿವಿಧ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಮತ್ತೋರ್ವ ಆರೋಪಿಯ ವಿರುದ್ಧವೂ ಕಾನೂನು ಕ್ರಮ ಮುಂದುವರಿದಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor