ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ ಶುಕ್ಲ ಪಕ್ಷದ ನವಮಿ ತಿಥಿಯು ರಾತ್ರಿ 10.07 ರವರೆಗೆ ಇರಲಿದ್ದು, ತದನಂತರ ದಶಮಿ ಆರಂಭವಾಗಲಿದೆ. ಆಶ್ಲೇಷ ನಕ್ಷತ್ರ ರಾತ್ರಿ 11.35 ರವರೆಗೆ ಇರಲಿದೆ. ಅಮೃತ ಗಳಿಗೆಯು ರಾತ್ರಿ 10.02 ರಿಂದ 11.34 ರವರೆಗೆ ಒದಗಿಬರಲಿದೆ, ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ. ಇಂದಿನ ನಿತ್ಯ ಭವಿಷ್ಯ ಹೀಗಿದೆ ಗಮನಿಸಿ
ಇವತ್ತಿನ ನಿತ್ಯ ಭವಿಷ್ಯ
ಮೇಷ / ಕೈಗೊಂಡ ಕೆಲಸ ಮುಂದೂಡುವ ಸಾಧ್ಯತೆಯಿದೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ , ಆರೋಗ್ಯದ ಕಡೆ ಗಮನ ಹರಿಸುವುದು ಸೂಕ್ತ. ಪುಣ್ಯಕ್ಷೇತ್ರಗಳ ದರ್ಶನ ಮಾಡಲಿದ್ದೀರಿ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಖರ್ಚು ವೆಚ್ಚ ಹೆಚ್ಚಾಗಲಿವೆ.
ವೃಷಭ / ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಛಲ ಮತ್ತು ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಶುಭ ಸಮಾರಂಭ, ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಸಿಹಿಸುದ್ದಿ ಸಿಗಲಿದೆ. ಉದ್ಯೊಗ ಹಾಗೂ ವೃತ್ತಿ ಜೀವನ ಸುಗಮವಾಗಿ ಸಾಗಲಿದೆ.
ಮಿಥುನ / ಸಾಲದ ಬಾಧೆ . ಬಂಧುಮಿತ್ರರೊಂದಿಗೆ ವಾಗ್ವಾದ, ಮಾನಸಿಕ ತೊಳಲಾಟ ಮತ್ತು ಅನಾರೋಗ್ಯ . ಯಾವುದೇ ಕೆಲಸಗಳಲ್ಲಿ ಆತುರ ಬೇಡ. ಉದ್ಯೋಗ ಹಾಗೂ ವ್ಯಾಪಾರ ರಂಗದಲ್ಲಿ ಸಾಮಾನ್ಯ ದಿನ .
ಕರ್ಕಾಟಕ / ಹೊಸ ಒಡನಾಟ ಬೆಳೆಯಲಿದೆ. ಉದ್ಯೋಗಕ್ಕಾಗಿ ಸಂದರ್ಶನ. ವ್ಯವಹಾರದಲ್ಲೂ ಜಯ ನಿಮ್ಮದಾಗಲಿದೆ. ಮನೆಯಲ್ಲಿ ಶುಭ ಕಾರ್ಯ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಾಗಲಿದ್ದು. ದಿನ ಸಂತಸದಿಂದಿರುವುದು
ಪ್ರಮುಖ ರಾಶಿಗಳ ಇಂದಿನ ನಿತ್ಯ ಭವಿಷ್ಯ
ಸಿಂಹ / ವಿನಾಕಾರಣ ಕಲಹ ಸಾಧ್ಯತೆಯಿದೆ. ಆರ್ಥಿಕ ನಷ್ಟ, ದೈಹಿಕ ಶ್ರಮ. ಅನಾರೋಗ್ಯ, ಉದ್ಯೋಗ ಮತ್ತು ವ್ಯಾಪಾರ ಎಂದಿನಂತೆ ಸಾಧಾರಣವಾಗಿ ನಡೆಯಲಿವೆ.
ಕನ್ಯಾ / ಸಮಯಕ್ಕೆ ಸಹಾಯ ಒದಗಲಿದೆ. ವಸ್ತು ಲಾಭ ನಿಮಗಿದೆ. ಉದ್ಯೋಗಕ್ಕಾಗಿ ನಡೆಸುವ ಪ್ರಯತ್ನಗಳಿಗೆ ಸಕಾರಾತ್ಮಕ ಫಲ ಸಿಗಲಿದೆ. ಉದ್ಯೋಗ ವ್ಯಾಪಾರ ವಹಿವಾಟಿನಲ್ಲಿ ಗಮನಾರ್ಹ ಪ್ರಗತಿ ಕಾಣಲಿದ್ದೀರಿ.
ತುಲಾ / ಹೊಸ ಯೋಜನೆಗಳಿಗೆ ಚಾಲನೆ ನೀಡಲಿದ್ದೀರಿ. ಬಂಧು ಮತ್ತು ಮಿತ್ರರ ಬೆಂಬಲ ದೊರೆಯಲಿದೆ. ಶುಭ ಸಮಾರಂಭಗಳಿಗೆ ಆಹ್ವಾನ ಬರಲಿವೆ. ಉದ್ಯೋಗ ಮತ್ತು ವೃತ್ತಿ ರಂಗದಲ್ಲಿ ಶುಭ ವಾತಾವರಣ ಇರಲಿದೆ.
ವೃಶ್ಚಿಕ / ಸಣ್ಣಪುಟ್ಟ ಅಡೆತಡೆ ಎದುರಾಗಲಿವೆ. ಹಣಕಾಸಿನ ವೆಚ್ಚ ಹೆಚ್ಚಾಗಲಿದೆ. ಕುಟುಂಬದ ಸದಸ್ಯರಿಂದ ಹೆಚ್ಚಿನ ಒತ್ತಡ . ಮನೆಯೊಳಗೆ ಮತ್ತು ಹೊರಗೆ ಕಿರಿಕಿರಿ ಅನುಭವಿಸುವಿರಿ. ಉದ್ಯೋಗ ವ್ಯಾಪಾರದಲ್ಲಿ ನಿರುತ್ಸಾಹ
ಧನುಸ್ಸು / ಆರ್ಥಿಕ ಸ್ಥಿತಿಗತಿ ಕೊಂಚ ನಿರಾಸೆ ಮೂಡಿಸಲಿವೆ. ಅನಗತ್ಯ ಖರ್ಚು. ಮನೆಯವರಿಂದ ಒತ್ತಡ. ದೇವಸ್ಥಾನಗಳ ದರ್ಶನ ಪಡೆಯಲಿದ್ದೀರಿ. ಅನಿರೀಕ್ಷಿತ ವಿಚಿತ್ರ ಘಟನೆ ನಡೆಯಬಹುದು. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ನಿರಾಸಕ್ತಿ .
ಉಳಿದ ರಾಶಿಗಳ ಇಂದಿನ ನಿತ್ಯ ಭವಿಷ್ಯ
ಮಕರ / ಮನೆಯಲ್ಲಿ ಶುಭ ಕಾರ್ಯಗ. ಆರ್ಥಿಕ ಪರಿಸ್ಥಿತಿಯು ಗಣನೀಯವಾಗಿ ಸುಧಾರಿಸಲಿದೆ.ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಉತ್ಸಾಹದಿಂದ ಮುನ್ನುಗ್ಗಲಿದ್ದೀರಿ.
ಕುಂಭ / ಅಂದುಕೊಂಡ ಕೆಲಸಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಉದ್ಯೋಗ ಸಂದರ್ಶನಕ್ಕಾಗಿ ಕರೆಗಳು ಬರಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ ಗೋಚರಿಸಲಿದೆ.
ಮೀನ / ಒತ್ತಡ ಹೆಚ್ಚಾಗಲಿವೆ. ಅನಾರೋಗ್ಯದ ಸಮಸ್ಯೆ . ಪ್ರಮುಖ ಕೆಲಸ ಮುಂದೂಡುವುದು ಅನಿವಾರ್ಯವಾಗಲಿದೆ. ದೂರದ ಸಂಬಂಧಿಕರ ಭೇಟಿ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿಯದಿನ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
