ಬೈಕ್​ ವೀಲಿಂಗ್​ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, few moment later ಏನಾಯ್ತು, ವಿಡಿಯೋ ನೋಡಿ

ಹಂಚಿಕೊಳ್ಳಿ
WhatsApp Facebook X Telegram
Shimoga Police
Shimoga Police

Shimoga Police ಶಿವಮೊಗ್ಗ: ನಗರದ ರಸ್ತೆಗಳಲ್ಲಿ  ವೀಲಿಂಗ್  ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಯುವಕರ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

ಈ ಘಟನೆಯು ಶಿವಮೊಗ್ಗದ ವಿಮಾನ ನಿಲ್ದಾಣ ರಸ್ತೆಯ ಪುಟ್ಟಪ್ಪ ಕ್ಯಾಂಪ್ ಬಳಿ ನಡೆದಿದೆ. ಇಬ್ಬರು ಯುವಕರು ತಮ್ಮ ಮೊಪೆಡ್ ವಾಹನದಲ್ಲಿ ವೀಲಿಂಗ್ ನಡೆಸಿದ್ದರು. ಈ ದೃಶ್ಯಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಂತಹ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸಂಚಾರಿ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ, ಬೈಕ್​ನ ನಂಬರ್​ ಪ್ಲೇಟ್​​ ಆಧಾರದ ಮೇಲೆ ಯುವಕರನ್ನು ಪತ್ತೆ ಹಚ್ಚಿ ಎಫ್‌ಐಆರ್ ದಾಖಲಿಸಲಾಗಿದೆ.

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು ಇ-ಪೇಪರ್​​ ಓದಿ

ವಿಶೇಷವೆಂದರೆ, ಪೊಲೀಸರು ಯುವಕರು ಹಾಕಿದ್ದ ವಿಡಿಯೋವನ್ನೇ ಬಳಸಿಕೊಂಡು ಅದಕ್ಕೆ ಎಡಿಟಿಂಗ್ ಮಾಡುವ ಮೂಲಕ ಜಾಗೃತಿ ವಿಡಿಯೋವೊಂದನ್ನು ಸಿದ್ಧಪಡಿಸಿ ತಮ್ಮ ಅಧಿಕೃತ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಇಂತಹ ದುಸ್ಸಾಹಸಗಳು ಕೇವಲ ಕಾನೂನು ಬಾಹಿರ ಮಾತ್ರವಲ್ಲ, ಪ್ರಾಣಾಪಾಯಕ್ಕೂ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. 

Shimoga Police Crack Down on Bike Wheeling Youths

Shimoga Police
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor