ಶಿವಮೊಗ್ಗ ನಗರದ ವಾದಿ-ಎ-ಹುದಾ ಬಡಾವಣೆಯಲ್ಲಿ ನಿನ್ನೆ ರಾತ್ರಿ ಅಪ್ರಾಪ್ತನೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ. ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡ ಮಚ್ಚು , ಲಾಂಗುಗಳಂತಹ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ.
ತಲೆಯಲ್ಲಿ ಸಿಲುಕಿಕೊಂಡ ಮಚ್ಚು
ಘಟನೆಯಲ್ಲಿ ಮಚ್ಚೊಂದು ಅಪ್ರಾಪ್ತನ ತಲೆಯಲ್ಲಿ ಸಿಲುಕಿಕೊಂಡಿದ್ದು, ಆ ಸ್ಥಿತಿಯಲ್ಲಿಯೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನ ಟೈಲ್ಸ್ ಕೆಲಸ ಮಾಡುವ 17 ವರ್ಷದ ಕೌಸಿ (ಹೆಸರು ಬದಲಿಸಲಾಗಿದೆ) ಎಂದು ಗುರತಿಸಲಾಗಿದೆ.
ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ
ತುಂಗಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯ ಸಂಬಂಧ ಮಲೆನಾಡು ಟುಡೆಗೆ ಸಿಕ್ಕ ಪೊಲೀಸ್ ಮಾಹಿತಿ ಪ್ರಕಾರ, ಘಟನೆಯಲ್ಲಿ ಯುವಕ ಸ್ಥಿತಿ ಗಂಭೀರವಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿರುವುದರಿಂದ ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ಆತ ನೀಡುವ ಮಾಹಿತಿ ಆಧರಿಸಿ ಆರೋಪಿಗಳನ್ನ ಪತ್ತೆಹಚ್ಚಬೇಕಿದೆ.
ಈ ಮಧ್ಯೆ ಸ್ಥಳೀಯರು ನೀಡುವ ಮಾಹಿತಿ ಪ್ರಕಾರ, ಹುಡುಗಿ ವಿಚಾರಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಆರು ಮಂದಿಯಿಂದ ದುಷ್ಕರ್ಮಿಗಳ ತಂಡ ಈತನ ಮೇಲೆ ದಾಳಿ ಮಾಡಿದೆ.
ಇನ್ನೂ ಆಪ್ರಾಪ್ತನ ತಂದೆಯು ಸಹ ಮಾತನಾಡಿದ್ದು, ತಮ್ಮ ಮಗ ಯಾವುದೇ ವಿಚಾರಕ್ಕೆ ಹೋದವನಲ್ಲ. ಊಟ ಮಾಡಿ ಐಪಿಎಲ್ ಮ್ಯಾಚ್ ನೋಡುತ್ತಾ ಕುಳಿತಿದ್ದಾಗ. ಸ್ಥಳೀಯರು ಫೋನ್ ಮಾಡಿ ಹೀಗಾಗಿದೆ ಎಂದು ತಿಳಿಸಿದರು. ಅಲ್ಲದೆ ಘಟನೆ ನಡೆದಾಗ ಸ್ಥಳದಲ್ಲಿದ್ದವರು ಆತನನ್ನು ಆಸ್ಪತ್ರೆ ದಾಖಲಿಸಿದ್ದರು. ಏನಾಗಿದೆ ? ಏಕೆ ಆಗಿದೆ ಎಂಬುದು ತಮಗೂ ಸಹ ಇನ್ನಷ್ಟೆ ಗೊತ್ತಾಗಬೇಕಿದೆ ಎಂದಿದ್ದಾರೆ.
ತುಂಗಾನಗರ ಪೊಲೀಸ್ ಠಾಣೆಯ ಲಿಮಿಟ್ಸ್ನಲ್ಲಿ ನಡೆದ ಈ ಘಟನೆ ಸಂಬಂಧ ಪೊಲೀಸರು ವಿವರ ಕಲೆ ಹಾಕುತ್ತಿದ್ದು ಈಗಾಗಲೆ ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಸುಳ್ಳು ವರದಿಗಳನ್ನ ಬಿತ್ತರಿಸಲಾಗುತ್ತಿದ್ದು, ಈ ರೀತಿಯಲ್ಲಿ ಯಾವುದೇ ರೀತಿ ಸುಳ್ಳು ಹಾಗೂ ಅಸಂಬದ್ಧ ವರದಿಗಳನ್ನ ಹರಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಮಲೆನಾಡು ಟುಡೆಗೆ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಾಳು ಸ್ಥಿತಿ ಗಂಭೀರವಾಗಿದ್ದಾನೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದಷ್ಟೆ ತಿಳಿಸಿರುವ ಪೊಲೀಸರು, ಸೋಶಿಯಲ್ ಮೀಡಿಯಾ ಸುಳ್ಳುಗಳನ್ನ ನಂಬಬೇಡಿ ಎಂದಿದ್ದಾರೆ.
ವಿಶೇಷ ಸೂಚನೆ : ಪೊಲೀಸ್ ವರದಿ ,ಸ್ಥಳೀಯರ ಮಾಹಿತಿ ಅನ್ವಯ ನಡೆದ ಘಟನೆಯನ್ನು ಸುದ್ದಿ ಮಾಧ್ಯಮವಾಗಿ ನೀಡುವ ದೃಷ್ಟಿಯಿಂದ ಈ ರಿಪೋರ್ಟ್ ನೀಡಲಾಗಿದ್ದು, ಯಾವುದೇ ವೈಯಕ್ತಿಕ ಹಾಗೂ ಇತರೇ ಖಾಸಗಿ ಮಾಹಿತಿಗಳನ್ನು ನೀಡಲಾಗಿಲ್ಲ.!
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
