ಶಿವಮೊಗ್ಗ ಎಸ್​ ಪಿ ನಿಖಿಲ್​ ಬಿ ಹೆಸರಲ್ಲಿ ನಕಲಿ ಫೇಸ್​ ಬುಕ್​ ಖಾತೆ : ರಿಕ್ವೆಸ್ಟ್​ ಕಳಿಸೋ ಮುನ್ನ ಎಚ್ಚರದಿಂದಿರಿ

ಹಂಚಿಕೊಳ್ಳಿ
WhatsApp Facebook X Telegram
Shivamogga SP GK Nikhil B Fake Facebook Profile
Shivamogga SP GK Nikhil B Fake Facebook Profile

Shivamogga SP ಶಿವಮೊಗ್ಗ : ಈ ಹಿಂದೆಲ್ಲಾ ಪ್ರಭಾವಿಗಳ ಹೆಸರಲ್ಲಿ ನಕಲಿ ಫೇಸ್​ ಬುಕ್​ ಖಾತೆಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ವಿವಿಧ ರೀತಿಯಲ್ಲಿ ವಂಚಿಸುತ್ತಿದ್ದ ವಂಚಕರ ಗುಂಪು ಇದೀಗ ಪೊಲೀಸ್ ಇಲಾಖೆಗೂ ಕಾಲಿಟ್ಟಿದೆ. ಅದರಂತೆ ಶಿವಮೊಗ್ಗದ ಎಸ್​ ಪಿ ನಿಖಿಲ್​ ಬಿ ಹೆಸರಲ್ಲಿ ಫೇಸ್​ ಬುಕ್​ ಖಾತೆ ಓಪನ್​ ಮಾಡಿರುವ ವಂಚಕರು ಸಾರ್ವಜನಿಕರನ್ನು ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದೆ.

ಶಿವಮೊಗ್ಗ : ಸೀನಪ್ಪ ಶೆಟ್ಟಿ ಸರ್ಕಲ್​ನ ಈ ರಸ್ತೇಲಿ ನೋ ಪಾರ್ಕಿಂಗ್ ಮತ್ತು ಟು ವೇ ವ್ಯವಸ್ಥೆ! ಹೇಗಿದೆ ಟ್ರಾಫಿಕ್ ಪೊಲಿಸರ ಕ್ರಮ!​

ಮಾಹಿತಿಯ ಪ್ರಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನಿಖಿಲ್ ಬಿ. ಅವರ ಹೆಸರಿನಲ್ಲಿರುವ ಫೇಸ್‌ಬುಕ್ ಖಾತೆಯಿಂದ ಮೆಸೆಂಜರ್ ಮೂಲಕ ಜನರಿಗೆ ಸಂದೇಶಗಳನ್ನು ಕಳುಹಿಸಿ ಪರಿಚಯ ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ. ಉನ್ನತ ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಸೃಷ್ಟಿಸುವುದು, ಸಾರ್ವಜನಿಕರ ವಿಶ್ವಾಸ ಗಳಿಸಿ ಹಣದ ಬೇಡಿಕೆ ಇಡುವುದು ಅಥವಾ ವೈಯಕ್ತಿಕ ಮಾಹಿತಿ ಸಂಗ್ರಹಿಸುವಂತಹ ಸೈಬರ್ ಅಪರಾಧದ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸರಣಿ ರೂಪದಲ್ಲಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯಿಂದಲೇ ಅಧಿಕೃತ ಎಚ್ಚರಿಕೆ ನೀಡಲಾಗಿದೆ.

ಈ ಕುರಿತು ಮಲೆನಾಡು ಟುಡೆ ದೂರವಾಣಿ ಮುಖಾಂತರ ಶಿವಮೊಗ್ಗ ಎಸ್​ ಪಿ ನಿಖಿಲ್​ರವರನ್ನು ​ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಎಸ್​ಪಿಯವರು. ಹೌದು ಅನೇಕ ದಿನಗಳಿಂದ ನನ್ನ ಹೆಸರಿನಲ್ಲಿ ಫೇಕ್​ ಅಕೌಂಟ್​​ಗಳನ್ನು ಮಾಡಿ ಜನರನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾರು ಸಹ ಅದನ್ನು ನಿಜವೆಂದು ನಂಬಿ ಮೋಸ ಹೋಗಬಾರದು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ. 

Shivamogga SP GK Nikhil B Fake Facebook Profile

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor