Ripponpete ರಿಪ್ಪನ್ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದಲ್ಲಿ 23 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
ಶಿವಮೊಗ್ಗ: ಎನ್.ಟಿ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸಾವು,
ಮೃತ ಯುವಕನನ್ನು ಕೊಳವಳ್ಳಿ ನಿವಾಸಿ ವೀರಭದ್ರ ಅವರ ಪುತ್ರ ಸುನೀಲ್ (23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಕೆಲಸ ಮುಗಿಸಿ ಮನೆಗೆ ಮರಳಿದ್ದ ಸುನೀಲ್, ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಸಂಜೆ 5 ಗಂಟೆಗೆ ಮನೆಯಿಂದ ಹೊರಟಿದ್ದನು. ತಡರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದನು ಎನ್ನಲಾಗಿದೆ.
ಮನೆಗೆ ಬಂದಾಗ ಮದ್ಯಪಾನ ಮಾಡಿದ್ದ ಎನ್ನಲಾದ ಸುನೀಲ್, ಮನೆಯ ಹೊರಭಾಗದಲ್ಲಿ ತಂದೆ-ತಾಯಿಯವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾನೆ. ತಂದೆ ಮಲಗಲು ಹೋದ ನಂತರ ಸುನೀಲ್ ಮನೆಯೊಳಗೆ ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಅಣ್ಣ ಮತ್ತು ತಾಯಿ ಒಳಗೆ ಹೋಗಿ ನೋಡಿದಾಗ, ಹಾಲಿನ ಕಬ್ಬಿಣದ ರಾಡಿಗೆ ನೈಲಾನ್ ಬೆಡ್ಶೀಟ್ನಿಂದ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
Ripponpete 23-Year-Old Youth Commits Suicide

