ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮಳೆಯ ಶುಭಾರಂಭ! ನಿನ್ನೆ ಹೇಗಿತ್ತು ವರ್ಷದಾರೆ! ವಿವರ ಓದಿ

ಹಂಚಿಕೊಳ್ಳಿ
WhatsApp Facebook X Telegram
Shivamogga Monsoon Report Karnataka Rain Report Shivamogga Records 81mm Rain,
Shivamogga Monsoon Report

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಗೂ ಹಾಸನ ಜಿಲ್ಲೆಗಳ ವಿವಿಧೆಡೆ ನಿನ್ನೆ ದಿನ ಉತ್ತಮ ಮಳೆಯಾಗಿದೆ. ಕರ್ಬಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಬೆಳಗ್ಗೆ 6.30ರವರೆಗಿನ ವರದಿಯಂತೆ ನಿನ್ನೆ ದಿನ ಮಲ್ನಾಡ್ ಭಾಗದಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಯಲ್ಲಿ ಅತಿ ಹೆಚ್ಚು ಅಂದರೆ 40.5 ಮಿ.ಮೀ. ಮಳೆಯಾಗಿದೆ

ಶಿವಮೊಗ್ಗ : ನಿನ್ನೆ ಹೇಗಿತ್ತು ವರ್ಷದಾರೆ!

ಜಿಲ್ಲೆಯ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಗಾಮದಲ್ಲಿ 25.5 ಮಿ.ಮೀ. ಮಳೆಯಾಗಿದ್ದರೆ, ಚುರ್ಚುಗುಂಡಿಯಲ್ಲಿ 19.0 ಮಿ.ಮೀ. ಹಾಗೂ ಮುಡುಬಸಿದ್ಧಾಪುರದಲ್ಲಿ 17.0 ಮಿ.ಮೀ. ಮಳೆಯಾಗಿದೆ. ಅದೇ ರೀತಿ ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ 19.5 ಮಿ.ಮೀ., . ಹಾಗೂ ಸಾಗರದಲ್ಲಿ 17.6 ಮಿ.ಮೀ. ಮಳೆ ಸುರಿದಿದೆ.

ಇನ್ನುಳಿದಂತೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕುರುವಂಕದಲ್ಲಿ 31.5 ಮಿ.ಮೀ. ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕೇಂದ್ರದಲ್ಲಿಯೂ ಸಾಧಾರಣ ಮಳೆಯಾಗಿದ್ದು, ಇಲ್ಲಿ 15.2 ಮಿ.ಮೀ. ಮಳೆ ದಾಖಲಾಗಿದೆ. ಒಟ್ಟಾರೆಯಾಗಿ ಮಲೆನಾಡು ಭಾಗದ ಪ್ರಮುಖ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor