ಆತ್ಮ ಯೋಜನೆಯಡಿ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪೂರ್ತಿ ವಿವರ ಓದಿ

ಹಂಚಿಕೊಳ್ಳಿ
WhatsApp Facebook X Telegram
Job Fair in Shivamogga Job Fair 2026 Post Office Recruitment ಶಿವಮೊಗ್ಗ ಅಂಚೆ ಇಲಾಖೆಯಲ್ಲಿ 57 ಹುದ್ದೆಗಳ ಭರ್ತಿShimoga Home Guards Recruitment 2026 RRB Group D RecruitmentRRB Group D RecruitmentAlvas Udyoga Mela ಶಿಕಾರಿಪುರದಲ್ಲಿ ಫೆ.20, 21ಕ್ಕೆ ಆಳ್ವಾಸ್​ ಬೃಹತ್ ಉದ್ಯೋಗ ಮೇಳ 75 ಕ್ಕೂ ಹೆಚ್ಚು ಕಂಪನಿ ಭಾಗಿ Alvas Udyoga Mela in Shikaripura on Feb 20, 21: Alvas Foundation & Vivekananda Institution
Job Fair in Shivamogga Job Fair 2026 Post Office Recruitment Shimoga Home Guards Recruitment 2026 RRB Group D Recruitment Alvas Udyoga Mela ಶಿಕಾರಿಪುರದಲ್ಲಿ ಫೆ.20, 21ಕ್ಕೆ ಆಳ್ವಾಸ್​ ಬೃಹತ್ ಉದ್ಯೋಗ ಮೇಳ 75 ಕ್ಕೂ ಹೆಚ್ಚು ಕಂಪನಿ ಭಾಗಿ Alvas Udyoga Mela in Shikaripura on Feb 20, 21: Alvas Foundation & Vivekananda Institution

ATMA scheme recruitment / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಕೃಷಿ ಇಲಾಖೆಯಲ್ಲಿ 2026-26 ನೇ ಸಾಲಿಗೆ ಆತ್ಮ ಯೋಜನೆಯ ಅಡಿಯಲ್ಲಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹಾಗೂ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳನ್ನು ನೇರ ಗುತ್ತಿಗೆಯ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಒಂದು ವರ್ಷದ ಅವಧಿಗೆ ಸಿಬ್ಬಂದಿಯ ಸೇವೆಯನ್ನು ಪಡೆಯಲು ಇಲಾಖೆಯು ಉದ್ದೇಶಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳ ವಯಸ್ಸು 45 ವರ್ಷಗಳನ್ನು ಮೀರಿರಬಾರದು.
  • ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಒಟ್ಟು 10 ಸ್ಥಾನಗಳು ಖಾಲಿ ಇದ್ದು, ಇವುಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳ ಕಸಬಾ ರೈತ ಸಂಪರ್ಕ ಕೇಂದ್ರಗಳು ಹಾಗೂ ಹಳ್ಳಿಕೆರೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಿಯೋಜಿಸಲಾಗುವುದು.
  • ಈ ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ ಪಡೆದಿರಬೇಕು ಹಾಗೂ ಕನಿಷ್ಠ ಒಂದು ವರ್ಷದ ಕಾರ್ಯಾನುಭವ ಹೊಂದಿರಬೇಕು ಎಂದು ನಿಗದಿಪಡಿಸಲಾಗಿದೆ.

ಹೊಸನಗರ ತಾಲೂಕಿನಲ್ಲಿ ಖಾಲಿ ಇರುವ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ ಅಥವಾ ಅದಕ್ಕೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರಬೇಕು. ಇದರ ಜೊತೆಗೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕು.

ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಹಳೇ ತೀರ್ಥಹಳ್ಳಿ ರಸ್ತೆಯಲ್ಲಿರುವ ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 24 ರ ಒಳಗೆ ಇದೇ ಕಚೇರಿಗೆ ಸಲ್ಲಿಸಬೇಕು ಎಂದು ಯೋಜನಾ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor