SHIMOGA NEWS LIVE

ಒಮಿನಿಗೆ ಡಿಕ್ಕಿಯಾಗುವುದನ್ನ ತಪ್ಪಿಸುವಾಗ ಮರಕ್ಕೆ ಗುದ್ದಿ ಕೆಎಸ್​ಆರ್​​ಟಿಸಿ ಬಸ್!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga KSRTC Bus / ಮಲೆನಾಡು ಟುಡೆ / ಶಿವಮೊಗ್ಗ / ಎದುರಿಗೆ ಅಡ್ಡ ಬಂದ ಕಾರನ್ನ ತಪ್ಪಿಸಲು ಹೋಗಿ, ಕೆಎಸ್ಆರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಿಲ್ಲೆಯ ಹೊಳಲೂರು ಸಮೀಪದ ಹೊಳೆಹಟ್ಟಿ ಬಳಿ ನಿನ್ನೆ ದಿನ ಬುಧವಾರ ಈ ಘಟನೆ ಘಟನೆ ನಡೆದಿದ್ದು, ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮರಕ್ಕೆ ಡಿಕ್ಕಿಯಾಗಿ ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.ಬಸ್‌ನಲ್ಲಿದ್ದ 7- 8 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ನೆರವಿಗೆ ಧಾವಿಸಿ, ಎಲ್ಲರನ್ನ ರಕ್ಷಿಸಿದ್ದಾರೆ.

ಇನ್ನು ರಸ್ತೆ ಬದಿಯಲ್ಲಿ ನಿಂತಿದ್ದ ಓಮಿನಿ ಏಕಾಏಕಿ ಬಲಭಾಗಕ್ಕೆ ಬಂದಿದ್ದು, ಇದೇ ವೇಳೆ ಸಿಮೆಂಟ್ ತುಂಬಿದ ಬೊಲೆರೋ ವಾಹನ ಅಡ್ಡ ಬಂದಿದೆ. ಇದನ್ನ ತಪ್ಪಿಸಲು ಬಸ್ ಚಾಲಕ ಏಕಾಏಕಿ ಬಸ್ ಅನ್ನು ಎಡಭಾಗಕ್ಕೆ ತಿರುಗಿಸಿದ್ದು, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ