ಅಡ್ಡಮತದಾನ! ಶಿವಮೊಗ್ಗದ ಇಬ್ಬರು ಶಾಸಕರಿಂದಲೇ ಕಾಂಗ್ರೆಸ್​ಗೆ ವೋಟ್ : ಆರ್​ಎಂ ಮಂಜುನಾಥ ಗೌಡ

RM Manjunath Gowda / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಶಿವಮೊಗ್ಗದ ಇಬ್ಬರು ಶಾಸಕರು ಕಾಂಗ್ರೆಸ್​ಗೆ ವೋಟು ಹಾಕಿದ್ದಾರೆ ಅಂತಾ ಆರ್​ಎಂ ಮಂಜುನಾಥ ಗೌಡರು ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ನಿನ್ನೆ ದಿನ ತುಂಗಾನದಿಯ ಜೋಗಿಕುತ್ರೆಗೆ ಹೊಸಸೇತುವೆ ನಿರ್ಮಾಣದ ಕುರಿತಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಂಎಡಿಬಿ ಅಧ್ಯಕ್ಷ ಆರ್​ಎಂ ಮಂಜುನಾಥ ಗೌಡ (RM Manjunath Gowda) ಈ ಬಗ್ಗೆ ಪ್ರಸ್ತಾಪಿಸಿದರು.

ರಾಜಕೀಯ ವಿಚಾರವನ್ನು ಉಲ್ಲೇಖಿಸಿದ ಅವರು, ಇಡೀ ದೇಶದಲ್ಲಿಯೇ ರಾಜ್ಯ ಸರ್ಕಾರವೊಂದು ನಿರ್ಮಿಸಿರುವ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಶಿವಮೊಗ್ಗ ವಿಮಾನ ನಿಲ್ದಾಣ ಪಾತ್ರವಾಗಿದೆ. ಆದರೆ, ಕಳೆದ ಒಂದು ತಿಂಗಳಿನಿಂದ ಡಿಜಿಸಿಎ ಅನುಸರಿಸುತ್ತಿರುವ ಖಾಸಗೀಕರಣ ನೀತಿಯ ಪರಿಣಾಮವಾಗಿ ವಿಮಾನ ಹಾರಾಟ ಸೇವೆ ಸ್ಥಗಿತಗೊಂಡಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ಮಾರಾಟ ಮಾಡಿದ ಮಾದರಿಯಲ್ಲಿಯೇ ಇದೀಗ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೂಡ ಮಾರಾಟ ಮಾಡಲು ವ್ಯವಸ್ಥಿತವಾದ ಹುನ್ನಾರ ನಡೆಸಲಾಗುತ್ತಿದೆ ಅಂಥಾ ದೂರಿದ್ರು.

ಅಲ್ಲದೆ ಜಿಲ್ಲಾಡಳಿತದ ನಿರ್ಲಕ್ಷ್ಯದ ಧೋರಣೆಯಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಕುಂಠಿತಗೊಂಡಿತ್ತು. ಆದರೆ ಇದೀಗ ಮುಖ್ಯಮಂತ್ರಿಗಳು ಜಿಲ್ಲೆಯನ್ನು ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಮರುಸ್ಥಾಪನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಇಬ್ಬರು ಶಾಸಕರು ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸದಿಂದ ಮತ ಚಲಾಯಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ತಮಗೆ ಅವಕಾಶ ಕಲ್ಪಿಸಿಕೊಟ್ಟರೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.

ಮೊನ್ನೆ ಮೊನ್ನೆ ಸುದ್ದಿಗೋಷ್ಟಿಯಲ್ಲಿ ಕೆಎಸ್​ ಈಶ್ವರಪ್ಪರವರು ಹೇಳಿದ ಮಾತು, ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. ಇದೀಗ ಸದ್ಯ ಮಂಜುನಾಥ ಗೌಡರ ಮಾತು ರಾಜಕೀಯ ವಲಯದಲ್ಲಿ ಏನೆಲ್ಲಾ ಸಂಚಲನ ಸೃಷ್ಟಿಸುತ್ತದೆ ಎಂಬುದನ್ನ ಕಾದು ನೋಡಬೇಕಿದೆ

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz