ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ಜನತೆಯೊಂದಿಗೆ ತಮಗಿರುವ ಭಾವನಾತ್ಮಕ ನಂಟನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೇದಿಕೆ ಮೇಲೆ ಅತ್ಯಂತ ಮಾರ್ಮಿಕವಾಗಿ ಬಿಚ್ಚಿಟ್ಟಿದ್ದರು..ಹಲವು ವರ್ಷಗಳ ಹಿಂದೆ ಶಿಕಾರಿಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ತಾವು ರಾಜ್ಯದಲ್ಲಿ ಮತ್ತೆ ಪ್ರವಾಸ ಮಾಡುತ್ತಿರುವುದು ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕಾಗಲಿ ಅಥವಾ ಪಕ್ಷದ ಮಾಜಿ ಅಧ್ಯಕ್ಷ ಎಂಬ ಕಾರಣಕ್ಕಾಗಲಿ ಅಲ್ಲ.
ನಮ್ಮ ಯಡಿಯೂರಪ್ಪ ಎಂದರೆನೇ ನನಗೆ ಅತಿ ದೊಡ್ಡ ಸಂತೋಷ:
ರೈತರು ನೆಮ್ಮದಿಯಿಂದ ಬದುಕುವುದನ್ನು ನೋಡಲು ಮತ್ತು ಅವರಿಗೆ ಮತ್ತೊಮ್ಮೆ ಶಕ್ತಿ ತುಂಬುವ ಉದ್ದೇಶದಿಂದ ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದರು. ಬಡವರು, ಹಳ್ಳಿಯ ತಾಯಂದಿರು ಮತ್ತು ಅಣ್ಣ ತಮ್ಮಂದಿರು ತಮ್ಮನ್ನು ಪ್ರೀತಿಯಿಂದ ‘ನಮ್ಮ ಯಡಿಯೂರಪ್ಪ’ ಎಂದು ಕರೆದಾಗ ಸಿಗುವ ಅದ್ಭುತ ಸಂತೋಷ ಬೇರೆ ಯಾವುದೇ ದೊಡ್ಡ ಹುದ್ದೆ ಅಥವಾ ಸಂದರ್ಭದಲ್ಲಿ ಖಂಡಿತಾ ಸಿಗುವುದಿಲ್ಲ ಎಂದು ಅವರು ಭಾವುಕರಾಗಿ ನುಡಿದಿದ್ದರು.
ಜನಸಾಮಾನ್ಯರ ಈ ನಿಷ್ಕಲ್ಮಶ ಪ್ರೀತಿಯೇ ತಮಗೆ ಅತಿ ದೊಡ್ಡ ಪ್ರಶಸ್ತಿ ಹಾಗೂ ಆ ಪ್ರೀತಿಗಾಗಿಯೇ ತಾವು ಸದಾ ಮಿಡಿಯುವುದಾಗಿ ಯಡಿಯೂರಪ್ಪ ಅವರು ತಮ್ಮ ಮನದಾಳದ ಮಾತುಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದರು.
ಐವತ್ತು ವರ್ಷಗಳ ರಾಜಕಾರಣದ ಸಂಭ್ರಮದಲ್ಲಿರುವ ಬಿಎಸ್ ಯಡಿಯೂರಪ್ಪನವರ ಈ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ. ನಿರಂತರ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ.
B S Yediyurappa, Yediyurappa emotional speech, Namma Yediyurappa, Karnataka politics, Malenadu Today news, BJP Karnataka, former CM Yediyurappa, farmers leader BSY, #BSYediyurappa, #NammaYediyurappa, #KarnatakaPolitics, #MalenaduToday, #FarmersLeader, #BSY, #ಬಿಎಸ್ವೈ, #ನಮ್ಮಯಡಿಯೂರಪ್ಪ, #ಕರ್ನಾಟಕರಾಜಕೀಯ, #ಮಲೆನಾಡುಟುಡೆ
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
