ವಿಧಿ ಬರಹ,ಹೀಗೂ ಆಗುತ್ತೆ! ಕುಂಚೇನಹಳ್ಳಿ ಘಟನೆಯಲ್ಲಿ ಓರ್ವ ಸಾವು!

ಹಂಚಿಕೊಳ್ಳಿ
WhatsApp Facebook X Telegram
Bike Catches Fire After Hitting Bus

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಸಮೀಪದ ಸುತ್ತುಕೋಟೆ ಬಳಿ ನಿನ್ನೆ ದಿನ ಒಂದು ಆಕ್ಸಿಡೆಂಟ್ ಆಗಿದೆ. ಘಟನೆಯಲ್ಲಿ ಬೈಕ್​ ಸವಾರನೊಬ್ಬ ಸ್ಥಳದಲ್ಲಿಯೇ ಬೆಂಕಿಯಿಂದಾಗಿ ಸಾವನ್ನಪ್ಪಿದ್ದಾನೆ. ಅಲ್ಲದೆ ಬೈಕ್​ ಸುಟ್ಟು ಕರಕಲಾಗಿದೆ.

ಕುಂಚೇನಹಳ್ಳಿ ಘಟನೆಯಲ್ಲಿ ಓರ್ವ ಸಾವು

ಖಾಸಗಿ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ಗೆ ಬೆಂಕಿ ಹೊತ್ತಿಕೊಂಡು, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿಕಾರಿಪುರದಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಬಸ್ ಹಾಗೂ ಶಿವಮೊಗ್ಗದಿಂದ ಶಿಕಾರಿಪುರದ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬೈಕ್​ ಸವಾರ ಸ್ಪೀಡಾಗಿ ಬಂದು, ನೇರವಾಗಿ ಬಸ್​ನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಬೈಕ್​ ಬಸ್​ನ ಮುಂಬಾಗದಲ್ಲಿ ಸಿಲುಕಿಕೊಂಡಿತಷ್ಟೆ ಅಲ್ಲದೆ, ಕಿಡಿ ಹೊತ್ತಿಕೊಂಡು ಬೈಕ್​ ಧಗಧಗಿಸಿದೆ. ಈ ವೇಳೆ ಅದಾಗಲೇ ಅಪಘಾತದಲ್ಲಿ ಗಾಯಗೊಂಡ ಬೈಕ್​ ಸವಾರನಿಗೆ ಬೆಂಕಿ ಹೊತ್ತಿಕೊಂಡಿದೆ. ಆತ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಬೈಕ್ ಹಿಂಬದಿಯಲ್ಲಿ ಕೂತಿದ್ದವನಿಗೂ ತೀವ್ರ ಪೆಟ್ಟಾಗಿದ್ದು, ಆತನ ಪರಿಸ್ಥಿತಿ ಸೀರಿಯಸ್ ಇದೆ.

ಮೃತನನ್ನು 23 ವರ್ಷದ ಅಬ್ನಾನ್ ಎಂದು ಗುರುಸಿಲಾಗಿದೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor