ಶಿವಮೊಗ್ಗ,; ಮಾಳೂರು ಪೊಲೀಸ್ ಠಾಣೆಯಲ್ಲಿ ತಡವಾಗಿ ದಾಖಲಾದ ದೂರಿನ್ವಯ 26 ವರ್ಷಗಳ ಹಿಂದೆ ಪ್ರಿಯಾ ಉಡುಪಿ ಎಂಬುವವರ ತಮ್ಮ ಸೋಹನ್ ಎಂಬ 24 ವರ್ಷದ ಯುವಕ ಕಾಣೆಯಾಗಿದ್ದು, ಯುವಕನ ಪತ್ತೆಗಾಗಿ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಮಹಾರಾಜ ಟ್ರೋಪಿ : ಶಿವಮೊಗ್ಗ ಯೋಧಾಸ್ಗೆ ಒಂದು ಜಯ, ಒಂದು ಸೋಲು! ಮ್ಯಾಚ್ ಡಿಟೇಲ್ಸ್ ಓದಿ
ಇವರು ಮೂವರು ಸೋದರ ಸೋದರಿಯರಿಗೆ ತಂದೆ ತಾಯಿ ಇಲ್ಲದ್ದರಿಂದ ಸೋಹನ್ ಅನಾಥಾಶ್ರಮದಲ್ಲಿ ಬೆಳೆದು 10ನೇ ತರಗತಿ ಓದಿದ ನಂತರ ತೀರ್ಥಹಳ್ಳಿ ಮತ್ತು ಗಬಡಿಯಲ್ಲಿರುವ ಅಜ್ಜಿ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದವರು 1999ರಲ್ಲಿ ಕಾಣೆಯಾಗಿದ್ದರು.
ಈ ವ್ಯಕ್ತಿ ಕಾಣೆಯಾಗುವಾಗ 5.7 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದರು. ಈ ವ್ಯಕ್ತಿಯ ಬಗ್ಗೆ ಸುಳಿವು ಇದ್ದಲ್ಲಿ ಮಾಳೂರು ಪೊಲೀಸ್ ಠಾಣೆ ದೂ.ಸಂ.: 08181-235142/ 228310/9480803353 /9480803333/ 08182-261413/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
