ಕೇರಳ ಲಾಟರಿ ಹೆಸರಿನಲ್ಲಿ ಶಿವಮೊಗ್ಗ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚನೆ

ಹಂಚಿಕೊಳ್ಳಿ
WhatsApp Facebook X Telegram
Without Taking Loan
Without Taking Loan

ಶಿವಮೊಗ್ಗ:  ನಗರದ ವ್ಯಕ್ತಿಯೊಬ್ಬರಿಗೆ ಕೇರಳ ಲಾಟರಿ ಹೆಸರಿನಲ್ಲಿ ಬರೋಬ್ಬರಿ 1.84 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶಿವಮೊಗ್ಗ: JNNCE ಹಾಸ್ಟೆಲ್ ರೂಮ್‌ಗೆ ನುಗ್ಗಿದ ಕಳ್ಳರು, ಕದ್ದಿದ್ದೇನು ಗೊತ್ತಾ? 

ಘಟನೆ ವಿವರ

ಕಳೆದ ಏಪ್ರಿಲ್ 15ರಂದು ಸಂತ್ರಸ್ತ ವ್ಯಕ್ತಿಯ ಮೊಬೈಲ್​​​ಗೆ ವಿವಿಧ ನಂಬರ್​​ಗಳಿಂದ ಮೆಸೇಜ್​ ಬಂದಿತ್ತು. ಆ ವೇಳೆ ತಾವು ಕೇರಳ ಲಾಟರಿ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ವಂಚಕರು, ನಿಮಗೆ 12 ಲಕ್ಷ ರೂಪಾಯಿಗಳ ಲಾಟರಿ ಬಹುಮಾನ ಬಂದಿದೆ ಎಂದು ನಂಬಿಸಿದ್ದರು. ಈ ಸುಳ್ಳು ಆಮಿಷಕ್ಕೆ ಒಳಗಾದ ದೂರುದಾರರು ವಂಚಕರ ಜಾಲದಲ್ಲಿ ಸಿಲುಕಿದ್ದಾರೆ.

ನಂತರ ವಾಟ್ಸಾಪ್ ಮೂಲಕ ಕ್ಯೂಆರ್ ಕೋಡ್ ಗಳನ್ನು ಕಳುಹಿಸಿದ ಕಿಡಿಗೇಡಿಗಳು, ಬಹುಮಾನದ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲು ಟಿಡಿಎಸ್ (TDS), ತೆರಿಗೆ ಮತ್ತು ಪ್ರಕ್ರಿಯೆ ಶುಲ್ಕಗಳನ್ನು ಪಾವತಿಸಬೇಕು ಎಂದು ಹೇಳಿದ್ದಾರೆ. ಇದನ್ನು ನಿಜವೆಂದಯ ನಂಬಿದ ಸಂತ್ರಸ್ತರು ತಮ್ಮ ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗಳಿಂದ ವಿವಿಧ ಹಂತಗಳಲ್ಲಿ ಒಟ್ಟು 1,84,296/- ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. 

ಹಣ ವರ್ಗಾವಣೆಯಾದ ನಂತರ ವಂಚಕರು ಯಾವುದೇ ಲಾಟರಿ ಮೊತ್ತವನ್ನು ನೀಡದೆ ಯಾಮಾರಿಸಿದ್ದಾರೆ. ತಾವು ಮೋಸ ಹೋಗಿರುವುದು ತಡವಾಗಿ ಅರಿವಿಗೆ ಬಂದ ಕೂಡಲೇ ಸಂತ್ರಸ್ತರು ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. 

Cyber Fraud in Shimoga Man Scammed of 1.84 Lakh

Cyber Fraud in Shimoga ThirthahalliCyber crime today
Cyber Fraud in Shimoga
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor