SHIVAMOGGA CRIME NEWS TODAY

ಒಂದೆ ಮನೆಯಲ್ಲಿ 15 ನಾಯಿ! 112 ಗೆ ಶಿಫ್ಟ್​ ಆದ ಬೌ..ಬೌ ಕೇಸ್! ಕುತೂಹಲವಾಗಿದೆ ಈ ವಿಚಾರ

ajjimane ganesh ನವೀಕರಣ: 29 ಮೇ 2026, 8:40 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ 112ಗೆ ಕೆಲವೊಮ್ಮೆ ಕರುಳ ಸಂಕಟ ಬರುವಂತಹ ಕೇಸ್​ಗಳು ಬರುತ್ತವೆ. ಆದರೂ ಅವರುಗಳ ತಾಳ್ಮೆ ಮೆಚ್ಚಬೇಕು! ಏತಕ್ಕಾದ್ರೂ ಫೋನ್ ಮಾಡಿದ್ರು ಸಹ ನಾವು ಪೊಲೀಸನವ್ರು! ಏನ್​ ಸಮಸ್ಯೆ ಕಾಲ್ ಮಾಡಿದ್ರಲ್ಲಾ ಅಂತಾ ತಾಳ್ಮೆಯಿಂದಲೇ ಕೇಳುತ್ತಾರೆ. ಸ್ಥಳಕ್ಕೆ ಬರುತ್ತಾರೆ. ತೋಚಿದ್ರರಲ್ಲಿ ಒಂದಿಷ್ಟು ಇತ್ಯರ್ಥ ಮಾಡಿ ಎಲ್ಲರನ್ನ ಸಮಾಧಾನ ಮಾಡುತ್ತಾರೆ.

ಪೊಲೀಸರ ಈ ತಾಳ್ಮೆಗೆ ಸವಾಲಾಗುವಂತಹ ಕೇಸ್​ವೊಂದರ ಬಗ್ಗೆ ಹೇಳವುದಕ್ಕಾಗಿಯೇ ಈ ಪೀಠಿಕೆ. ಅಂದಹಾಗೆ ಈ ಪ್ರಸಂಗ ನಡೆದಿರೋದು ಭದ್ರಾವತಿ ತಾಲ್ಲೂಕು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ .

112 ಗೆ ಶಿಫ್ಟ್​ ಆದ ಬೌ..ಬೌ ಕೇಸ್!

ಇಲ್ಲಿನ ವಸತಿ ಪ್ರದೇಶವೊಂದರಲ್ಲಿ ಒಂದೆ ಮನೆಯಲ್ಲಿ ನಿವಾಸಿಯೊಬ್ಬರು 10 ರಿಂದ 15 ನಾಯಿಗಳನ್ನು ಸಾಕಿದ್ದಾರೆ. ನಾಯಿಗಳು ಅಂದ್ಮೇಲೆ ಬೊಗೋಳೋದನ್ನ ನಿಲ್ಲಿಸ್ತಾವಾ? ಖಂಡಿತ ಇಲ್ಲ. ಆದರೆ, ಈ ನಾಯಿಗಳ ಬೌಬೌ ಗಲಾಟೆಗೆ ಅಕ್ಕಪಕ್ಕದವರು ಸುಸ್ತು ಹೊಡೆದಿದ್ದಾರೆ. ಅಲ್ಲದೆ ಇನ್ನಾಗಲ್ಲ ಎಂದುಕೊಂಡು ‘112’ ಗೆ ಕರೆ ಮಾಡಿದ್ದಾರೆ.

ಕರೆ ಬಂದಮೇಲೆ ಕೇಸ್ ಅಟೆಂಡ್ ಮಾಡಿದ 112 ಸಿಬ್ಬಂದಿ ಸ್ಥಳಿಯರ ಅಹವಾಲು ಕೇಳಿದ್ದಾರೆ. ಬಳಿಕ ನಾಯಿಗಳ ಮಾಲೀಕರಿಗೆ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯ ಕುರಿತು ಮನವರಿಕೆ ಮಾಡಿದ್ದಾರೆ. ವಸತಿ ಪ್ರದೇಶದಲ್ಲಿ ಇಷ್ಟೊಂದು ನಾಯಿಗಳನ್ನು ಒಟ್ಟಿಗೆ ಇರಿಸಿಕೊಳ್ಳುವುದರಿಂದ ಆಗುವ ಸಮಸ್ಯೆಗಳನ್ನು ವಿವರಿಸಿದ ಸಿಬ್ಬಂದಿ, ಕೂಡಲೇ ಆ ಎಲ್ಲಾ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಎಚ್ಚರಿಕೆ ಕೊಟ್ಟು ಕೇಸ್​ ಕ್ಲೋಸ್ ಮಾಡಿದ್ರು.

ಪೊಲೀಸರ ರಂಗಪ್ರವೇಶದಿಂದಾಗಿ ಅಂತಿಮವಾಗಿ ನಾಯಿಗಳ ಬೌಬೌ ಕೇಸ್​ಗೆ ತಾರ್ಕಿಕ ಅಂತ್ಯ ಸಿಕ್ಕಂತಾಯ್ತು! ಆದರೆ ಕೊಲೆ,ಸುಲಿಗೆಯಂತಹ ಅಪರಾಧ ಪ್ರಕರಣಗಳ ಜೊತೆ ಜೊತೆಯಲ್ಲಿ ಪೊಲೀಸರು ಇಂತಹ ಬೀದಿ ಜಗಳ, ಕೇರಿ ಸಮಸ್ಯೆ, ಓಣಿ ವ್ಯಾಜ್ಯಗಳನ್ನ ಪರಿಹರಿಸುತ್ತಿರುವುದರಿಂದಲೇ ಕ್ರೈಂ ರೇಟು ಹೆಚ್ಚಾಗುತ್ತಿಲ್ಲ ಎಂಬುದು ವಾಸ್ತವ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ