ಬೆಂಗಳೂರು-ಶಿವಮೊಗ್ಗ ರೈಲು ಪ್ರಯಾಣಿಕರ ಗಮನಕ್ಕೆ: ಈ ದಿನ ಹಲವು ರೈಲುಗಳ ಸಂಚಾರ ವ್ಯತ್ಯಯ

ಹಂಚಿಕೊಳ್ಳಿ
WhatsApp Facebook X Telegram
SWR Train Trains Cancelled Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
SWR Train Trains Cancelled Birur-Talguppa Railway Train Servis Changed Changed Shivamogga-Talaguppa Train Marikamba Jatre Special Train Railway Halt Extended Special Train to Sagara Marikamba Jathre from Feb 3 Shivamogga Train Timings Change 2026 Dasara Special Trains

ಶಿವಮೊಗ್ಗ: ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯಾಪ್ತಿಗೆ ಬರುವ ಹಿರೇಹಳ್ಳಿ ಯಾರ್ಡ್‌ನಲ್ಲಿ ತುರ್ತು ಸುರಕ್ಷತಾ ಕಾರ್ಯ ಹಾಗೂ ಸಿಗ್ನಲಿಂಗ್ ಆಧುನೀಕರಣ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 20ರಂದು ಬೆಂಗಳೂರು, ಶಿವಮೊಗ್ಗ ಹಾಗೂ ಮೈಸೂರು ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ಸೇವೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

ಏರ್‌ಪೋರ್ಟ್ ನೈಟ್ ಲ್ಯಾಂಡಿಂಗ್ , ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸೇರಿ, ಸಮಗ್ರ ಸುದ್ದಿಗಳಿಗಾಗಿ ಇ-ಪೇಪರ್ ಓದಿ

ರೈಲುಗಳ ಮಾರ್ಗ ಬದಲಾವಣೆ 

ಮುಖ್ಯವಾಗಿ ಮೇ 20 ರಂದು ಸಂಚರಿಸುವ ಯಶವಂತಪುರ-ಶಿವಮೊಗ್ಗ ಟೌನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 20689) ತನ್ನ ನಿಯಮಿತ ಹಾದಿಯನ್ನು ಬದಲಿಸಿ ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ಕಾರಣದಿಂದಾಗಿ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಿಗೆ ಈ ರೈಲು ಬರುವುದಿಲ್ಲ. ಅದೇ ರೀತಿ ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 20676) ಕೂಡ ಹಾಸನ ಮಾರ್ಗವಾಗಿ ಸಂಚರಿಸಲಿದ್ದು, ಪಾಂಡವಪುರದಿಂದ ತಿಪಟೂರಿನವರೆಗಿನ ಎಲ್ಲ ನಿಲುಗಡೆಗಳನ್ನು ರದ್ದುಗೊಳಿಸಲಾಗಿದೆ. 

Train Servis Changed ಭಾಗಶಃ ರದ್ದಾದ ರೈಲುಗಳು

ಕೆಲವು ಮೆಮು (MEMU) ರೈಲುಗಳ ಸಂಚಾರವನ್ನೂ ಮೊಟಕುಗೊಳಿಸಲಾಗಿದೆ. ಬೆಂಗಳೂರಿನಿಂದ ತುಮಕೂರಿಗೆ ತೆರಳುವ ರೈಲು (ಸಂಖ್ಯೆ: 66567) ದೊಡ್ಡಬೆಲೆ ನಿಲ್ದಾಣದಲ್ಲೇ ತನ್ನ ಪ್ರಯಾಣ ಅಂತ್ಯಗೊಳಿಸಲಿದೆ. ಮರು ಪ್ರಯಾಣದಲ್ಲಿ ತುಮಕೂರಿನಿಂದ ಹೊರಡಬೇಕಿದ್ದ ರೈಲು (ಸಂಖ್ಯೆ: 66572) ತುಮಕೂರಿನ ಬದಲಾಗಿ ದೊಡ್ಡಬೆಲೆ ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಬೆಂಗಳೂರಿಗೆ ಹಿಂತಿರುಗಲಿದೆ. ಅಂದರೆ ದೊಡ್ಡಬೆಲೆ ಮತ್ತು ತುಮಕೂರು ನಡುವೆ ಈ ರೈಲುಗಳ ಸೇವೆ ಲಭ್ಯವಿರುವುದಿಲ್ಲ.

Train Servis Changed ಸಂಚಾರ ವಿಳಂಬ ಮತ್ತು ನಿಯಂತ್ರಣ

ಕಾಮಗಾರಿಯ ಕಾರಣದಿಂದಾಗಿ ಕೆಲವು ರೈಲುಗಳು ಮಾರ್ಗಮಧ್ಯೆ ನಿಲುಗಡೆಯಾಗಲಿವೆ. ವೇಲಂಕಣಿ–ವಾಸ್ಕೊ ಡ ಗಾಮ ಎಕ್ಸ್‌ಪ್ರೆಸ್ (ಸಂಖ್ಯೆ: 17316) ಸುಮಾರು 60 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸಲಿದೆ. ಅಲ್ಲದೆ, ಜನಪ್ರಿಯ ಸಿದ್ದಗಂಗಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ಸಂಖ್ಯೆ: 12725) ಮತ್ತು ಯಶವಂತಪುರ–ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ (ಸಂಖ್ಯೆ: 12649) ರೈಲುಗಳು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿವೆ.

Train Servis Changed Changed on Bengaluru-Shivamogga Route

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor