ಸಾಗರ: ಕೆಫೆ ಮಾಲೀಕನಿಂದ ಕಾರ್ಮಿಕನ ಹತ್ಯೆ; ಕಾರಿನೊಳಗೆ ಯುವಕನ ಶವ ಪತ್ತೆ!

Published: 02 ಏಪ್ರಿಲ್ 2026, 2:30 ಅಪರಾಹ್ನ IST • 1 min read

ಸಾಗರ: ಹಣಕಾಸಿನ ವಿಚಾರ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೆಫೆ ಮಾಲೀಕನೊಬ್ಬ ತನ್ನದೇ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸಾಗರ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಶಿವಮೊಗ್ಗದಲ್ಲಿ ಸರಣಿ ಘಟನೆಗಳು! ಬಸ್​ ಅಡಿಗೆ ಬಿದ್ದು ಮಗು ಸಾವು, ಆಟೋ, ಕಾರಿಗೆ ಗುದ್ದಿದ KSRTC, ಸಾಗರದಲ್ಲಿ ಕಾರಿಗೆ ಬೆಂಕಿ

ಪ್ರಕರಣದ ವಿವರ:

ಸಾಗರದ ಶಿವಮೊಗ್ಗ ರಸ್ತೆಯಲ್ಲಿರುವ  ಕೆಫೆ ಒಂದರಲ್ಲಿ ಕಳೆದ 7 ತಿಂಗಳಿಂದ ಬಿಹಾರ ಮೂಲದ ಟಿಂಕು ಶರ್ಮಾ (30) ಎಂಬುವವರು ಶೆಫ್ ಹಾಗೂ ಸರ್ವರ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಹೊಂಡಾ ಸಿಟಿ ಕಾರೊಂದರಲ್ಲಿ ಟಿಂಕು ಶರ್ಮಾ ಅವರ ಶವ ಪತ್ತೆಯಾಗಿದ್ದು, ಕೆಫೆ ಮಾಲೀಕ ಇಮ್ರಾನ್ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರ ರಾತ್ರಿಯಿಂದಲೇ ಮಾಲೀಕ ಮತ್ತು ಕಾರ್ಮಿಕನ ನಡುವೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ಜಗಳ ನಡೆದಿತ್ತು. ಇಂದು ಬೆಳಗ್ಗೆಯೂ ಇದೇ ವಿಚಾರಕ್ಕೆ ವಾಗ್ವಾದ ಮುಂದುವರಿದಿದ್ದು, ಈ ವೇಳೆ ಆಕ್ರೋಶಗೊಂಡ ಇಮ್ರಾನ್ ಕಾರ್ಮಿಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ಸ್ವರೂಪದ ಪೆಟ್ಟು ಬಿದ್ದ ಪರಿಣಾಮ ಟಿಂಕು ಶರ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ . ಸಾಗರ ಪೊಲೀಸರು ಈ ಕುರಿತಾಗಿ  ಹೆಚ್ಚಿನ ತನಿಖೆ ಕೈಗೊಂಡಿದ್ದು ಘಟನೆ ಕುರಿತಾದ ಹೆಚ್ಚಿನ  ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. 

Sagara Cafe Murder Owner Kills Bihar Worker

Sagara Cafe Murder Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news
Sagara Cafe Murder akshara Habba Sagara

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Ganesh Ajjimane

Senior Journalist | Malenadu Today
✓ Verified Journalist

Authority

Published by: Malenadu Today Editorial Desk
✓ Fact Checked   ✓ Updated   Editorial Policy