ಮಲೆನಾಡು ಟುಡೆ ದಿನಭವಿಷ್ಯ / ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ, ಶುಕ್ಲ ಪಕ್ಷದ ಏಕಾದಶಿ ತಿಥಿಯು ಇಂದು ರಾತ್ರಿ 7.59 ರವರೆಗೆ ಇರಲಿದ್ದು, ತದನಂತರ ದ್ವಾದಶಿ ಆರಂಭವಾಗಲಿದೆ. ಪುಬ್ಬಾ ನಕ್ಷತ್ರ ರಾತ್ರಿ 10.58 ರವರೆಗೆ ಇರಲಿದ್ದು, ಆ ಬಳಿಕ ಉತ್ತರ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಘಳಿಗೆ 4.36 ರಿಂದ 6.10 ರವರೆಗೆ ಲಭ್ಯವಿದ್ದು, ಇಂದು ಸರ್ವ ಏಕಾದಶಿ ಆಚರಣೆ ಇದೆ. ರಾಹುಕಾಲ ಹಾಗೂ ಬೆಳಿಗ್ಗೆ 10.30 ರಿಂದ 12.00 ರವರೆಗೆ ಯಮಗಂಡ ಕಾಲ ಇರಲಿದೆ.
ಮಲೆನಾಡು ಟುಡೆ ದಿನಭವಿಷ್ಯ
ಮೇಷ / ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಗಳಿದ್ದು, ಕೌಟುಂಬಿಕ ವಲಯದಲ್ಲಿ ಕಿರಿಕಿರಿ . ಆರ್ಥಿಕ ವಿಚಾರದಲ್ಲಿ ಈ ದಿನ ಸಾಮಾನ್ಯವಾಗಿದ್ದು ಅನಾರೋಗ್ಯ ಕಾಡಬಹುದು. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಗೊಂದಲಮಯ ವಾತಾವರಣ
ವೃಷಭ / ಒತ್ತಡ ಹೆಚ್ಚಾಗಲಿವೆ. ಪುಣ್ಯಕ್ಷೇತ್ರಗಳ ದರ್ಶನ, ಮನೆಯೊಳಗೆ ಹಾಗೂ ಹೊರಗೆ ಜವಾಬ್ದಾರಿ ಹೆಚ್ಚಲಿದೆ. ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು, ಉದ್ಯೋಗದಲ್ಲಿ ಕೆಲಸದ ಹೊರೆ ಹೆಚ್ಚಾಗಬಹದು.
ಮಿಥುನ / ಹೊಸ ಮಿತ್ರರ ಪರಿಚಯ, ಶುಭ ಸುದ್ದಿ ಕಿವಿಗೆ ಬೀಳಲಿವೆ. ಕೈಗೊಂಡ ವ್ಯವಹಾರಗಳಲ್ಲಿ ಯಶಸ್ಸು ದೊರೆಯಲಿದ್ದು, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.
ಕರ್ಕಾಟಕ / ಹೊಸದಾಗಿ ಸಾಲ ಆಗಬಹುದು. ಬಂಧು ಮಿತ್ರರೊಂದಿಗೆ ಮನಸ್ತಾಪ ಉಂಟಾಗಲಿವೆ. ಹಣಕಾಸಿನ ವೆಚ್ಚ ಹೆಚ್ಚಾಗಲಿದ್ದು, ಶ್ರಮ ಅಧಿಕವಾಗಲಿದೆ. ಅನಾರೋಗ್ಯ, ವ್ಯಾಪಾರ, ಉದ್ಯೋಗದಲ್ಲಿ ಒತ್ತಡದ ದಿನ.
ಸಿಂಹ / ಆಹ್ವಾನವೊಂದು ಬರಲಿದ್ದು, ವಿದ್ಯಾರ್ಥಿಗಳ ಪ್ರಯತ್ನಗಳಿಗೆ ಸಕಾರಾತ್ಮಕ ಫಲ ಸಿಗಲಿದ್ದು, ವಾಹನ ಹಾಗೂ ಗೃಹ ಯೋಗವಿದೆ. ವಿವಾದ ಬಗೆಹರಿಯಲಿದ್ದು, ವ್ಯಾಪಾರವು ವಿಸ್ತರಣೆ, ಉದ್ಯೋಗದಲ್ಲಿ ಅಭಿವೃದ್ಧಿ .
ಕನ್ಯಾ / ಹಳೆಯ ಸಾಲ ತೀರುವುದು, ಹೊಸ ಯೋಜನೆ ಕಾರ್ಯಗತಗೊಳಿಸಲಿದ್ದಾರೆ. ಗತಕಾಲದ ಘಟನೆಗಳನ್ನು ಸ್ಮರಿಸಿಕೊಳ್ಳಲಿದ್ದು, ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದೆ.
ತುಲಾ / ಶುಭ ವಾರ್ತೆ, ಆಮಂತ್ರಣಗಳನ್ನು ಸ್ವೀಕರಿಸಲಿದ್ದಾರೆ. ವಿದ್ಯಾರ್ಥಿ ಹಾಗೂ ನಿರುದ್ಯೋಗಿಗಳ ಯತ್ನಗಳು ಫಲಪ್ರದವಾಗಲಿದ್ದು, ವ್ಯಾಪಾರವು ಉತ್ಸಾಹದಿಂದ ಸಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಯೋಚನೆ ಮೂಡಲಿದೆ.
ವೃಶ್ಚಿಕ / ಆದಾಯದ ಮೂಲಗಳು ವೃದ್ಧಿಯಾಗಲಿದ್ದು, ಕಾರ್ಯ ಜಯ ಸಿದ್ಧಿಸಲಿದೆ. ಆಪ್ತರಿಂದ ಶುಭ ಸುದ್ದಿ, ದಿಢೀರ್ ಪ್ರಯಾಣ, ದೇವಾಲಯಗಳಿಗೆ ಭೇಟಿ , ವ್ಯಾಪಾರ ಹಾಗೂ ಉದ್ಯೋಗ ಆಶಾದಾಯಕವಾಗಿರಲಿದೆ.
ಧನುಸ್ಸು / ಕೌಟುಂಬಿಕ ಜೀವನದಲ್ಲಿ ಅಶಾಂತಿ , ಹಣಕಾಸಿನ ಖರ್ಚು ಹೆಚ್ಚಾಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಹೋಗಬಹುದು. ಆಸ್ತಿ ವಿವಾದ, ವ್ಯಾಪಾರದಲ್ಲಿ ಒತ್ತಡ ಹಾಗೂ ಉದ್ಯೋಗದಲ್ಲಿ ಗೊಂದಲ.
ಮಕರ / ದೈನಂದಿನ ವ್ಯವಹಾರಗಳು ಕೊಂಚ ಮಂದಗತಿಯಲ್ಲಿ ಸಾಗಲಿದ್ದು, ಅನಾರೋಗ್ಯ ಸಮಸ್ಯೆಗಳು ಎದುರಾಗಲಿವೆ. ಕುಟುಂಬ ಸದಸ್ಯರೊಡನೆ ವಿವಾದ ಉಂಟಾಗಲಿದ್ದು, ವ್ಯಾಪಾರ ಹಾಗೂ ಉದ್ಯೋಗವು ನಿಧಾನಗತಿಯಲ್ಲಿ ಸಾಗಲಿದೆ.
ಕುಂಭ / ಹೊಸ ಕಾರ್ಯಗಳಿಗೆ ಚಾಲನೆ ನೀಡಲಿದ್ದು, ಸ್ನೇಹಿತರ ಭೇಟಿ. ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಪುಣ್ಯಕ್ಷೇತ್ರಗಳ ದರ್ಶನ ಮಾಡಲಿದ್ದಾರೆ. ಗೃಹ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದ್ದು, ವ್ಯಾಪಾರ , ಉದ್ಯೋಗದಲ್ಲಿನ ಅಡೆತಡೆ ನಿವಾರಣೆಯಾಗಲಿವೆ.
ಮೀನ / ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಒಲಿದುಬರಲಿದ್ದು, ಪ್ರಮುಖ ವ್ಯವಹಾರಗಳಲ್ಲಿ ಜಯ ಸಿಗಲಿದೆ. ಶುಭ ಸಮಾರಂಭ, ವಾಹನ ಯೋಗ, ಹೊಸ ಸಂಪರ್ಕ , ವ್ಯಾಪಾರ ಲಾಭದಾಯಕ, ಉದ್ಯೋಗ ದಲ್ಲಿ ಧನಲಾಭ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
