2 ತಿಂಗಳಿಂದ ಸಾಗರ ಕಾಗೋಡು ನಿವಾಸಿ ನಾಪತ್ತೆ! ಕೈ ಮೇಲಿದೆ ದಿವ್ಯ ಹೆಸರಿನ ಹಚ್ಚೆ

ಹಂಚಿಕೊಳ್ಳಿ
WhatsApp Facebook X Telegram
40 Year Old Gireesh Missing from Kagodu Village in Sagara Taluk
40 Year Old Gireesh Missing from Kagodu Village in Sagara Taluk

Sagara Taluk / ಮಲೆನಾಡು ಟುಡೆ ಸುದ್ದಿ / ಸಾಗರ / ಸಾಗರ ತಾಲ್ಲೂಕಿನ ಕಾಗೋಡು ಗ್ರಾಮದ ನಿವಾಸಿಯೊಬ್ಬರು ಕಳೆದ ಎರಡು ತಿಂಗಳುಗಳಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಸಾರ್ವಜನಿಕರು ನೆರವು ನೀಡುವಂತೆ ಪೊಲೀಸ್ ಇಲಾಖೆಯು ಪ್ರಕಟಣೆಯ ಮೂಲಕ ಮನವಿ ಮಾಡಿದೆ.

ಕಾಗೋಡು ಗ್ರಾಮದಲ್ಲಿ ವಾಸವಾಗಿರುವ ರೇಣುಕಮ್ಮ ಎಂಬುವವರ 40 ವರ್ಷ ವಯಸ್ಸಿನ ಮಗ ಗಿರೀಶ್ ನಾಪತ್ತೆಯಾಗಿರುವ ವ್ಯಕ್ತಿ. ಮಾನಸಿಕ ಅಸ್ವಸ್ಥರಾಗಿರುವ ಇವರು 5.8 ಅಡಿ ಎತ್ತರವಿದ್ದು, ಕೋಲು ಮುಖ, ಸಾಧಾರಣ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಎಡಗೈನ ಮೇಲೆ ‘ದಿವ್ಯ’ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ವ್ಯಕ್ತಿಯ ಕುರಿತು ಮಾಹಿತಿ ಅಥವಾ ಸುಳಿವು ದೊರೆತಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಸಾರ್ವಜನಿಕರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 9480803361 ಅಥವಾ 9480803385 ಸಂಪರ್ಕಿಸಬಹುದು. ಅದೇ ರೀತಿ ಸಾಗರ ವಿಭಾಗದ ಕಚೇರಿ 08182-226082 ಅಥವಾ ಶಿವಮೊಗ್ಗ ಎಸ್.ಪಿ ಕಚೇರಿಯ 08182-261400 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಒದಗಿಸುವಂತೆ ಇಲಾಖೆಯು ವಿನಂತಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor