ಎರಡು ತಿಂಗಳ ಗರ್ಭಿಣಿ ಮಹಿಳೆ ನೇಣಿಗೆ ಶರಣು!ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
2 Months Pregnant Woman Commits Suicide in Soraba
2 Months Pregnant Woman Commits Suicide in Soraba

Pregnant Woman / ಮಲೆನಾಡು ಟುಡೆ ಸುದ್ದಿ / ಸೊರಬ / ಎರಡು ತಿಂಗಳ ಗರ್ಭಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಹಣಜಿ ಗ್ರಾಮದಲ್ಲಿ ನಿನ್ನೆ ದಿನ ಸೋಮವಾರ ಸಂಭವಿಸಿದೆ. ಸ್ವಾತಿ(24) ಮೃತ ದುರ್ದೆವಿ.

ಸ್ವಾತಿಯನ್ನು ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ ಎಂಬುವನಿಗೆ 2 ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. 20 ದಿನಗಳ ಹಿಂದೆ ಹಣಜಿ ಗ್ರಾಮದ ತವರು ಮನೆಗೆ ಸ್ವಾತಿ ಬಂದಿದ್ದರು. ಕುಟುಂಬದವರ ಮಾಹಿತಿಯಂತೆ ಆರೋಗ್ಯ ಸಮಸ್ಯೆಯಿಂದ ತುಂಬಾ ವಾಂತಿ ಮಾಡುವ ಜತೆಗೆ ಸರಿಯಾಗಿ ಊಟ, ತಿಂಡಿ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಸದ್ಯ ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.

ತಂದೆ ತಾಯಿ ಜಮೀನು ಕೆಲಸಕ್ಕೆ ಹೋದಾಗ ಸೀರೆಯನ್ನೇ ಉರುಳು ಮಾಡಿಕೊಂಡು ಸ್ವಾತಿ ಮನೆಯೊಳಗೆ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಹೊಲದಲ್ಲಿದ್ದ ಮೃತರ ತಂದೆ ತಾಯಿಗೆ ವಿಷಯ ತಿಳಿಸಿ, ಮನೆಯ ಬಾಗಿಲು ಮುರಿಯಲು ಮುಂದಾಗಿದ್ದಾರೆ. ಬಾಗಿಲು ಮುರಿದು ಸ್ವಾತಿಯನ್ನ ಸೀರೆ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೂ ರವಾನಿಸಿದ್ದಾರೆ. ಆದರೆ, ಪ್ರಯತ್ನ ವಿಫಲವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor