ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಶುಕ್ಲ ಪಕ್ಷದ ಚೌತಿ ತಿಥಿಯು ಬೆಳಿಗ್ಗೆ 8.39 ರವರೆಗೆ ಇರಲಿದ್ದು, ತದನಂತರ ಪಂಚಮಿ ಆರಂಭವಾಗಲಿದೆ. ರೋಹಿಣಿ ನಕ್ಷತ್ರ ಬೆಳಿಗ್ಗೆ 6.20 ರವರೆಗೆ ಇದ್ದು, ಬಳಿಕ ಮೃಗಶಿರಾ ನಕ್ಷತ್ರ ಮುಂದುವರೆಯಲಿದೆ. ಅಮೃತ ಘಳಿಗೆ ರಾತ್ರಿ 8.26 ರಿಂದ 9.11 ರವರೆಗೆ ,ರಾಹುಕಾಲ ಮಧ್ಯಾಹ್ನ 3.00 ರಿಂದ ಸಂಜೆ 4.30 ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮಲೆನಾಡು ಟುಡೆ ದಿನ ಭವಿಷ್ಯ
ಮೇಷ / ಕುಟುಂಬ ಸದಸ್ಯರೊಂದಿಗೆ ವಿವಾದ, ಅನಾರೋಗ್ಯ ಕಾಡಬಹುದು. ಕೆಲಸಗಳಲ್ಲಿ ವಿಳಂಬವಾಗಲಿದ್ದು, ಆರ್ಥಿಕ ಪರಿಸ್ಥಿತಿ ಮಂದಗತಿಯಲ್ಲಿ ಸಾಗಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗಲಿದ್ದು, ಆಧ್ಯಾತ್ಮಿಕ ಚಿಂತನೆ ಮೂಡಲಿದೆ.
ವೃಷಭ / ಹೊಸ ಮಿತ್ರರ ಪರಿಚಯವಾಗಲಿದ್ದು, ಬರಬೇಕಾದ ಬಾಕಿ ಹಣ ವಸೂಲಾಗಲಿದೆ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಪ್ರಗತಿ . ವಾಹನ ಯೋಗ ಹಾಗೂ ಸನ್ಮಾನ ಪ್ರಾಪ್ತವಾಗಲಿವೆ.
ಮಿಥುನ / ಸಾಲಕ್ಕಾಗಿ ಪ್ರಯತ್ನ , ಬಂಧುಗಳೊಂದಿಗೆ ಮಾತಿನ ಚಕಮಕಿ . ಆರೋಗ್ಯದಲ್ಲಿ ಏರುಪೇರಾಗಲಿದ್ದು, ವ್ಯವಹಾರಗಳಲ್ಲಿ ಅಡೆತಡೆ ಎದುರಾಗಲಿವೆ ಮತ್ತು ಉದ್ಯೋಗ ಹಾಗೂ ವ್ಯಾಪಾರದಲ್ಲಿ ಬದಲಾವಣೆ ಕಂಡುಬರಲಿವೆ.
ಕಟಕ / ನೂತನ ಉದ್ಯೋಗ, ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ವ್ಯವಹಾರ ಅನುಕೂಲಕರವಾಗಿರಲಿದ್ದು, ಉದ್ಯೋಗದಲ್ಲಿ ಈ ದಿನ ಉತ್ಸಾಹದಿಂದ ಸಾಗಲಿದೆ.
ಸಿಂಹ / ಆರ್ಥಿಕ ಪ್ರಗತಿ , ವ್ಯವಹಾರಗಳಲ್ಲಿ ಯಶಸ್ಸು ಹಾಗೂ ಶುಭ ವಾರ್ತೆ. ದೂರದ ಬಂಧುಗಳ ಸಮಾಗಮವಾಗಲಿದ್ದು, ಆಸ್ತಿ ವಿವಾದ ಬಗೆಹರಿಯಲಿವೆ ಹಾಗೂ ಉದ್ಯೋಗ ಮತ್ತು ವ್ಯಾಪಾರ ಉತ್ಸಾಹದಿಂದ ಮುಂದುವರೆಯಲಿವೆ.
ಕನ್ಯಾ / ವಿವಾದ ಎದುರಿಸಲಿದ್ದು, ಆಲೋಚನೆಗಳು ಫಲಕಾರಿಯಾಗುವುದಿಲ್ಲ. ಜವಾಬ್ದಾರಿ ಹೆಚ್ಚಾಗಲಿದ್ದು, ಉದ್ಯೋಗಿಗಳಿಗೆ ಒತ್ತಡ ಎದುರಾಗಲಿವೆ, ವ್ಯವಹಾರದಲ್ಲಿ ಗಡಿಬಿಡಿ ತುಂಬಿರಲಿದೆ..
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಮಲೆನಾಡು ಟುಡೆ ದಿನ ಭವಿಷ್ಯ
ತುಲಾ / ವ್ಯವಹಾರಗಳಲ್ಲಿ ಅಡೆತಡೆ, ಹಣದ ವ್ಯಯ ಹಾಗೂ ಮಿತ್ರರೊಂದಿಗೆ ವಿವಾದ. ಅನಾರೋಗ್ಯ , ವ್ಯಾಪಾರ ಮತ್ತು ಉದ್ಯೋಗದಲ್ಲಿ ಬದಲಾವಣೆಗಳಾಗಲಿವೆ.
ವೃಶ್ಚಿಕ / ಬಂಧುಗಳನ್ನು ಭೇಟಿಯಾಗಲಿದ್ದು, ಸಂದರ್ಶನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವ್ಯವಹಾರಗಳಲ್ಲಿ ಯಶಸ್ಸು ಹಾಗೂ ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣವಿರಲಿದೆ.
ಧನುಸ್ಸು / ಆರ್ಥಿಕ ವಹಿವಾಟು ಉತ್ಸಾಹದಿಂದ ಸಾಗಲಿದ್ದು, ವ್ಯವಹಾರಗಳಲ್ಲಿನ ಅಡೆತಡೆ ನಿವಾರಣೆಯಾಗಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹದಾಯಕ ವಾತಾವರಣವಿರಲಿದೆ.
ಮಕರ / ಆರ್ಥಿಕ ವಹಿವಾಟು ಸಾಧಾರಣವಾಗಿರಲಿದ್ದು, ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ವ್ಯವಹಾರನಿಧಾನಗತಿಯಲ್ಲಿ ಸಾಗಲಿದ್ದು, ಖರ್ಚು ಮತ್ತು ಶ್ರಮ ಹೆಚ್ಚಾಗಲಿದೆ ಹಾಗೂ ಅನಾರೋಗ್ಯ ಮತ್ತು ಉದ್ಯೋಗದಲ್ಲಿ ಹಿನ್ನಡೆ ಕಂಡುಬರಲಿದೆ.
ಕುಂಭ / ಬಂಧುಗಳು ಮತ್ತು ಮಿತ್ರರೊಂದಿಗೆ ವಿವಾದ ಉಂಟಾಗಲಿದ್ದು, ಆಲೋಚನೆಗಳು ಕೈಗೂಡುವುದಿಲ್ಲ. ಉದ್ಯೋಗ ಹಾಗೂ ವ್ಯಾಪಾರದಲ್ಲಿಂದು ನಿರುತ್ಸಾಹ ಮೂಡಬಹುದು, ದೈವ ದರ್ಶನ ಪಡೆಯಲಿದ್ದಾರೆ.
ಮೀನ / ವ್ಯವಹಾರಗಳಲ್ಲಿ ಅನುಕೂಲತೆ, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಆಪ್ತರ ಸಹಾಯ ದೊರೆಯಲಿದ್ದು, ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವರು ಮತ್ತು ಉದ್ಯೋಗ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲಿದ್ದಾರೆ.

