ಶಿವಮೊಗ್ಗಕ್ಕೆ ಬಂದ ಅದಿತಿ ಪ್ರಭುದೇವ! ಗೋಪಾಳದಲ್ಲಿ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಆರಂಭ

ಹಂಚಿಕೊಳ್ಳಿ
WhatsApp Facebook X Telegram
Narayana Super Speciality Clinic Inaugurated in Gopala Shivamogga


Narayana Super Speciality Clinic / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಗೋಪಾಳದಲ್ಲಿ ನಾರಾಯಣ ಹೆಲ್ತ್ ಸಂಸ್ಥೆಯ ಎರಡನೇ ನೂತನ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಸೇವೆಗೆ ಇಂದು ಮಂಗಳವಾರ ಅಧಿಕೃತವಾಗಿ ಆರಂಭವಾಗಿದೆ. ನೂತನ ಕ್ಲಿನಿಕ್​ನ್ನ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ಉದ್ಘಾಟಿಸಿದರು., ಈ ಕ್ಲಿನಿಕ್‌ನಲ್ಲಿ ಎಕ್ಸ್-ರೇ, ಎಕೋ, ಟಿಎಂಟಿ, ರಕ್ತ ಪರೀಕ್ಷೆ ಮಾದರಿ ಸಂಗ್ರಹ, ಫಾರ್ಮಸಿ, ಫಿಸಿಯೋಥೆರಪಿ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗಲಿದೆ. ಅಲ್ಲದೆ ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸಬಹುದು. ಅತ್ಯಾಧುನಿಕ ಆರೋಗ್ಯ ಸೇವೆಗಳನ್ನ ಇಲ್ಲಿಂದಲೇ ಪಡೆಯಬಹುದಾಗಿದೆ ಅಂತಾ ನಾರಾಯಣ ಹೆಲ್ತ್​ ಸಂಸ್ಥೆಯು ಮಾಹಿತಿ ನೀಡಿದೆ.

ಇನ್ನೂ ಹೆಲ್ತ್ ಕ್ಲಿನಿಕ್​ಗೆ ಚಾಲನೆ ನೀಡಿ ಮಾತನಾಡಿದ ಅದಿತಿ ಪ್ರಭುದೇವ ನಾರಾಯಣ ಆರೋಗ್ಯ ಸಂಸ್ಥೆಯು (Narayana Super Speciality Clinic ) ಜನಮನ್ನಣೆ ಹಾಗೂ ವಿಶ್ವಾಸ ಗಳಿಸಿರುವ ಪ್ರಮುಖ ಸಂಸ್ಥೆಯಾಗಿದೆ. ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ನೂತನ ಕ್ಲಿನಿಕ್ ಆರಂಭಿಸಿರುವುದು ಈ ಸಂಸ್ಥೆಯ ಮೇಲಿನ ಜನರ ನಂಬಿಕೆಗೆ ಸ್ಪಷ್ಟ ಸಾಕ್ಷಿಯಾಗಿದೆ ಎಂದರು.

ಎಷ್ಟೇ ಸಂಕಷ್ಟದ ಸಂದರ್ಭ ಎದುರಾದರೂ ವೈದ್ಯರು ತಮ್ಮ ಸ್ವಂತ ಕುಟುಂಬಕ್ಕಿಂತ ಹೆಚ್ಚಾಗಿ ರೋಗಿಗಳ ಸೇವೆಗೆ ಅತ್ಯುನ್ನತ ಆದ್ಯತೆ ನೀಡುತ್ತಾರೆ. ಹಾಗಾಗಿ ‘ವೈದ್ಯೋ ನಾರಾಯಣೋ ಹರಿ’ ಎಂಬಮಾತು ನೂರಕ್ಕೆ ನೂರು ಸತ್ಯ

ಅದಿತಿ ಪ್ರಭುದೇವ , ನಟಿ

ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ ಶರ್ಮಾ ಅವರು ಮಾತನಾಡಿ, ಗೋಪಾಳ ಹಾಗೂ ಅದರ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳಿಗೆ ಸುಲಭವಾಗಿ ಮತ್ತು ಗುಣಮಟ್ಟದ ಆರೋಗ್ಯ ಸೇವೆ ನೀಡುವ ಸಲುವಾಗಿ ಈ ಕ್ಲಿನಿಕ್ ಆರಂಭಿಸಲಾಗಿದೆ ಅಂತಾ ತಿಳಿಸಿದ್ರು. ಅಲ್ಲದೆ ಉದ್ಘಾಟನೆಯ ಅಂಗವಾಗಿ ಶಿವಮೊಗ್ಗದ ನಾಗರಿಕರಿಗಾಗಿ ವಿಶೇಷವಾಗಿ 1999 ರೂಪಾಯಿಗೆ ಪೂರ್ತಿ ಹೆಲ್ತ್​ ಚೆಕಪ್​ ಪ್ಯಾಕೇಜ್ ಆಫರ್ ನೀಡಲಾಗುತ್ತಿದೆ ಎಂದರು.

ನಾರಾಯಣ ಹೆಲ್ತ್ ಸಂಸ್ಥೆಯ ಮಾರ್ಕೆಟಿಂಗ್ ಹಾಗೂ ಗ್ರೋಥ್ ಕ್ಲಸ್ಟರ್ ಮುಖ್ಯಸ್ಥ ರಾಜಾಸಿಂಗ್ ಕ್ಲಿನಿಕ್‌ನ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ್ರು ಅತ್ಯಾಧುನಿಕ ಆರೋಗ್ಯ ಸೇವೆಗಳು ಈ ಕ್ಲೀನಿಕ್​ನಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ಎನ್.ಎಲ್. ನಾಯಕ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಡಾ. ಚೇತನ್ ಎಂ.ಎಲ್., ನಾರಾಯಣ ಹೆಲ್ತ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂತ ಕುಮಾರ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶೈಲೇಶ್ ಎಸ್.ಎನ್. ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor