ನಿಮ್ಮ ಮನೆಯ ಹಳೇ ಕುಕ್ಕರ್, ಮಿಕ್ಸಿ ಕೊಟ್ಟು ಹೊಸ ಪ್ರೆಸ್ಟೀಜ್ ಖರೀದಿಸಿ: ಶಿವಮೊಗ್ಗದಲ್ಲಿ ಭರ್ಜರಿ ಎಕ್ಸ್‌ಚೇಂಜ್ ಆಫರ್ ಆರಂಭ!

ಹಂಚಿಕೊಳ್ಳಿ
WhatsApp Facebook X Telegram
Prestige Exchange Offer in Shivamogga
Prestige Exchange Offer in Shivamogga

Prestige Exchange Offer :ಶಿವಮೊಗ್ಗ:ಶಿವಮೊಗ್ಗದ ಗೃಹಿಣಿಯರು ಹಾಗೂ ಅಡುಗೆಮನೆ ಉಪಕರಣಗಳ ಪ್ರಿಯರಿಗಾಗಿ ಸಪ್ತಗಿರಿ ಎಂಟರ್‌ಪ್ರೈಸಸ್ ಒಡೆತನದ ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್ ಶೋರೂಮ್ ಅತ್ಯಾಕರ್ಷಕ ಬಂಪರ್ ಎಕ್ಸ್‌ಚೇಂಜ್ ಆಫರ್ ಅನ್ನು ಪ್ರಕಟಿಸಿದೆ. ಈ ವಿಶೇಷ ಯೋಜನೆಯಡಿ ಗ್ರಾಹಕರು ತಮ್ಮ ಮನೆಯಲ್ಲಿರುವ ಹಳೆಯ ಅಡುಗೆ ಪರಿಕರಗಳನ್ನು ವಿನಿಮಯ ಮಾಡಿಕೊಂಡು, ಅತ್ಯಾಧುನಿಕ ಗೃಹೋಪಯೋಗಿ ಉತ್ಪನ್ನಗಳನ್ನು ಭಾರೀ ರಿಯಾಯಿತಿ ದರದಲ್ಲಿ ತಮ್ಮದಾಗಿಸಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಈ ದಿನ ಕರೆಂಟ್​​ ಇರಲ್ಲ 

Prestige Exchange Offer ಯಾವೆಲ್ಲಾ ವಸ್ತುಗಳಿಗೆ ಎಕ್ಸ್‌ಚೇಂಜ್ ಲಭ್ಯ?

ಈ ಆಫರ್‌ನ ಅತ್ಯಂತ ವಿಶೇಷತೆ ಎಂದರೆ, ಗ್ರಾಹಕರು ಯಾವುದೇ ಬ್ರ್ಯಾಂಡ್‌ನ ಹಳೆಯ ಪ್ರೆಶರ್ ಕುಕ್ಕರ್, ತವಾ, ಕಡಾಯಿ, ಗ್ಯಾಸ್ ಸ್ಟವ್ ಹಾಗೂ ಮಿಕ್ಸರ್ ಗ್ರೈಂಡರ್‌ಗಳನ್ನು ತಂದು ಇಲ್ಲಿ ನೀಡಬಹುದು. ಇವುಗಳ ಬದಲಿಗೆ ಸುಧಾರಿತ ತಂತ್ರಜ್ಞಾನದ ಹೊಚ್ಚಹೊಸ ಪ್ರೆಸ್ಟೀಜ್ ಉತ್ಪನ್ನಗಳನ್ನು ಆಕರ್ಷಕ ಡಿಸ್ಕೌಂಟ್‌ಗಳೊಂದಿಗೆ ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿದೆ. ಇದರೊಂದಿಗೆ ಹಬ್ಬದ ಸೀಸನ್‌ನಂತೆ ಹಲವು ಎಕ್ಸ್‌ಕ್ಲೂಸಿವ್ ಕೊಡುಗೆಗಳನ್ನು ಕೂಡ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. 

ಶಿವಮೊಗ್ಗ ನಗರದ ಪ್ರಮುಖ ಎರಡು ಭಾಗಗಳಲ್ಲಿ ಈ ಆಫರ್ ಲಭ್ಯವಿದೆ. ನಗರದ ಕುವೆಂಪು ರಸ್ತೆಯ ಶಿವಮೂರ್ತಿ ಸರ್ಕಲ್ ಬಳಿ ಇರುವ ಮುಖ್ಯ ಶಾಖೆ ಹಾಗೂ ವಿನೋಬನಗರ ಪೊಲೀಸ್ ಚೌಕಿ ಸಮೀಪವಿರುವ ಮತ್ತೊಂದು ಶಾಖೆಗೆ ಭೇಟಿ ನೀಡಿ ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆಫರ್‌ನ ಹೆಚ್ಚಿನ ವಿವರಗಳಿಗಾಗಿ ಕುವೆಂಪು ರಸ್ತೆ ಶಾಖೆಯ ಫೋನ್ ನಂಬರ್: 08182-356505, 8971168073 ಅಥವಾ ವಿನೋಬನಗರ ಶಾಖೆಯ ನಂಬರ್: 08182-476511, 9741716418 ಗೆ ಸಂಪರ್ಕಿಸಲು ಕೋರಲಾಗಿದೆ.

Prestige Exchange Offer in Shivamogga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor