Sagara Town Police ಶಿವಮೊಗ್ಗ : ಸಾಗರ ಟೌನ್ ಪೊಲೀಸ್ ವ್ಯಾಪ್ತಿಯ ಗ್ಯಾರೇಜ್ ರಸ್ತೆಯಲ್ಲಿನ ಪಕ್ಕದ ಗೋಡಾನ್‌ನಲ್ಲಿ ಗಾಂಜಾ ಹಾಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ: ತುಂಗಾ ಜಲಾಶಯ ಭರ್ತಿ! ಎಷ್ಟಿದೆ ನದಿಯ ಒಳಹರಿವು
ಜುಲೈ 08 ರಂದು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೃಷ್ಣ ಗ್ಯಾರೇಜ್ ರಸ್ತೆಯಲ್ಲಿ, ಮನೆಯೊಂದರ ಎದುರಿಗಿರುವ ಗೋಡೌನ್‌ನಲ್ಲಿ ಯಾರೋ ಒಬ್ಬ ವ್ಯಕ್ತಿಯು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಅಕ್ಬರ್ ಬೇಗ್ (40 ವರ್ಷ) ಎಂಬಾತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ.
ಬಂಧಿತ ಆರೋಪಿತನಿಂದ ಪೊಲೀಸರು 7,500 ರೂಪಾಯಿ. ಮೌಲ್ಯದ 156 ಗ್ರಾಂ ತೂಕದ ಗಾಂಜಾವನ್ನು ಹಾಗೂ 25,000ರೂಪಾಯಿ. ಮೌಲ್ಯದ 10 ಗ್ರಾಂ 750 ಮಿ.ಲಿ. ಗ್ರಾಂ ತೂಕದ ಎಂಡಿಎಂಎಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
