STATE NEWS

ಶತಮಾನದ ಶಾಲೆಗಳ ರಕ್ಷಣೆಗೆ ಮಾಸ್ಟರ್ ಪ್ಲಾನ್: 3,222 ಶಾಲೆಗಳ ಉಳಿವಿಗಾಗಿ ಸರ್ಕಾರಕ್ಕೆ 31 ಶಿಫಾರಸುಗಳ ವರದಿ ಸಲ್ಲಿಕೆ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Heritage Schools ಬೆಂಗಳೂರು : ಕನ್ನಡದ ಅಸ್ಮಿತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಶತಮಾನ ಕಂಡ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಿದ್ಧಪಡಿಸಿದ ಮಹತ್ವದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು 206 ಪುಟಗಳ ಈ ವರದಿಯನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಸಿದ್ದು, ರಾಜ್ಯದಲ್ಲಿರುವ 3,222 ಶತಮಾನದ ಶಾಲೆಗಳನ್ನು ರಕ್ಷಿಸಲು 31 ಪ್ರಮುಖ ಶಿಫಾರಸುಗಳನ್ನು ಮಾಡಿದ್ದಾರೆ. 

ಮಹನೀಯರು ಓದಿದ ಶಾಲೆಗಳಿಗೆ ಪಾರಂಪರಿಕ ಗೌರವ

ನಾಡಿನ ಧೀಮಂತ ನಾಯಕರಾದ ಕುವೆಂಪು, ದ.ರಾ. ಬೇಂದ್ರೆ, ಎಂ. ವಿಶ್ವೇಶ್ವರಯ್ಯ, ಡಿ.ವಿ. ಗುಂಡಪ್ಪ, ಯು.ಆರ್. ಅನಂತಮೂರ್ತಿ, ಜನರಲ್ ಕೆ.ಎಂ. ಕಾರ್ಯಪ್ಪ, ದೇವರಾಜ ಅರಸು ಹಾಗೂ ಎಸ್. ಬಂಗಾರಪ್ಪ ಅವರಂತಹ ಮಹನೀಯರು ಅಕ್ಷರ ಕಲಿತ ಈ ಶಾಲೆಗಳನ್ನು ಪಾರಂಪರಿಕ ಶಾಲೆಗಳು ಎಂದು ಘೋಷಿಸಬೇಕು ಎಂದು ವರದಿ ಆಗ್ರಹಿಸಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದರಂತೆ 31 ಶಾಲೆಗಳನ್ನು ಮಾದರಿ ಪಾರಂಪರಿಕ ಶಾಲೆಗಳಾಗಿ ಅಭಿವೃದ್ಧಿಪಡಿಸಿ, ಅಲ್ಲಿ ಆಯಾ ಭಾಗದ ಸಾಧಕರ ಕುರಿತ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂದು ಸೂಚಿಸಲಾಗಿದೆ. 

ಶತಮಾನದ ಶಾಲೆಗಳ ನಿರ್ವಹಣೆಗಾಗಿ ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಕೋಶ ಸ್ಥಾಪಿಸಬೇಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ಅಧಿಕಾರಿಯನ್ನು ನೇಮಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ಈ ಶಾಲೆಗಳಿಗೆ ವಿಜ್ಞಾನ ಪ್ರಯೋಗಾಲಯ, ಇತಿಹಾಸ ಮತ್ತು ಪರಿಸರ ವಸ್ತು ಸಂಗ್ರಹಾಲಯ ಒದಗಿಸುವುದರ ಜೊತೆಗೆ, ಅಗತ್ಯ ಶಿಕ್ಷಕರನ್ನು ಕಾಯಂ ಆಗಿ ನೇಮಕ ಮಾಡಬೇಕು. ಅಲ್ಲದೆ, ಈ ಶಾಲೆಗಳ ಸುತ್ತಮುತ್ತ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಮುನ್ನ ಸಾರ್ವಜನಿಕ ಚರ್ಚೆಯಾಗಬೇಕು ಎಂಬ ಕಠಿಣ ನಿಲುವು ತಳೆಯಲಾಗಿದೆ. 

ಕಳೆದ 10 ವರ್ಷಗಳಲ್ಲಿ ಮುಚ್ಚಿಹೋದ ಶಾಲೆಗಳ ಬಗ್ಗೆ ಗಂಭೀರ ಅಧ್ಯಯನ ನಡೆದಿಲ್ಲದಿರುವುದು ಹಾಗೂ ಸಾವಿರಾರು ಶಾಲೆಗಳಲ್ಲಿ ದಾಖಲಾತಿ ಒಂದಂಕಿಗೆ ಕುಸಿದಿರುವುದು ವರದಿಯಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ನೀಡಲಾಗಿದ್ದ ₹25 ಕೋಟಿ ಅನುದಾನದಿಂದ 240 ಶಾಲೆಗಳು ಅಭಿವೃದ್ಧಿಯಾಗಿದ್ದವು, ಆದರೆ ನಂತರ ಈ ಯೋಜನೆ ಸ್ಥಗಿತಗೊಂಡಿದ್ದನ್ನು ವರದಿ ನೆನಪಿಸಿದೆ. ಜಾಗತೀಕರಣದ ನಡುವೆ ಈ ಶಾಲೆಗಳನ್ನು ಪುನಶ್ಚೇತನಗೊಳಿಸುವುದು ಪ್ರಜಾಸತ್ತಾತ್ಮಕ ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. (Crisis)

ಹೆಚ್ಚು ಶತಮಾನದ ಶಾಲೆಗಳಿರುವ ಜಿಲ್ಲೆಗಳು

ವರದಿಯ ಪ್ರಕಾರ ವಿಜಯಪುರ (250), ಚಿಕ್ಕೋಡಿ (242), ಧಾರವಾಡ (238), ಬೆಳಗಾವಿ (225) ಮತ್ತು ತುಮಕೂರು (202) ಜಿಲ್ಲೆಗಳು ಅತಿ ಹೆಚ್ಚು ಶತಮಾನ ಕಂಡ ಶಾಲೆಗಳನ್ನು ಹೊಂದಿವೆ. ಈ ಶಾಲೆಗಳ ಇತಿಹಾಸವನ್ನು ಪುಸ್ತಕ ಅಥವಾ ವಿಡಿಯೋ ಮೂಲಕ ದಾಖಲಿಸಿ, ಜಾಲತಾಣಗಳಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂಬುದು ಪ್ರಾಧಿಕಾರದ ಪ್ರಮುಖ ಆಶಯವಾಗಿದೆ.

Heritage Schools 31 Steps to Save Old Schools

Heritage Schools 31 Steps to Save Old Schools
Heritage Schools 31 Steps to Save Old Schools
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.