ತಾಳಗುಪ್ಪ ಟ್ರೈನ್ ಚೈನ್​ ಎಳೆದ ಕೇಸ್​ನಿಂದ ಹಾಸನ ಪರ್ಸ್​ ಕೇಸ್​ವರೆಗೂ ಎಲ್ಲಾ ಕ್ಲೀಯರ್​!

ಮಲೆನಾಡು ಟುಡೆ ಸುದ್ದಿ / ಮೈಸೂರು / ನೈರುತ್ಯ ರೈಲ್ವೆ ವಲಯದ ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್) ರೈಲು ನಿಲ್ದಾಣ ಹಾಗೂ ರೈಲ್ವೆ ಆವರಣದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಜಾಗೃತಿ ಅಭಿಯಾನ ಹಾಗೂ ವಿವಿಧ ಭದ್ರತಾ ಕಾರ್ಯಾಚರಣೆಗಳನ್ನುಹಮ್ಮಿಕೊಂಡಿದೆ.

ನೈರುತ್ಯ ರೈಲ್ವೆ ವಲಯದ ಆಪರೇಷನ್​

  • ಈ ನಿಟ್ಟಿನಲ್ಲಿ ಆಪರೇಷನ್ ಅಮಾನತ್​ ರ್ಯಾಚರಣೆಯ ಅಡಿಯಲ್ಲಿ ಹಾಸನ ರೈಲು ನಿಲ್ದಾಣದ ಆರ್‌ಪಿಎಫ್ ಸಿಬ್ಬಂದಿ, ರೈಲು ಸಂಖ್ಯೆ 11311ರ ಬಿ2 ಬೋಗಿಯಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ನಗದು ಹಾಗೂ ಪ್ರಮುಖ ದಾಖಲೆಗಳನ್ನು ಒಳಗೊಂಡಿದ್ದ ಪರ್ಸ್ ಅನ್ನು ಪತ್ತೆಹಚ್ಚಿದ್ದಾರೆ.ಪರಿಶೀಲನೆ ಬಳಿಕ ಅದನ್ನು ದೂರುದಾರರ ಸಹೋದರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
  • ಸತರ್ಕ್ ಕಾರ್ಯಾಚರಣೆಯ ಅಡಿಯಲ್ಲಿ, ರೈಲು ಸಂಖ್ಯೆ 17310ರಲ್ಲಿ ಶಿವನಿ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಪತ್ತೆಯಾದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ 4475 ರೂಪಾಯಿ ಮೌಲ್ಯದ 8.5 ಲೀಟರ್ ಮದ್ಯದ ಬಾಟಲಿಗಳು ದೊರೆತಿದ್ದು, ಅವುಗಳನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
  • ಹಾಸನದ ಟ್ರಾವೆಲ್ಸ್ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿ, ವೈಯಕ್ತಿಕ ಐಆರ್‌ಸಿಟಿಸಿ ಐಡಿಗಳನ್ನು ಬಳಸಿಕೊಂಡು ಅಕ್ರಮವಾಗಿ ಇ-ಟಿಕೆಟ್ ಕಾಯ್ದಿರಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಲಾಗಿದೆ. ಈ ವೇಳೆ 83837 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ಇದೇ ರೀತಿ ಬೆಂಗಳೂರಿನ ಸೈಬರ್ ಸೆಲ್ ನೀಡಿದ ಮಾಹಿತಿಯ ಮೇರೆಗೆ ಮೈಸೂರಿನಲ್ಲೂ ಅಕ್ರಮ ಟಿಕೆಟ್ ದಂಧೆಕೋರರನ್ನು ಪತ್ತೆಹಚ್ಚಿ, 66591 ರೂಪಾಯಿ ಮೌಲ್ಯದ 21 ಇ-ಟಿಕೆಟ್ ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.
  • ಸಮಯ ಪಾಲನ ಕಾರ್ಯಾಚರಣೆಯ ಅಡಿಯಲ್ಲಿ ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಅನಗತ್ಯವಾಗಿ ಅಲಾರಂ ಚೈನ್ ಎಳೆದು ಸಂಚಾರಕ್ಕೆ ಅಡ್ಡಿಪಡಿಸಿದ ಪ್ರಯಾಣಿಕನ ವಿರುದ್ಧ ಕ್ರಮ ಜರುಗಿಸಲಾಗಿದೆ.

ಇದಷ್ಟೆ ಅಲ್ಲದೆ ಜನ ಜಾಗರಣ ಅಭಿಯಾನದ ಮೂಲಕ ಶಿವಮೊಗ್ಗ ರೈಲು ನಿಲ್ದಾಣದಲ್ಲಿ, ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದರಿಂದ ಆಗುವ ಅಪಾಯಗಳ ಬಗ್ಗೆ ಪ್ರಯಾಣಿಕರಿಗೆ ಅರಿವು ಮೂಡಿಸಲಾಗಿದೆ ಎಂಧರು ಮೈಸೂರು ವಿಭಾಗದ ವಿಭಾಗೀಯ ಹಣಕಾಸು ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವಿ ಎಸ್. ಹುಲ್ಲತ್ತಿ ಅವರು ಈ ಕಾರ್ಯಾಚರಣೆಗಳ ಕುರಿತು ಮಾಹಿತಿ ನೀಡಿದ್ದಾರೆ.