ಶಿವಮೊಗ್ಗ: ನಾರಾಯಣ ಹೆಲ್ತ್‌ನಿಂದ ಹೆಲ್ಲಿ ಕಿಡ್ಸ್ ಗೇಟ್‌ವೇ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ

ಹಂಚಿಕೊಳ್ಳಿ
WhatsApp Facebook X Telegram
Narayana Health to Host Healthy Kids Gateway
Narayana Health to Host Healthy Kids Gateway

ಶಿವಮೊಗ್ಗ: ಮಕ್ಕಳಲ್ಲಿ ಆರೋಗ್ಯ ಮತ್ತು ಉತ್ತಮ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರಸಿದ್ಧ ನಾರಾಯಣ ಹೆಲ್ತ್ ಸಂಸ್ಥೆಯು ನಗರದಲ್ಲಿ 5 ರಿಂದ 12 ವರ್ಷದೊಳಗಿನ ಮಕ್ಕಳಿಗಾಗಿ ಒಂದು ವಾರದ ಹೆಲ್ಲಿ ಕಿಡ್ಸ್ ಗೇಟ್‌ವೇ ಹೆಸರಿನ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. 

ಶಿವಮೊಗ್ಗ: ಎನ್.ಟಿ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸಾವು, 

ಈ ವಿಶಿಷ್ಟ ಕಾರ್ಯಕ್ರಮವು 2026 ರ ಮಾರ್ಚ್ 30 ರಿಂದ ಏಪ್ರಿಲ್ 4 ರವರೆಗೆ ಪ್ರತಿದಿನ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ನಗರದ ಕುವೆಂಪು ರಸ್ತೆಯಲ್ಲಿರುವ ನಂಬಲ ಏಟ್ರಿಯಂನಲ್ಲಿ ನಡೆಯಲಿದೆ. ಮೋಜು ಮತ್ತು ಕಲಿಕೆಯ ಮೂಲಕ ಮಕ್ಕಳಲ್ಲಿ ಸದೃಢ ಆರೋಗ್ಯದ ಅಭ್ಯಾಸಗಳನ್ನು ಬೆಳೆಸುವುದು ಈ ಶಿಬಿರದ ಮುಖ್ಯ ಗುರಿಯಾಗಿದೆ. 

ಈ ಕಾರ್ಯಾಗಾರದಲ್ಲಿ ಮಕ್ಕಳಿಗಾಗಿ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ವೈಯಕ್ತಿಕ ಸ್ವಚ್ಛತೆಯ ಬಗ್ಗೆ ತಿಳಿಸುವ ಕ್ಲೀನ್ ಶೈನ್ ಹ್ಯಾಬಿಟ್ಸ್ ಮತ್ತು ಪೌಷ್ಟಿಕಾಹಾರದ ಮಹತ್ವ ಸಾರುವ ಈಟ್ ಸ್ಟಾರ್ಟ್, ಗೋ ಸ್ಟ್ರಾಂಗ್ ಎಂಬ ವಿಷಯಗಳ ಮೇಲೆ ವಿಶೇಷ ಗಮನಹರಿಸಲಾಗುತ್ತದೆ. ದೈಹಿಕ ದೃಢತೆಗಾಗಿ ಫಿಸಿಯೋಥೆರಪಿ ಆಧಾರಿತ ಮೋಜಿನ ಆಟಗಳನ್ನು ಒಳಗೊಂಡ ಜಂಪ್, ಸ್ಟ್ರೆಚ್ ಪ್ಲೇ ವಿಭಾಗವು ಮಕ್ಕಳ ಉತ್ಸಾಹವನ್ನು ಹೆಚ್ಚಿಸಲಿದೆ.

ಇದರೊಂದಿಗೆ ಸೂಪರ್ ಸ್ಮೈಲ್ ಕೇರ್ ವಿಭಾಗದ ಮೂಲಕ ಹಲ್ಲಿನ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದ್ದು, ಭಾಗವಹಿಸುವ ಎಲ್ಲಾ ಮಕ್ಕಳಿಗೆ ಉಚಿತ ದಂತ ತಪಾಸಣೆಯನ್ನು ಒದಗಿಸಲಾಗುತ್ತದೆ. ಸೋಂಕು ತಡೆಗಟ್ಟುವಿಕೆ ಮತ್ತು ಕೀಟಾಣು ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಜರ್ಮ್ ಬಸ್ಟರ್ಸ್ ಚಟುವಟಿಕೆಯನ್ನು ಸಹ ವಿನ್ಯಾಸಗೊಳಿಸಲಾಗಿದೆ. ಕೇವಲ 40 ಮಕ್ಕಳಿಗೆ ಮಾತ್ರ ಈ ಶಿಬಿರದಲ್ಲಿ ಅವಕಾಶವಿದ್ದು, ಆಸಕ್ತ ಪೋಷಕರು 199 ರೂ. ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 98864 13131 ಅನ್ನು ಸಂಪರ್ಕಿಸಲು ಕೋರಲಾಗಿದೆ.

Narayana Health to Host Healthy Kids Gateway

Narayana Health to Host Healthy Kids Gateway
Narayana Health to Host Healthy Kids Gateway
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor