ರೈಲು ಪ್ರಯಾಣಿಕರ ಗಮನಕ್ಕೆ: ತುಮಕೂರು-ಅರಸೀಕೆರೆ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ; ಸಂಪೂರ್ಣ ಮಾಹಿತಿ ಇಲ್ಲಿದೆ

Trains Cancelled ಶಿವಮೊಗ್ಗ: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (VJNL) ವತಿಯಿಂದ ಹೊನ್ನಾವಳ್ಳಿ ರೋಡ್ ಮತ್ತು ಅರಸೀಕೆರೆ ನಿಲ್ದಾಣಗಳ ಮಧ್ಯೆ ಕಾಲುವೆ ದಾಟುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ಸೇವೆಯಲ್ಲಿ ರದ್ದತಿ, ಮಾರ್ಗ ಬದಲಾವಣೆ, ಸಮಯ ಮರುನಿಗದಿ ಹಾಗೂ ನಿಯಂತ್ರಣ ಸೇರಿದಂತೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶಿವಮೊಗ್ಗ ಚಲಿಸುವ ರೈಲು ಹತ್ತಲು ಹೋಗಿ ಆಯತಪ್ಪಿದ ಪ್ರಯಾಣಿಕ: ಆರ್‌ಪಿಎಫ್ ಇನ್‌ಸ್ಪೆಕ್ಟರ್ ಸಮಯಪ್ರಜ್ಞೆಯಿಂದ ಉಳಿತು ಜೀವ 

Trains Cancelled ರೈಲುಗಳ ರದ್ದತಿ ವಿವರಗಳು

ತಾಂತ್ರಿಕ ಕಾರಣಗಳಿಂದಾಗಿ ಹಾಗೂ ಕಾಮಗಾರಿ ಸುಗಮವಾಗಿ ನಡೆಯಲು ಕೆಳಕಂಡ ರೈಲುಗಳ ಸಂಚಾರವನ್ನು ಎರಡು ದಿನಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ

ರೈಲು ಸಂಖ್ಯೆ 66577 / 66578 (ತುಮಕೂರು – ಶಿವಮೊಗ್ಗ ಟೌನ್ – ತುಮಕೂರು ಪ್ಯಾಸೆಂಜರ್): ಜೂನ್ 02 ಮತ್ತು ಜೂನ್ 16 ರಂದು ಸಂಚಾರ ಇರುವುದಿಲ್ಲ.

ರೈಲು ಸಂಖ್ಯೆ 16567 / 16568 (ತುಮಕೂರು – ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್): ಜೂನ್ 06 ಮತ್ತು ಜೂನ್ 13 ರಂದು (ತುಮಕೂರು ಕಡೆಯಿಂದ) ಹಾಗೂ ಜೂನ್ 07 ಮತ್ತು ಜೂನ್ 14 ರಂದು (ಶಿವಮೊಗ್ಗ ಕಡೆಯಿಂದ) ರದ್ದುಗೊಳಿಸಲಾಗಿದೆ.

ರೈಲು ಸಂಖ್ಯೆ 12089 / 12090 (ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್): ಜೂನ್ 06 ಮತ್ತು ಜೂನ್ 13 ರಂದು (ಬೆಂಗಳೂರು ಕಡೆಯಿಂದ) ಹಾಗೂ ಜೂನ್ 07 ಮತ್ತು ಜೂನ್ 14 ರಂದು (ಶಿವಮೊಗ್ಗ ಕಡೆಯಿಂದ) ರದ್ದಾಗಿರುತ್ತದೆ.

ರೈಲು ಸಂಖ್ಯೆ 56224 / 56223 (ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್): ಜೂನ್ 07 ಮತ್ತು ಜೂನ್ 14 ರಂದು ಈ ರೈಲುಗಳು ಓಡುವುದಿಲ್ಲ.

ರೈಲು ಸಂಖ್ಯೆ 06581 / 06582 (ಕೆಎಸ್‌ಆರ್ ಬೆಂಗಳೂರು – ಚನ್ನಪಟ್ಟಣ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್): ಜೂನ್ 07 ಮತ್ತು ಜೂನ್ 14 ರಂದು ಸಂಪೂರ್ಣ ರದ್ದಾಗಿರುತ್ತದೆ.

Trains Cancelled ರೈಲುಗಳ ಮಾರ್ಗ ಬದಲಾವಣೆ

ಕಾಮಗಾರಿ ನಡೆಯುವ ಜಾಗವನ್ನು ಹೊರತುಪಡಿಸಿ, ಕೆಳಗೆ ತಿಳಿಸಲಾದ ರೈಲುಗಳನ್ನು ಪರ್ಯಾಯ ಮಾರ್ಗಗಳ ಮೂಲಕ ತಿರುಗಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ

ರೈಲು ಸಂಖ್ಯೆ 11022 (ತಿರುನೆಲ್ವೇಲಿ ಜಂಕ್ಷನ್ – ದಾದರ್ ಸೆಂಟ್ರಲ್ ಎಕ್ಸ್‌ಪ್ರೆಸ್): ಜೂನ್ 01 ಮತ್ತು ಜೂನ್ 15 ರಂದು ಹೊರಡುವ ರೈಲು ಚಿಕ್ಕಬಾಣವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಚಲಿಸಲಿದೆ. ಈ ರೈಲುಗಳಿಗೆ ತುಮಕೂರು ಮತ್ತು ತಿಪಟೂರು ಸ್ಟೇಷನ್‌ಗಳಲ್ಲಿ ನಿಲುಗಡೆ ಇರುವುದಿಲ್ಲ.

ರೈಲು ಸಂಖ್ಯೆ 56519 (ಕೆಎಸ್‌ಆರ್ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್): ಜೂನ್ 02 ಮತ್ತು ಜೂನ್ 16 ರಂದು ಚಿಕ್ಕಬಾಣವರ, ನೆಲಮಂಗಲ, ಹಾಸನ, ಅರಸೀಕೆರೆ ಮೂಲಕ ಸಂಚರಿಸಲಿದ್ದು, ದೊಡ್ಡಬೆಲೆ, ಕ್ಯಾಯಸಂದ್ರ, ತುಮಕೂರು, गुಬ್ಬಿ, ಅಮ್ಮಸಂದ್ರ ಹಾಗೂ ತಿಪಟೂರು ನಿಲ್ದಾಣಗಳನ್ನು ಕೈಬಿಡಲಾಗಿದೆ.

ರೈಲು ಸಂಖ್ಯೆ 12079 (ಕೆಎಸ್‌ಆರ್ ಬೆಂಗಳೂರು – ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ಜೂನ್ 02 ಮತ್ತು ಜೂನ್ 16 ರಂದು ಯಶವಂತಪುರ, ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದೆ. ತುಮಕೂರು ಹಾಗೂ ತಿಪಟೂರಿನಲ್ಲಿ ನಿಲ್ಲುವುದಿಲ್ಲ.

ರೈಲು ಸಂಖ್ಯೆ 16536 (ಪಂಢರಾಪುರ – ಮೈಸೂರು ಎಕ್ಸ್‌ಪ್ರೆಸ್): ಜೂನ್ 06 ಮತ್ತು ಜೂನ್ 13 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮೂಲಕ ಚಲಿಸಲಿದ್ದು, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.

ರೈಲು ಸಂಖ್ಯೆ 20654 (ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್): ಜೂನ್ 06 ಮತ್ತು ಜೂನ್ 13 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮಾರ್ಗವಾಗಿ ಓಡಲಿದ್ದು, ತುಮಕೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

ರೈಲು ಸಂಖ್ಯೆ 16546 (ಸಿಂಧನೂರು – ಯಶವಂತಪುರ ಎಕ್ಸ್‌ಪ್ರೆಸ್): ಜೂನ್ 06 ಮತ್ತು ಜೂನ್ 13 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮೂಲಕ ಸಂಚರಿಸಲಿದ್ದು, ತಿಪಟೂರು, ಅಮ್ಮಸಂದ್ರ, ಗುಬ್ಬಿ, ತುಮಕೂರು, ಕ್ಯಾಯತಸಂದ್ರ, ದೊಡ್ಡಬೆಲೆ ನಿಲ್ದಾಣಗಳಿಗೆ ಬರುವುದಿಲ್ಲ.

ರೈಲು ಸಂಖ್ಯೆ 17310 (ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್): ಜೂನ್ 06 ಮತ್ತು ಜೂನ್ 13 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮೂಲಕ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

Trains Cancelled ಮಾರ್ಗಮಧ್ಯೆ ರೈಲುಗಳ ನಿಯಂತ್ರಣ (ವಿಳಂಬ ಸಾಧ್ಯತೆ)

ಕಾಮಗಾರಿಯ ಅವಧಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಕೆಲವು ರೈಲುಗಳನ್ನು ಮಾರ್ಗಮಧ್ಯೆ ನಿಲ್ಲಿಸಿ ಬಿಡಲಾಗುತ್ತದೆ 

ರೈಲು ಸಂಖ್ಯೆ 20689 (ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್): ಜೂನ್ 02 ಮತ್ತು 16 ರಂದು ಹಾದಿಯಲ್ಲಿ 15 ನಿಮಿಷ ನಿಯಂತ್ರಣ.

ರೈಲು ಸಂಖ್ಯೆ 16568 (ಶಿವಮೊಗ್ಗ – ತುಮಕೂರು ಎಕ್ಸ್‌ಪ್ರೆಸ್): ಜೂನ್ 02 ಮತ್ತು 16 ರಂದು ಮಾರ್ಗಮಧ್ಯೆ 60 ನಿಮಿಷ ನಿಯಂತ್ರಣ.

ರೈಲು ಸಂಖ್ಯೆ 12090 (ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ): ಜೂನ್ 02 ಮತ್ತು 16 ರಂದು 15 ನಿಮಿಷ ನಿಯಂತ್ರಣ.

ರೈಲು ಸಂಖ್ಯೆ 12726 (ಧಾರವಾಡ – ಬೆಂಗಳೂರು ಎಕ್ಸ್‌ಪ್ರೆಸ್): ಜೂನ್ 07 ಮತ್ತು 14 ರಂದು ಮಾರ್ಗಮಧ್ಯೆ 75 ನಿಮಿಷ ನಿಯಂತ್ರಣ.

ರೈಲು ಸಂಖ್ಯೆ 26751 (ಬೆಳಗಾವಿ – ಬೆಂಗಳೂರು ವಂದೇ ಭಾರತ ಎಕ್ಸ್‌ಪ್ರೆಸ್): ಜೂನ್ 07 ಮತ್ತು 14 ರಂದು ಹಾದಿಯಲ್ಲಿ 30 ನಿಮಿಷ ನಿಯಂತ್ರಣಗೊಳ್ಳಲಿದೆ.

ಭಾಗಶಃ ರದ್ದು ಹಾಗೂ ಪ್ರಯಾಣ ಮರುನಿಗದಿ

ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ರೈಲುಗಳ ಪ್ರಯಾಣದ ದೂರವನ್ನು ಕಡಿತಗೊಳಿಸಲಾಗಿದೆ ಮತ್ತು ಸಮಯ ಬದಲಾಯಿಸಲಾಗಿದೆ 

ಭಾಗಶಃ ರದ್ದು : ರೈಲು ಸಂಖ್ಯೆ 20652 (ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್) ಅರಸೀಕೆರೆ ವರೆಗೆ ಮಾತ್ರ ಸಂಚರಿಸಲಿದ್ದು, ಅರಸೀಕೆರೆ – ಬೆಂಗಳೂರು ನಡುವಿನ ಸೇವೆ ಇರುವುದಿಲ್ಲ. ಅದೇ ರೀತಿ ರೈಲು ಸಂಖ್ಯೆ 12725 (ಕೆಎಸ್‌ಆರ್ ಬೆಂಗಳೂರು – ಧಾರವಾಡ ಎಕ್ಸ್‌ಪ್ರೆಸ್) ಬೆಂಗಳೂರಿನಿಂದ ಅರಸೀಕೆರೆ ನಡುವೆ ರದ್ದಾಗಿದ್ದು, ಅರಸೀಕೆರೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ.

ಸಮಯ ಮರುನಿಗದಿ: ರೈಲು ಸಂಖ್ಯೆ 16239 (ಚಿಕ್ಕಮಗಳೂರು – ಯಶವಂತಪುರ ಎಕ್ಸ್‌ಪ್ರೆಸ್) ಜೂನ್ 07 ಮತ್ತು ಜೂನ್ 14 ರಂದು ನಿಗದಿತ ಸಮಯಕ್ಕಿಂತ 120 ನಿಮಿಷ (2 ಗಂಟೆ) ತಡವಾಗಿ ಚಿಕ್ಕಮಗಳೂರಿನಿಂದ ಹೊರಡಲಿದೆ.

Trains Cancelled on Bengaluru-Shivamogga Route