SHIVAMOGGA NEWS TODAY

ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ : ಎಲ್ಲಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

Shikaripura Mother and Two Sons Go Missing
Shikaripura Mother and Two Sons Go Missing
ಶೇರ್ ಮಾಡಿ WhatsApp Facebook X

Shikaripura ಶಿವಮೊಗ್ಗ : ಶಿಕಾರಿಪುರ ತಾಲ್ಲೂಕ್, ಹರಗುವಳ್ಳಿ ಗ್ರಾಮ  ನಾಗವೇಣಿ ಎಂಬ ಮಹಿಳೆ ಜೂನ್​ 17 ರಂದು ತನ್ನ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ.  ಈ ಹಿನ್ನೆಲೆ ಶಿಕಾರಿಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಮಹಿಳೆ ಹಾಗೂ ಮಕ್ಕಳು ಇದುವರೆಗೂ  ಪತ್ತೆಯಾಗದಿರುವ ಹಿನ್ನೆಲೆ  ಪೊಲೀಸರು ವಾರ್ತಾ ಇಲಾಖೆ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಶಿವಮೊಗ್ಗ : ಮಹಿಷಿ ಉತ್ತರಾದಿ ಮಠದಲ್ಲಿ ₹1 ಕೋಟಿ ಮೌಲ್ಯದ ಚಿನ್ನ ಕಣ್ಮರೆ! ನಡೆದಿದ್ದು?

ಶಿವಮೊಗ್ಗ ಶಿಕಾರಿಪುರ ತಾಲ್ಲೂಕ್, ಹರಗುವಳ್ಳಿ ಗ್ರಾಮ ವಾಸಿ ನವೀನ್ ಕುಮಾರ್ ಎಂಬುವವರ ಅಕ್ಕ ನಾಗವೇಣಿ ಎಂಬ 31 ವರ್ಷ ಮಹಿಳೆ ತನ್ನ 14 ವರ್ಷದ ಅಶ್ವತ್ ಹಾಗೂ 12 ವರ್ಷದ ಅಶ್ವಿನ್ ಎಂಬ ಮಕ್ಕಳನ್ನು ಕರೆದುಕೊಂಡು ಜೂ. 17 ರಂದು ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ . ಈಕೆ ವಿಚ್ಛೇದಿತೆಯಾಗಿದ್ದು, 1 ವರ್ಷದಿಂದ ತಮ್ಮ ನವೀನ್ ಕುಮಾರ್ ಎಂಬುವವರ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. 

ನಾಗವೇಣಿಯ ಚಹರೆ: 5 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಬಿಳಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಮತ್ತು ವೇಲ್ ಧರಿಸಿರುತ್ತಾರೆ. 

ಅಶ್ವತ್‌ನ ಚಹರೆ : 4 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಎಣ್ಣೆಗಪ್ಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾನೆ.

ಅಶ್ವಿನ್‌ನ ಚಹರೆ: 3 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಎಣ್ಣೆಗಪ್ಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಪ್ಪುಬಣ್ಣದ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿರುತ್ತಾನೆ.

ಈ ತಾಯಿ ಮಕ್ಕಳ ಬಗ್ಗೆ ಸುಳಿವು ಇದ್ದಲ್ಲಿ ದೂರವಾಣಿ ಸಂಖ್ಯೆ: ಜಿಲ್ಲಾ ಪೊಲೀಸ್ ಕಚೇರಿ, ಶಿವಮೊಗ್ಗ ನಂ:-08182- 261413,ಡಿ.ಎಸ್.ಪಿ ಶಿಕಾರಿಪುರ ಉಪ ವಿಭಾಗ ಶಿಕಾರಿಪುರ:-08187-222443/ 9480803323, ಪಿ..ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ. 08187-222443/ 9480803366 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

Shikaripura Mother and Two Sons Go Missing

Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor