ಜೋಗ-ಮುರುಡೇಶ್ವರ ರಸ್ತೆ ಬಗ್ಗೆ ಸಂಸದರ ಸ್ಪಷ್ಟನೆ! ಬಿಎಸ್​ಎನ್​ಎಲ್​ ಟವರ್​, ಜಂಟಿ ಸರ್ವೆ ಬಗ್ಗೆಯು ಸ್ಪಷ್ಟನೆ!

Jog Murudeshwar road /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಂಸದ ಬಿ.ವೈ.ರಾಘವೇಂದ್ರ ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಅರಳಗೋಡು, ಚೆನ್ನಗೊಂಡ, ಭಾನುಕುಳ್ಳಿ ಮತ್ತು ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ರೈತ ಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಮುಖ್ಯವಾಗಿ ಜೋಗ ಟು ಮುರುಡೇಶ್ವರ ರಸ್ತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಸಭೆಯಲ್ಲಿ ಸಮಾಲೋಚನೆ ನಡೆಸಿದ ಅವರು, ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ನೀಡಿದ ದೂರುಗಳು ಮತ್ತು ಮನವಿಗಳಿಗೆ ಕೇವಲ ಭರವಸೆ ನೀಡದೇ, ಅವುಗಳನ್ನು ತಳಮಟ್ಟದಲ್ಲಿ ತ್ವರಿತವಾಗಿ ಅನುಷ್ಠಾನಕ್ಕೆ ತರುವುದು ತಮ್ಮ ಉದ್ದೇಶ ಅಂತಾ ತಿಳಿಸಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಇನ್ನೂ ಈ ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆಯಾದ ಪ್ರಮುಖ ವಿಷಯಗಳು ಹೀಗಿವೆ

ಅರಣ್ಯ ಇಲಾಖೆ ತೊಂದರೆಗೆ ಮುಕ್ತಿ – ಎಫ್.ಸಿ ಪ್ರಸ್ತಾವನೆ: ಗ್ರಾಮೀಣ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಎದುರಾಗುತ್ತಿರುವ ತೊಂದರೆಗಳನ್ನು ನಿವಾರಿಸಲು ಫಾರೆಸ್ಟ್ ಕ್ಲಿಯರೆನ್ಸ್ (FC) ಬೌಂಡ್ರಿಗಳನ್ನು ಫಿಕ್ಸ್ ಮಾಡಲು ಸಂಸದರು ಸೂಚಿಸಿದ್ರು.

ಇನ್ನೂ ⁠ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂರುಕೋಟೆ, ಭೀಮೇಶ್ವರ, ಉರುಳಗಲ್ಲು, ಮೇಘಾನೆ ಹಾಗೂ ಮುಪ್ಪಾನೆ ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಹೊರತುಪಡಿಸಿ, ಬಾಕಿ ಉಳಿದಿರುವ ಕಂದಾಯ ಭೂಮಿ ಮತ್ತು ಬಗರ್‌ಹುಕಂ ಸಾಗುವಳಿ ಜಮೀನುಗಳ ನಿಖರ ಗುರುತಿಸುವಿಕೆಗಾಗಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸರ್ವೆ ನಡೆಸಬೇಕು ಅಂತಾ ಸೂಚಿಸಿದರು.

ಮುಖ್ಯವಾಗಿ, ⁠ಜೋಗದಿಂದ ಮುರುಡೇಶ್ವರ ರಸ್ತೆ (Jog Murudeshwar road ) ಸಂಪರ್ಕದ ಯೋಜನೆ ಸಂಬಂಧಿಸಿದ್ದಂತೆ ಕಾಮಗಾರಿಗೆ ಮತ್ತಷ್ಟು ವೇಗ ನೀಡುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ ಸಂಸದರು ಈ ಕುರಿತು ಅಧಿಕಾರಿಗಳ ಬಳಿ ಸಮಾಲೋಚಿಸಿದರು.

ಬಾರಂಗಿ ಹೋಬಳಿಯಲ್ಲಿ ನಿರ್ಮಾಣವಾಗುತ್ತಿರುವ ಬಿಎಸ್‌ಎನ್‌ಎಲ್ ಟವರ್‌ಗಳ ಕಾಮಗಾರಿ ಗುಣಮಟ್ಟದ್ದಾಗಿರಬೇಕು, ತ್ವರಿತವಾಗಿ ಮುಗಿಯಬೇಕು ಹೊಸ ಟವರ್ ನಿರ್ಮಾಣವಾಗಬೇಕಿರುವ ಗ್ರಾಮಗಳ ಸರ್ವೆ ನಡೆಸಿ ವಿವರವಾದ ಪಟ್ಟಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದ್ದೇನೆ. ಮೇಲಾಗಿ ಮಳೆಗಾಲ ಹತ್ತಿರವಿರುವುದರಿಂದ ನೆಟ್‌ವರ್ಕ್ ಅಡೆತಡೆಯಿಲ್ಲದೆ ಸಿಗಲು ಸೋಲಾರ್ ಬದಲು ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ತಿಳಿಸಿದ್ದೇನೆ

ಬಿ.ವೈ .ರಾಘವೇಂದ್ರ ಸಂಸದ, ಶಿವಮೊಗ್ಗ

ಇನ್ನೂ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಮಾಜಿ ಸಚಿವರಾದ ಹರತಾಳು ಹಾಲಪ್ಪ, ದಿಶಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಶ್ರೀ ಟಿ.ಡಿ. ಮೇಘರಾಜ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಬಾರಂಗಿ ಹೋಬಳಿಯ ವಿವಿಧ ಗ್ರಾಮಗಳ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz