ತುಂಗಾ ಡ್ಯಾಮ್​ನ ಎಲ್ಲಾ ಗೇಟ್ ಓಪನ್, 43,305 ಕ್ಯೂಸೆಕ್ ನೀರು ನದಿಗೆ!

ಹಂಚಿಕೊಳ್ಳಿ
WhatsApp Facebook X Telegram
All Gates of Tunga Reservoir
All Gates of Tunga Reservoir

All Gates of Tunga Reservoir Opened / ಮಲೆನಾಡು ಟುಡೆ / ಶಿವಮೊಗ್ಗ / ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ತುಂಗಾ ನದಿಗೆ ಒಳಹರಿವಿನ ಪ್ರಮಾಣ ಭಾರೀ ಏರಿಕೆ ಆಗಿದೆ ಬೆಳಗ್ಗೆ ಗಿಂತಲೂ ಇದೀಗ ಬಂದ ಮಾಹಿತಿ ಪ್ರಕಾರ, ತುಂಗಾ ಡ್ಯಾಮ್​ನಿಂದ ನಲವತ್ತು ಸಾವಿರ ಕ್ಯೂಸೆಕ್ಸ್​ಗೂ ಅಧಿಕ ನೀರು ಹೊರಬಿಡಲಾಗುತ್ತಿದೆ.

ಜಲಾಶಯದ ಅಧಿಕಾರಿಗಳು ನೀಡಿರುವ ವರದಿಯ ಪ್ರಕಾರ, ಜುಲೈ 7 ರಂದು ಅಂದರೆ ಇವತ್ತು ಬೆಳಗ್ಗಿನ ಅವಧಿಯಲ್ಲಿ ಜಲಾಶಯಕ್ಕೆ 21,508 ಕ್ಯೂಸೆಕ್ ಒಳಹರಿವು ಇತ್ತು. ಈ ಸಂದರ್ಭದಲ್ಲಿ ಒಟ್ಟು ಹೊರಹರಿವು 19,078 ಕ್ಯೂಸೆಕ್ ಆಗಿತ್ತು.

ಆದರೆ ಮಳೆಯ ಆರ್ಭಟ ಹೆಚ್ಚಾದ ಪರಿಣಾಮ ಸಂಜೆ 3:30 ಗಂಟೆಯ ವೇಳೆಗೆ ಜಲಾಶಯದ ಒಳಹರಿವು 46,385 ಕ್ಯೂಸೆಕ್‌ಗಳಿಗೆ ಏರಿಕೆಯಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಜಲಾಶಯದ ಎಲ್ಲಾ ಗೇಟ್‌ಗಳನ್ನು ತೆರೆದು, ಅದೇ ಪ್ರಮಾಣದ ಅಂದರೆ 46,385 ಕ್ಯೂಸೆಕ್ ನೀರನ್ನು ಒಟ್ಟು ಹೊರಹರಿವಾಗಿ ಹೊರಬಿಡಲಾಗುತ್ತಿದೆ, ಇದರಲ್ಲಿ 43,305 ಕ್ಯೂಸೆಕ್ ನೀರನ್ನು ನೇರವಾಗಿ ನದಿಗೆ ಹರಿಸಲಾಗುತ್ತಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor