ಶಿವಮೊಗ್ಗದಲ್ಲಿ ಸಿದ್ದರಾಮಯ್ಯರ ದಿನಗಳು! ಈ ವಿಡಿಯೋ ಸ್ಟೋರಿ ಮಿಸ್​ ಮಾಡದೇನೆ ನೋಡಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಿಎಂ ಸಿದ್ದರಾಮಯ್ಯ ಈಗ ಮಾಜಿ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಅವರ ರಾಜೀನಾಮೆ ಅಕ್ಸೆಪ್ಟ್ ಆದರೆ, ಸಿದ್ದಾಂತದ ಹಠವಾದಿ ರಾಜಕಾರಣಿಯ ಸಿಎಂ ಚಾಪ್ಟರ್​ ಮುಕ್ತಾಯವಾಗುತ್ತದೆ. ಈ ನಡುವೆ ಸಿಎಂ ಸಿದ್ದರಾಮಯ್ಯರ ಬಗ್ಗೆ ಸಾಕಷ್ಟು ಚರ್ಚೆಗಳು, ಸಮಾಲೋಚನೆಗಳು, ಗುಣಗಾನಗಳು, ಟೀಕೆ ಟಿಪ್ಪಣಿಗಳು, ಅವರ ಸರಿತಪ್ಪುಗಳನ್ನು ವಿಮರ್ಶೆ ಮಾಡುವುದರಿಂದ ಹಿಡಿದು, ಏನೇ ಆಗಲಿ ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ ಎಂಬಲ್ಲಿನವರೆಗೂ ಜನರ ಬಾಯಿಮಾತುಗಳು ಆಡಿಕೊಳ್ಳುತ್ತವೆ.

ಈ ನಿಟ್ಟಿನಲ್ಲಿ ಮಲೆನಾಡು ಟುಡೆಯ ಕಡೆಯಿಂದ ಸಿಎಂ ಸಿದ್ದರಾಮಯ್ಯರ ಶಿವಮೊಗ್ಗದ ದಿನಗಳನ್ನು ನೆನಪು ಮಾಡಿಸಬೇಕಲ್ಲ ಎಂದಾಗ ಸಿಕ್ಕಿದ್ದು ಈ ವಿಡಿಯೋ. ಟುಡೆಯ ಲೈಬ್ರರಿಯಲ್ಲಿರುವ ಈ ವಿಡಿಯೋದಲ್ಲಿ ರಫ್​ ಆಂಡ್ ಟಪ್​ ಹಾಗೂ ಆಂಗ್ರಿ ಯಂಗ್​ ಮ್ಯಾನ್ ಆಗಿದ್ದ ಸಿದ್ದರಾಮಯ್ಯರನ್ನ ಕಾಣಬಹುದು!

ಶಿವಮೊಗ್ಗದಲ್ಲಿ ಸಿದ್ದರಾಮಯ್ಯರ ದಿನಗಳು

ಹಿಂದೊಮ್ಮೆ ರಾಜಕಾರಣದ ಅಂಗಳದಲ್ಲಿ ನಡೆದ ಘಟನೆಯೊಂದರ ಸಂಬಂಧ ಪ್ರತಿಭಟನೆಗಾಗಿ ಶಿವಮೊಗ್ಗಕ್ಕೆ ಬಂದಿದ್ದ ಸಿದ್ದರಾಮಯ್ಯ ಇಲ್ಲಿ ಅಬ್ಬರಿಸಿ ರಾಜಕಾರಣದ ಆಕ್ರೋಶದ ಜೊತೆಗೆ ಕಾನೂನಿನ ಪಾಠವನ್ನು ಸಹ ಮಾಡಿ ಹೋಗಿದ್ದರು. ಅವತ್ತು ನಮ್ಮ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನ ನಿಮಗಾಗಿ ನೀಡಿದ್ದೇವೆ.

ಈ ವಿಡಿಯೋದಲ್ಲಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡ್ತಾ ಸರ್ಕಾರದ ವಿರುದ್ಧ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡ್ತಾರೆ. ಅಲ್ಲದೆ ಸಣ್ಣಪುಟ್ಟದ್ದಾಗಿ ಮಾಡುವ ಬದಲು, ದೊಡ್ಡ ಮಟ್ಟದಲ್ಲಿ ಸೇರಿ ಸರ್ಕಾರದ ಎದೆ ನಡುಗುವಂತಹ ಹೋರಾಟವನ್ನು ರೂಪಿಸಬೇಕು ಎಂದು ಅವರು ಕಾರ್ಯಕರ್ತರಿಗೆ ನಿರ್ದೇಶನ ನೀಡ್ತಾರೆ. 20000 ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವಂತೆ ಸೂಚಿಸ್ತಾರೆ. ಅವರ ಈ ಹೇಳಿಕೆ ಹೋರಾಟದ ಕುದಿನೆಲದಲ್ಲಿ ಕಾಂಗ್ರೆಸ್​ ಕಾರ್ಯಕರ್ತರಿಗೆ ಮತ್ತಷ್ಟು ಚೈತನ್ಯ ನೀಡಿತ್ತು.

ನಡೆದ ಘಟನೆಯನ್ನು ಹೊರತುಪಡಿಸಿ, ಸೀನ್​ನಲ್ಲಿ ಸಿದ್ದರಾಮಯ್ಯರ ಶಿವಮೊಗ್ಗದ ದಿನಗಳನ್ನು ನೀವು ಕಾಣಬಹುದು.ಜೊತೆಯಲ್ಲಿ ಈಗಿನ ಮುಖಂಡರುಗಳು ಆಗ ಹೇಗಿದ್ದರು! ಹೇಗೆ ಕಾಣಿಸಿದ್ರು! ಎಂಬುದನ್ನು ಸಹ ಗಮನಿಸಬಹುದು. ಇಷ್ಟವಾದರೆ ವಿಡಿಯೋವನ್ನು ನಿಮ್ಮವರ ಜೊತೆಗೆ ಹಂಚಿಕೊಳ್ಳಿ.

ಸಿದ್ದರಾಮಯ್ಯರವರು ಶಿವಮೊಗ್ಗಕ್ಕೆ ಬಂದ ಸಂದರ್ಭದ ಹಳೆಯ ದೃಶ್ಯಗಳು! ಮಲೆನಾಡು ಟುಡೆ ಪ್ರೇಕ್ಷರಿಗಾಗಿ !