ಧರ್ಮಸ್ಥಳದಲ್ಲಿ ಯುಗಾದಿ ಸ್ನೇಹಪರ್ವ – 2 ಯಶಸ್ವಿ! 

Sneha Parva-2 ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ  ನೇತ್ರಾವತಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ “ಯುಗಾದಿ ನವ ಪಲ್ಲವಕೆ ನಾಂದಿ” ಸ್ನೇಹ ಪರ್ವ- 2 ಕಾರ್ಯಕ್ರಮವು  ಏಪ್ರಿಲ್​​ 26 ರಂದು ಯಶಸ್ವಿಯಾಗಿ ನೆರವೇರಿತು.

ಶಿವಮೊಗ್ಗ: ಮಹಿಳೆಯರು ಸಭೆಗೆ ಹೋಗ್ತಿದ್ದಾಗ ನಡೀತು ಈ ಘಟನೆ, 24 ಗಂಟೆಯಲ್ಲಿ ಇಬ್ಬರ ಬಂಧನ

ಬೆಳಿಗ್ಗೆ 7 ಗಂಟೆಗೆ  ಆರಂಭವಾದ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಭಾಧ್ಯಕ್ಷರಾದ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಇದೇ ವೇಳೆ ಬಳಗದ ಸದಸ್ಯರಿಗೆ ಅಭಿನಂದನೆ, ಹಾಗೂ ಸಕ್ರಿಯ ಬರಹಗಾರರಿಗೆ ಯುಗಾದಿ ಮಾಣಿಕ್ಯ, ಸಿರಿಮನದ ಸಿರಿವಂತರು, ಸುಜ್ಞಾನ ಸಿರಿ,ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿಗಳಿಗೆ ಪ್ರತಿಭಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಯು.ಐ.ಕ್ಕೂ ರಸಪ್ರಶ್ನೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟಕರರೂ ಆದ ಬಿ. ಭುಜಬಲಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ    ಪ್ರಾಧ್ಯಾಪಕರು ಹಾಗೂ ಯುಗಾದಿ ನವ ಪಲ್ಲವಕೆ ನಾಂದಿ ಬಳಗದ ಸಂಸ್ಥಾಪಕರು ಆದ ಶ್ರೀನಾಗ್ ಪಿ ಎಸ್,ಶಿಕ್ಷಕರು ಮತ್ತು ಸಾಹಿತಿಗಳಾದ ಮಂಜುಳಾ ಪ್ರಕಾಶ್ , ರಾಜೇಶ್ವರಿ ಉಮೇಶ್, ಪತ್ರಕರ್ತರಾದ ಅರುಣ್ ಮಂಜುನಾಥ್, ಕೃಷಿಕರು ಮತ್ತು ಸಾಹಿತಿಗಳಾದ ಶ್ರೀ ಶಶಿಧರ ಎಚ್.ಎಸ್. ಕೊಪ್ಪ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಯುಗಾದಿಯ ಬಳಗದ ಅದರ ಕಾರ್ಯ ವೈಖರಿ ಹಾಗೂ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು. ಅಧ್ಯಕ್ಷೀಯ ಭಾಷಣದಲ್ಲಿ ಬಿ. ಭುಜಬಲಿ ಅವರು ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.

ಮಧ್ಯಾಹ್ನ 12 ಗಂಟೆಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮನರಂಜಿಸಿತು.ತಮ್ಮ ನಿತ್ಯ ಜೀವನದ ನೋವು ಕಷ್ಟಗಳನ್ನು ಮರೆತಿ ತುಂಬು ಕುಟುಂಬದ ಕಾರ್ಯಕ್ರಮದಲ್ಲಿ ಒಟ್ಟಾಗಿ ಸೇರಿ ಸಂಭ್ರಮಿಸಿದ ಆನಂದ ಪ್ರತಿಯೊಬ್ಬರಲ್ಲಿ ಕಂಡಿದ್ದು ಸತ್ಯ.

ಕಾರ್ಯಕ್ರಮದ ನಿರೂಪಣೆಯನ್ನು ಬಳಗದ ವ್ಯವಸ್ಥಾಪಕರಲ್ಲಿ ಒಬ್ಬರಾದ ಶ್ರೀಲತಾ ಭಾರ್ಗವ್ ನಡೆಸಿಕೊಟ್ಟರು, ಸ್ವಾಗತವನ್ನು ಸುಜಾತ  ನೆರವೇರಿಸಿದರು.ಶೈಲಾ ಭಟ್ಟ ಅವರ ವಂದನಾರ್ಪಣೆಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು. ಈ ವೇಳೆ ಕಾರ್ಯಕ್ರಮದಲ್ಲಿ ಯುಗಾದಿ ವ್ಯವಸ್ಥಾಪಕರುಗಳಾದ ಸೌಮ್ಯ ಗುರು ಕಾರ್ಲೆ, ವೀಣಾ ಉಮೇಶ್ , ಆಶಾ ಅಡೂರು,ಹಾಗೂ ಬಳಗದ ಸಕ್ರಿಯ ಸದಸ್ಯರುಗಳಾದ ವಿಂಧ್ಯಾ ಎಸ್ ರೈ,ಅವಿನಾಶ್ ಸೆರೆಮನಿ,ವಿಜಯ್ ಕುಮಾರ್ ಜೈನ್, ಅರುಣ್, ಶೃತಿ ವಿನಯ್, ನ್ಯಾನ್ಸಿ ನೆಲ್ಯಾಡಿ, ರಾಜು, ಕಿರಣ್ ಕುಮಾರ್, ಸರ್ವಮಂಗಳ ಶೆಟ್ಟಿ ಸೇರಿದಂತೆ ಕವಿಗಳು ಹಾಗೂ ಸಾಹಿತ್ಯ ಪ್ರಿಯರು ಇದ್ದರು.

Sneha Parva-2 Cultural Fest Ends in Dharmasthala

Sneha Parva-2 Cultural Fest Ends in Dharmasthala
Sneha Parva-2 Cultural Fest Ends in Dharmasthala