ಅಲ್ಲಿ ಹಾಗೆ ಇಲ್ಲಿ ಹೀಗೆ ಎಲ್ಲಾ ನಾಟಕ: ಅಡಿಕೆ ವಿಚಾರವಾಗಿ ಆರಗ ಜ್ಞಾನೇಂದ್ರ  ಬಗ್ಗೆ ಬೇಳೂರು  ಹೀಗಂದಿದ್ಯಾಕೆ

ಹಂಚಿಕೊಳ್ಳಿ
WhatsApp Facebook X Telegram
Belur Slams Araga Jnanendra Over Areca Nut
Belur Slams Araga Jnanendra Over Areca Nut

Belur Slams Araga ಶಿವಮೊಗ್ಗ : ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳನ್ನು ತಡೆಹಿಡಿದಿರುವ ಘಟನೆಯ ಹಿಂದೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ನಾಯಕರ ದೊಡ್ಡ ನಾಟಕವಿದೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ ಮಾಡಿದ್ದಾರೆ.

ಶಿವಮೊಗ್ಗ: ಕಳೆದ 6 ತಿಂಗಳಲ್ಲಿ ಪೊಲೀಸ್​ ಇಲಾಖೆ ವಶಪಡಿಸಿಕೊಂಡ ಗಾಂಜಾ ಎಷ್ಟು ಕೆ ಜಿ ಗೊತ್ತಾ ? 

ನಗರಿ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಹಾರಾಷ್ಟ್ರದ ಅಧಿಕಾರಿಗಳು ಕರ್ನಾಟಕ ಮೂಲದ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ವಶಪಡಿಸಿಕೊಂಡಿದ್ದರು. ಈ ನಡುವೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ತಮ್ಮ ನಿಯೋಗ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಹೋಗಿ, ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇವರ ಈ ನಡೆ ನಮಗೆ ಅನೇಕ ಅನುಮಾನಗಳು ಮೂಡುವಂತೆ ಮಾಡಿದೆ ಎಂದರು. 

ಇಷ್ಟು ವರ್ಷಗಳಿಂದ ಕರ್ನಾಟಕದಿಂದ ಹೋಗುತ್ತಿದ್ದ ಅಡಿಕೆಯನ್ನು ಮಹಾರಾಷ್ಟ್ರದಲ್ಲಿ ಎಂದೂ ತಡೆಹಿಡಿಯುತ್ತಿರಲಿಲ್ಲ. ಆದರೆ, ಈಗ ಹಠಾತ್ತನೆ ತಡೆಹಿಡಿಯಲಾಗಿದೆ ಎಂದರೆ ಇದರ ಹಿಂದೆ ಏನೋ ರಾಜಕೀಯ ಗಿಮಿಕ್ ಅಡಗಿದೆ. ಮಹಾರಾಷ್ಟ್ರದಲ್ಲೂ ಅವರದ್ದೇ ಸರ್ಕಾರ (ಬಿಜೆಪಿ ಮೈತ್ರಿಕೂಟ) ಅಧಿಕಾರದಲ್ಲಿದೆ. ಆದ್ದರಿಂದ, ಇವರೇ ಅಲ್ಲಿ ಅಧಿಕಾರಿಗಳಿಗೆ ಹೇಳಿ ಅಡಿಕೆ ಲಾರಿಗಳನ್ನು ತಡೆಹಿಡಿಸಿ, ನಂತರ ತಾವೇ ಹೋಗಿ ಬಿಡಿಸುವಂತೆ ದೊಡ್ಡ ನಾಟಕ ಮಾಡುತ್ತಿರಬಹುದು. ಈ ಮೂಲಕ ನಮ್ಮಿಂದಲೇ ಇದೆಲ್ಲಾ ಆಯ್ತು ಎಂದು ರೈತ ನಂಬಿಸಿ ಕ್ರೆಡಿಟ್ ಪಡೆಯುವ ತಂತ್ರ ಇದಾಗಿದೆ, ಎಂದು ಬೇಳೂರು ವಾಗ್ದಾಳಿ ನಡೆಸಿದರು. 

ಅಷ್ಟೇ ಅಲ್ಲದೆ, ಈ ಅಡಿಕೆ ಲಾರಿಗಳು ಬಿಡುಗಡೆಯಾದ ನಂತರ ಅಡಿಕೆ ರೇಟ್ ಹೆಚ್ಚಾಗುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳುತ್ತಿದ್ದಾರೆ. ಅಡಿಕೆ ಮಾರುಕಟ್ಟೆಯ ರೇಟ್ ಹೆಚ್ಚು-ಕಡಿಮೆ ಮಾಡುವುದು ಇವರ ಕೈಯಲ್ಲೇ ಏನಾದರೂ ಇದೆಯೇ? ಎಂಬ ಬಲವಾದ ಶಂಕೆ ನಮಗೆ ಮೂಡುತ್ತಿದೆ, ಎಂದು ಅವರು ಲೇವಡಿ ಮಾಡಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor