ಬಂಟರ ಭವನದಲ್ಲಿ ಇಂದಿನಿಂದ ಹಲಸು ಮತ್ತು ಮಾವು ಮೇಳ! ಜಿಲೇಬಿ, ಹೋಳಿಗೆ ಸ್ಪೆಷಲ್!

ಕೊನೆಯ ನವೀಕರಣ: 03 ಜುಲೈ 2026, 9:11 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
Jackfruit and Mango Mela in Shivamogga Buntara Bhavana

Jackfruit and Mango Mela | ಮಲೆನಾಡು ಟುಡೆ | ಶಿವಮೊಗ್ಗ | ಜುಲೈ 3, 2026 |ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್, ಬಂಟರ ಸಂಘ, ಕುಂದಾಪುರದ ಬೆನಕ ಈವೆಂಟ್ಸ್ ಸಂಯುಕ್ತ ಆಶ್ರಯದಲ್ಲಿ ನಗರದ ಬಂಟರ ಭವನದಲ್ಲಿ ಇಂದಿನಿಂದ ಜು.3ರಿಂದ ಮೂರು ದಿನಗಳ ಕಾಲ ಹಲಸು ಮತ್ತು ಮಾವು ಮೇಳ ಹಮ್ಮಿಕೊಳ್ಳಲಾಗಿದೆ

ಈ ಕುರಿತಾಗಿ ಶಿವಮೊಗ್ಗ ದ ಡಿಸಿ ಆಫೀಸ್​ ಸಮೀಪ ಇರುವ ಪತ್ರಿಕಾಭವನದಲ್ಲಿ ನಿನ್ನೆದಿನ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈವೆಂಟ್ಸ್‌ನ ಗಣೇಶ್ ಶೆಟ್ಟಿ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 9.30ರ ವರೆಗೆ ಮೇಳ ನಡೆಯಲಿದ್ದು, ಉಚಿತ ಪ್ರವೇಶ ಇರಲಿದೆ. ಮೇಳದಲ್ಲಿ 90ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಹಲಸು ಮತ್ತು ಮಾವಿನ ವಿವಿಧ ಉತ್ಪನ್ನಗಳು, ಖಾದ್ಯಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇರಲಿವೆ ಎಂದರು.

ಮೇಳದ ಆಕರ್ಷಣೆಯಾಗಿ ಹಲಸಿನ ಜಿಲೇಬಿ ಹಾಗೂ ಹೋಳಿಗೆ ಇರಲಿದೆ. ಜತೆಗೆ ಹಲಸಿನ ಹಣ್ಣಿನ ಜಾಮ್, ಉಪ್ಪಿನಕಾಯಿ, ಮುಳ್ಳ, ಕಬಾಬ್, ಜಾಮೂನ್, ಹಲಸಿನ ಬೀಜದ ಬಿಸ್ಕೆಟ್ ಸೇರಿದಂತೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ದೊರೆಯಲಿವೆ.

ರಾಮನಗರದ ಮಾವು, ಖಾದಿ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆಗಳು, ಕರಾವಳಿಯ ಮಸಾಲೆ ಪದಾರ್ಥಗಳು ಮೇಳದ ವಿಶೇಷ ಆಕರ್ಷಣೆಯಾಗಿ ಇರಲಿವೆ ಎಂದು ತಿಳಿಸಿದರು. ವಸಂತ್ ಹೋಬಳಿದಾರ್, ಕಿರಣ್, ಸತೀಶ್ ಕುಮಾರ್ ಶೆಟ್ಟಿ, ಬಸವರಾಜ್‌ ಮತ್ತಿತರರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor