ಒಂದು RTO ಎಪಿಕೆ ಚಲನ್​ನಿಂದ ಹೋಯ್ತು 4 ಲಕ್ಷ ರೂಪಾಯಿ, ಏನಿದು ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ : RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಪ್ರವಾಸಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿಗಳ ಬಸ್ ಅಪಘಾತ; ಇಬ್ಬರು ಸಾವು, ಹಲವರಿಗೆ ಗಾಯ

RTO E-Challan Scam ಘಟನೆ ವಿವರ

ದೂರುದಾರರಿಗೆ ಕಳೆದ ಏಪ್ರಿಲ್ 29ರಂದು ವಾಟ್ಸಾಪ್‌ನಲ್ಲಿ RTO E-challan Apk ಎಂಬ ಹೆಸರಿನ ಫೈಲ್ ಬಂದಿತ್ತು. ಅದನ್ನು ನಿಜವಾದ ಚಲನ್ ಇರಬಹುದೆಂದು ನಂಬಿದ ದೂರುದಾರರು, ಫೈಲ್ ಓಪನ್ ಮಾಡಿದ್ದಾರೆ. ಅದನ್ನು ಕ್ಲಿಕ್ ಮಾಡಿದ ತಕ್ಷಣ ಮೊಬೈಲ್‌ನಲ್ಲಿ ah.hanno ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಆಗಿದೆ. ನಂತರ ದೂರುದಾರರು ಅದರಲ್ಲಿ ತಮ್ಮ ಕೆವೈಸಿ (KYC) ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ಆದರೆ, ಆಪ್‌ನಲ್ಲಿ ಯಾವುದೇ ಮಾಹಿತಿ ಕಂಡುಬಾರದ ಕಾರಣ ಅವರು ಅದರಿಂದ ಹೊರಬಂದಿದ್ದಾರೆ.

ಆದರೆ, ವಂಚಕರು ಅಪ್ಲಿಕೇಶನ್ ಮೂಲಕ ದೂರುದಾರರ ಮೊಬೈಲ್‌ನ ಸಂಪೂರ್ಣ ನಿಯಂತ್ರಣ ಪಡೆದುಕೊಂಡಿದ್ದರು. ಮೇ 2ರಂದು ದೂರುದಾರರು ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಶಾಕ್​​ ಕಾದಿತ್ತು. ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 4,09,317 ರೂ. ಮತ್ತು ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಯಿಂದ 25,189 ರೂ. ಸೇರಿ ಒಟ್ಟು 4,34,507/- ರೂಪಾಯಿ ಹಣ ವರ್ಗಾವಣೆಯಾಗಿರುವ ಬಗ್ಗೆ ಮೆಸೇಜ್ ಬಂದಿದೆ. 

ಅಪರಿಚಿತ ವ್ಯಕ್ತಿಗಳು ಆರ್​ಟಿಒ ಹೆಸರಿನಲ್ಲಿ ನಕಲಿ ಫೈಲ್ ಕಳುಹಿಸಿ, ವೈಯಕ್ತಿಕ ಮಾಹಿತಿ ಕದ್ದು ಹಣ ಲೂಟಿ ಮಾಡಿದ್ದಾರೆ ಎಂದು ದೂರುದಾರರು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

RTO E-Challan Scam Man Loses 4.34 Lakh

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor