ಕಲ್ಲಂಗಡಿಗಾಗಿ ಕಿತ್ತಾಟ, ಕಾರು ಲಾರಿ ಡಿಕ್ಕಿ, ಬಿಟ್ಟು ಹೋದ ಬ್ಯಾಗ್​ ಕೊಡಿಸಿದ 112 : ಶಿವಮೊಗ್ಗ ಕ್ವಿಕ್​ ನ್ಯೂಸ್

ಹಂಚಿಕೊಳ್ಳಿ
WhatsApp Facebook X Telegram
shivamogga crime news iamge
shivamogga police

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / 112 ಸಹಾಯವಾಣಿಗೆ ಸಾರ್ವಜನಿಕರ ದೂರು, ಪೊಲೀಸರ ತ್ವರಿತ ಸ್ಪಂದನೆಯ ಟಾಪ್ 5 ಪ್ರಮುಖ ಸುದ್ದಿಗಳು

ಊರಿನ ಯುವಕರ ನಡುವೆ ಕಿರಿಕ್

02.06.2026 ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಊರಿನ ಯುವಕರ ನಡುವೆ ಕ್ಷುಲ್ಲಕ ವಿಚಾರವಾಗಿ ಗಲಾಟೆಯಾಗಿರುವ ಬಗ್ಗೆ 112 ಕ್ಕೆ ಕರೆ ಬಂಧಿತ್ತು. ಸ್ಥಳಕ್ಕೆ ತೆರಳಿದ ಸಿಬ್ಬಂಧಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಯುವಕರು ಇಲ್ಲದ ಕಾರಣಕ್ಕೆ ಮಾಹಿತಿಯನ್ನು ಠಾಣೆಗೆ ನೀಡಿ, ಠಾಣೆಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ದೂರನ್ನು ಮುಕ್ತಾಯಗೊಳಿಸಿದ್ದಾರೆ.

ಕಾರು ಲಾರಿ ಡಿಕ್ಕಿ

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 01.06.2026 ರಂದು ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ತುಂಗಾನಗರ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ, ವಾಹನಗಳಿಗೆ ಸಣ್ಣಪುಟ್ಟ ಹಾನಿಯಾಗಿತ್ತು.

ಕಲ್ಲಂಗಡಿ ವಿಚಾರಕ್ಕೆ ಕಿತ್ತಾಟ

ಕಾರ್ಗಲ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲ್ಲಂಗಡಿ ಖರೀದಿಸುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ಬಗ್ಗೆ ಸ್ಥಳೀಯರು 112ಗೆ ಕರೆ ಮಾಡಿದ್ದರು. ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಗಲಾಟೆ ನಿಲ್ಲಿಸಿ, ಗಲಾಟೆ ನಡೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ

ಕುಡಿದು ಕಿರಿಕ್​ ಮಾಡಿದ ಆರೋಪ

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಅಂಗಡಿಯಲ್ಲಿ ಗಲಾಟೆ ಮಾಡಿದ್ದಾನೆ. ಇದರಿಂದ ಆತಂಕಗೊಂಡ ಅಂಗಡಿಯವವರು ಪೊಲೀಸರ ಮೊರೆಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬರುವರಷ್ಟರಲ್ಲಿ ಆರೋಪಿಯ ಸಂಬಂಧಿಕರು ಬಂದು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ 112 ಸಿಬ್ಬಂದಿ ಗಲಾಟೆ ನಿಲ್ಲಿಸಿ ವಾರ್ನಿಂಗ್ ಕೊಟ್ಟುಕಳುಹಿಸಿದ್ದಾರೆ

ಬಿಟ್ಟು ಹೋದ ಬ್ಯಾಗ್​ ಕೊಡಿಸಿದ ಪೊಲೀಸರು

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮಾರ್ಕೆಟ್ ಶಾಪ್​ ಒಂದರಲ್ಲಿ ಮರೆತು ಬಿಟ್ಟುಬಂದಿದ್ದ ಬ್ಯಾಗ್ ಕುರಿತು ದೂರು ನೀಡಿದ್ದರು. ಮರುದಿನ ಹೋಗಿ ಕೇಳಿದಾಗ ಸಿಬ್ಬಂದಿ ಬ್ಯಾಗ್ ಇಲ್ಲವೆಂದು ತಿಳಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು. ಈ ಸಂಬಂಧ ಸ್ಥಳಕ್ಕೆ ತೆರಳಿದ ಸಿಬ್ಬಂದಿ ವಿಚಾರಿಸಿ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ಬ್ಯಾಗ್ ಇಟ್ಟಿರುವುದು ಕಂಡುಬಂದಿದೆ. ತಕ್ಷಣವೇ ಸಿಬ್ಬಂದಿಯನ್ನ ವಿಚಾರಿಸಿ ಸಂತ್ರಸ್ತರ ಬ್ಯಾಗ್ ಮರಳಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor