ಸಕ್ರೆಬೈಲಿನಲ್ಲಿ ವೈದ್ಯರ ಚಮತ್ಕಾರ: ಅರಣ್ಯಾಧಿಕಾರಿಗಳ ಹರ್ಷೋದ್ಗಾರ, ಬದುಕುಳಿದ ನಾಲ್ಕು ಆನೆಗಳು

Elephant Camp ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರದಲ್ಲಿ ಪವಾಡವೇ ನಡೆದಿದೆ ಎಂಬಂತೆ, ಸಾವಿನ ಮನೆ ಕದ ತಟ್ಟಿದ್ದ ನಾಲ್ಕು ಆನೆಗಳ ಆರೋಗ್ಯ ಸಹಜ ಸ್ಥಿತಿಯತ್ತ ಮರಳಿದೆ. ಬಾಲಣ್ಣ, ವಿಕ್ರಾಂತ್, ಅಡ್ಕಬಡ್ಕ ಮತ್ತು ಸಾಗರ್ ಆನೆಗಳ ಆರೋಗ್ಯ ಸ್ಥಿತಿ ಸಂಪೂರ್ಣ ತಹಬದಿಗೆ ಬಂದಿದ್ದು, ಮತ್ತೆ ಕಾಡಿನತ್ತ ಮುಖ ಮಾಡಿವೆ. ವೈದ್ಯರು, ಮಾವುತರು ಹಾಗೂ ಅರಣ್ಯಾಧಿಕಾರಿಗಳ ಹಗಲು-ರಾತ್ರಿಯ ಪರಿಶ್ರಮದಿಂದ ಆನೆಗಳು ಮರುಜೀವ ಪಡೆಯುವಂತಾಗಿದೆ. ಈ ನಾಲ್ಕು ಆನೆಗಳ ಆರೋಗ್ಯದಲ್ಲಿ ಏರುಪೇರಾದಾಗ ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯಗಳು ವೈರಲ್ ಆಗಿ, ದೇಶಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಗ ಭಾರತೀಯ ವನ್ಯಜೀವಿ ಮಂಡಳಿಯಿಂದ ಹಿಡಿದು ರಾಜ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳವರೆಗೆ, ಆನೆಗಳ ತುರ್ತು ಚಿಕಿತ್ಸೆಗಾಗಿ ಪರಿಸರ ಪ್ರೇಮಿಗಳಿಂದ ತೀವ್ರ ಒತ್ತಡ ಉಂಟಾಗಿತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಜ್ಞ ವೈದ್ಯರ ಸಮಿತಿಯನ್ನು ರಚಿಸಿ, ತಕ್ಷಣ ಚಿಕಿತ್ಸೆ ನೀಡುವಂತೆ ಸೂಚಿಸಿದ್ದರು.

ಆನೆ ಕಾರ್ಯಾಚರಣೆಯ ಕ್ಯಾಪ್ಟನ್ ಬಾಲಣ್ಣ

ವೈದ್ಯರ ನಿರಂತರ ಪರಿಶ್ರಮದಿಂದ ಸಾಯುವ ಹಂತದಲ್ಲಿದ್ದ ‘ಬಾಲಣ್ಣ’ ಆನೆ ಬದುಕಿದ್ದೇ ಒಂದು ಪವಾಡದಂತಿದೆ. ಸುತ್ತಮುತ್ತಲ ಜಿಲ್ಲೆಗಳ ಆನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಬಾಲಣ್ಣನ ಪರಿಸ್ಥಿತಿ ಮುಂದೊಂದು ದಿನ ಹೀಗಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸದೃಢ ದೇಹಕಾಯ ಹೊಂದಿದ್ದ ಬಾಲಣ್ಣ ಕಿವಿ ಆಡಿಸುವುದನ್ನು ನೋಡುವುದೇ ಒಂದು ಸೋಜುಗ. ಬಾಲಣ್ಣ ಕಿವಿ ಆಡಿಸುತ್ತಿದ್ದರೆ ಪಕ್ಕದಲ್ಲಿ ನಿಂತವರಿಗೆ ಎಸಿ ಗಾಳಿಯಂತೆ ಅನುಭವವಾಗುತ್ತಿತ್ತು. ತನ್ನ ಕಿವಿ ಮತ್ತು ದಂತದ ಸೌಂದರ್ಯದಿಂದಲೇ ಎಲ್ಲರನ್ನು ಆಕರ್ಷಿಸಿದ್ದ ಬಾಲಣ್ಣನ ಬಲ ಕಿವಿ, ‘ಗ್ಯಾಂಗ್ರಿನ್’ ಪೀಡಿತವಾಗಿ ಕಪ್ಪಾಗಿ ಹೋಗಿತ್ತು. ದಿನ ಕಳೆದಂತೆ ಕಿವಿ ಕೊಳೆಯುತ್ತಿತ್ತೇ ವಿನಃ ಗಾಯ ಮಾಗುವಂತೆ ಕಾಣುತ್ತಿರಲಿಲ್ಲ. ದಸರಾ ಉತ್ಸವದಿಂದ ಶಿಬಿರಕ್ಕೆ ಮರಳಿದ ನಂತರ ಬಾಲಣ್ಣನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವನ್ಯಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿತ್ತು.

ಆದರೆ ಈಗ ಬಾಲಣ್ಣ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಒಂದು ಕಿವಿಯಿಲ್ಲದ ಬಾಲಣ್ಣನನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆಯಾದರೂ, ಆತ ಆರೋಗ್ಯವಾಗಿ ದಷ್ಟಪುಷ್ಟವಾಗಿರುವುದನ್ನು ಕಂಡಾಗ ಸಂತೋಷವಾಗುತ್ತದೆ. ನಾಲ್ಕು ಆನೆಗಳಲ್ಲಿ ‘ಅಡ್ಕಬಡ್ಕ’ ಕೂಡ ಚೇತರಿಕೆ ಕಂಡಿದೆ. ಕೇವಲ ಸೊಂಡಿಲು ಮತ್ತು ಬಲ ಮುಂಗಾಲಿನ ಮೇಲೆ ಭಾರ ಹಾಕಿ ನಿಲ್ಲುತ್ತಿದ್ದ ಅಡ್ಕಬಡ್ಕ, ಈಗ ನಡೆದಾಡುವಷ್ಟು ಸುಧಾರಿಸಿದೆ.

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ವನ್ಯಜೀವಿ ವಲಯದಲ್ಲಿ ಸುಮಾರು 24 ಆನೆಗಳನ್ನು ಪಾಲನೆ-ಪೋಷಣೆ ಮಾಡಲಾಗುತ್ತಿದೆ. ಆನೆಗಳನ್ನು ಪೋಷಿಸುವ ಸಮಯದಲ್ಲಿ ಸಣ್ಣ ಪ್ರಮಾಣದ ಆರೋಗ್ಯ ವ್ಯತ್ಯಯವಾಗುವುದು ಸಾಮಾನ್ಯ. ಅಂತಹ ಆನೆಗಳಿಗೆ ವಿಶೇಷವಾಗಿ ನುರಿತ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತದೆ. ಅಂತೆಯೇ ಬಿಡಾರದ ಆನೆಗಳಾದ ಬಾಲಣ್ಣ, ವಿಕ್ರಾಂತ್, ಅಡ್ಕಬಡ್ಕ ಹಾಗೂ ಸಾಗರ್ ಆನೆಗಳ ಆರೋಗ್ಯದಲ್ಲೂ ವ್ಯತ್ಯಯ ಉಂಟಾಗಿತ್ತು. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ವ್ಯತಿರಿಕ್ತವಾಗಿ ಪ್ರಕಟವಾಗಿತ್ತು. ಈ ವರದಿಗಳ ಆಧಾರದ ಮೇಲೆ, ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಸಕ್ರೆಬೈಲು ಶಿಬಿರದ ಆನೆಗಳ ಆರೋಗ್ಯ ಮತ್ತು ಅಲ್ಲಿನ ವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸಲು ತಜ್ಞ ಪಶುವೈದ್ಯರ ಸಮಿತಿಯನ್ನು ಈ ಕೆಳಕಂಡಂತೆ ರಚಿಸಿದ್ದರು.

ಸಮಿತಿಯ ರಚನೆ

ಅಧ್ಯಕ್ಷರು: ಡಾ. ಎಲ್. ಚಟಿಯಪ್ಪ, ಉಪ ನಿರ್ದೇಶಕರು (ನಿವೃತ್ತ), ದುಬಾರೆ ಆನೆ ಶಿಬಿರ, ಮಡಿಕೇರಿ ವಿಭಾಗ.

ಸದಸ್ಯರು:

ಡಾ. ಆನಂದ್ (ಶಸ್ತ್ರಚಿಕಿತ್ಸೆ ಮತ್ತು ರೇಡಿಯಾಲಜಿ), ಪಶು ವೈದ್ಯಾಧಿಕಾರಿ, ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು.

ಡಾ. ರಮೇಶ್ ಹೆಚ್. (ಶಸ್ತ್ರಚಿಕಿತ್ಸೆ ಮತ್ತು ರೇಡಿಯಾಲಜಿ), ಪಶು ವೈದ್ಯಾಧಿಕಾರಿ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು.

ಡಾ. ಮಿರ್ಜಾ ವಾಸಿಮ್ (ಔಷಧಶಾಸ್ತ್ರ), ಪಶು ವೈದ್ಯಾಧಿಕಾರಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ.

ಡಾ. ಬಿ.ಆರ್. ಬಾಳಪ್ಪನವರ್, ಸಹಾಯಕ ಪ್ರಾಧ್ಯಾಪಕರು, ವಿ.ಎಸ್.ಆರ್. ಪಶು ವೈದ್ಯಕೀಯ ಕಾಲೇಜು, ಶಿವಮೊಗ್ಗ.

ಈ ತಜ್ಞರ ಸಮಿತಿಯು ದಿನಾಂಕ 26/10/2025 ರಂದು ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿ ಸಾಗರ್, ವಿಕ್ರಾಂತ್, ಅಡ್ಕಬಡ್ಕ ಮತ್ತು ಬಾಲಣ್ಣ ಆನೆಗಳ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ಬಾಲಣ್ಣ ಆನೆಯ ಆರೋಗ್ಯ ಸ್ಥಿತಿಗತಿ

ಬಾಲಣ್ಣ ಆನೆಯ ಕಾಲಿನ ನೋವಿಗಾಗಿ ಪಶುವೈದ್ಯರು ಕಿವಿಗೆ ಚುಚ್ಚುಮದ್ದು ನೀಡಿದ್ದರು. ಆನೆಯು ಕಿವಿಯನ್ನು ಮರಕ್ಕೆ ಉಜ್ಜಿಕೊಂಡ ಕಾರಣ ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ಗಾಯವಾಗಿತ್ತು. ಗಾಯ ಉಲ್ಬಣವಾಗಿದ್ದನ್ನು ಕಂಡು ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ. ಬಾಳಪ್ಪನವರ್, ಡಾ. ಮಹೇಶ್ವರಪ್ಪ (ನಿವೃತ್ತ ಉಪ ನಿರ್ದೇಶಕರು) ಹಾಗೂ ಬಿಡಾರದ ವೈದ್ಯಾಧಿಕಾರಿಗಳು ಪರಿಶೀಲಿಸಿ, ರಕ್ತ ಪರಿಚಲನೆ ಸ್ಥಗಿತಗೊಂಡು ‘ಡ್ರೈ ಗ್ಯಾಂಗ್ರಿನ್’ ಆಗಿರುವುದಾಗಿ ವರದಿ ನೀಡಿದ್ದರು. ತಜ್ಞರ ಸಮಿತಿಯು ಆನೆಯ ಜೀವಕ್ಕೆ ಅಪಾಯವಾಗದಂತೆ ಮತ್ತು ಗ್ಯಾಂಗ್ರಿನ್ ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಯಲು ಶಸ್ತ್ರಚಿಕಿತ್ಸೆಯ ಮೂಲಕ ಕಿವಿಯನ್ನು ಬೇರ್ಪಡಿಸಲು ಶಿಫಾರಸು ಮಾಡಿತು. ಅದರಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಕಿವಿಯನ್ನು ಬೇರ್ಪಡಿಸಲಾಯಿತು. ಪ್ರಸ್ತುತ ಬಾಲಣ್ಣ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ.

ಸಾಗರ್ ಆನೆಯ ಆರೋಗ್ಯ ಸ್ಥಿತಿಗತಿ

ದಿನಾಂಕ 10/10/2025 ರಂದು ಸಾಗರ್ ಆನೆಯ ಹಿಂಬದಿಯ ಕಾಲಿಗೆ ಕುರ (Abscess) ಉಂಟಾಗಿ ಕೀವು ತುಂಬಿಕೊಂಡಿತ್ತು. ಗಾಯವನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಡ್ರೆಸ್ಸಿಂಗ್ ಮಾಡಿದ ನಂತರ ಸಾಗರ್ ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.

ವಿಕ್ರಾಂತ್ ಆನೆಯ ಆರೋಗ್ಯ ಸ್ಥಿತಿಗತಿ

ಹಾಸನ ಜಿಲ್ಲೆಯ ಬೇಲೂರು ವಲಯದಲ್ಲಿ ಉಪಟಳ ನೀಡುತ್ತಿದ್ದ ವಿಕ್ರಾಂತ್ ಆನೆಯನ್ನು 23/03/2025 ರಂದು ಸೆರೆಹಿಡಿದು ಸಕ್ರೆಬೈಲು ಬಿಡಾರದ ಕ್ರಾಲ್‌ನಲ್ಲಿ ಇರಿಸಲಾಗಿತ್ತು. ಸೆರೆಹಿಡಿಯುವ ಸಂದರ್ಭದಲ್ಲಿ ಹಣೆ, ಸೊಂಡಿಲು ಮತ್ತು ಕಾಲಿನ ಭಾಗದಲ್ಲಿ ಗಾಯಗಳಾಗಿದ್ದವು. ನಿಯಮಿತ ತಪಾಸಣೆ ಮತ್ತು ಚಿಕಿತ್ಸೆಯಿಂದಾಗಿ ವಿಕ್ರಾಂತ್ ಈಗ ಸುಸ್ಥಿತಿಯಲ್ಲಿದ್ದು, ಬಿಡಾರಕ್ಕೆ ಬಿಡಲಾಗಿದೆ.

ಅಡ್ಕಬಡ್ಕ ಆನೆಯ ಆರೋಗ್ಯ ಸ್ಥಿತಿಗತಿ

05/06/2025 ರಂದು ಸಿದ್ದಾಪುರ ವಲಯದಲ್ಲಿ ಸೆರೆಹಿಡಿಯಲಾದ ಅಡ್ಕಬಡ್ಕ ಆನೆಯು 06/09/2025 ರಂದು ಜಾರಿ ಬಿದ್ದು ಎಡಗಾಲಿಗೆ ಪೆಟ್ಟು ಮಾಡಿಕೊಂಡಿತ್ತು. ಎಕ್ಸ್‌-ರೇ ತಪಾಸಣೆಯಲ್ಲಿ ‘Fracture at Left Olecranon process’ ಅಥವಾ ‘Radial nerve Paralysis’ ಆಗಿರಬಹುದು ಎಂದು ಶಂಕಿಸಲಾಗಿತ್ತು. ಅಲೋಪತಿ ಜೊತೆಗೆ ಆಯುರ್ವೇದ ಚಿಕಿತ್ಸೆಯನ್ನೂ ನೀಡಲಾಯಿತು. ತಜ್ಞರ ಸಲಹೆಯಂತೆ ‘ಹೈಡ್ರೋಥೆರಪಿ’ ಮತ್ತು ‘ಫೈಬರ್ ಗ್ಲಾಸ್ ಪ್ಲಾಸ್ಟರಿಂಗ್’ ಚಿಕಿತ್ಸೆ ನೀಡಲಾಗುತ್ತಿದ್ದು, ಆನೆಯು ಚೇತರಿಸಿಕೊಳ್ಳುತ್ತಿದೆ.

ನಾಲ್ಕು ಆನೆಗಳ ಆರೋಗ್ಯದ ವಿಷಯದಲ್ಲಿ ಅರಣ್ಯಾಧಿಕಾರಿಗಳು ಟೀಕೆಗೆ ಗುರಿಯಾಗಿದ್ದರು. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿದ ಸಿಸಿಎಫ್ ಹನುಮಂತಪ್ಪ, ಡಿಸಿಎಫ್ ಪ್ರಸನ್ನ ಪಟಗಾರ್ ಹಾಗೂ ಆರ್‌ಎಫ್‌ಒ ವಿನಯ್ ತಮ್ಮ ಸಿಬ್ಬಂದಿಯೊಂದಿಗೆ ವೈದ್ಯರ ನೆರವಿಗೆ ನಿಂತರು. ಸಕಾಲದಲ್ಲಿ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಿದ ಕಾರಣ ಆನೆಗಳು ಬದುಕುಳಿಯುವಂತಾಯಿತು. ಟೀಕೆಗಳಿಗೆ ಜಗ್ಗದೆ ಕರ್ತವ್ಯ ನಿರ್ವಹಿಸಿದ ಅರಣ್ಯಾಧಿಕಾರಿಗಳು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ವಿ, ‘ಗ್ಯಾಂಗ್ರಿನ್’ ಪೀಡಿತವಾಗಿ ಕಪ್ಪಾಗಿ ಹೋಗಿತ್ತು. ದಿನ ಕಳೆದಂತೆ ಕಿವಿ ಕೊಳೆಯುತ್ತಿತ್ತೇ ವಿನಃ ಗಾಯ ಮಾಗುವಂತೆ ಕಾಣುತ್ತಿರಲಿಲ್ಲ. ದಸರಾ ಉತ್ಸವದಿಂದ ಶಿಬಿರಕ್ಕೆ ಮರಳಿದ ನಂತರ ಬಾಲಣ್ಣನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವನ್ಯಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿತ್ತು.

ಆದರೆ ಈಗ ಬಾಲಣ್ಣ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಒಂದು ಕಿವಿಯಿಲ್ಲದ ಬಾಲಣ್ಣನನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆಯಾದರೂ, ಆತ ಆರೋಗ್ಯವಾಗಿ ದಷ್ಟಪುಷ್ಟವಾಗಿರುವುದನ್ನು ಕಂಡಾಗ ಸಂತೋಷವಾಗುತ್ತದೆ. ನಾಲ್ಕು ಆನೆಗಳಲ್ಲಿ ‘ಅಡ್ಕಬಡ್ಕ’ ಕೂಡ ಚೇತರಿಕೆ ಕಂಡಿದೆ. ಕೇವಲ ಸೊಂಡಿಲು ಮತ್ತು ಬಲ ಮುಂಗಾಲಿನ ಮೇಲೆ ಭಾರ ಹಾಕಿ ನಿಲ್ಲುತ್ತಿದ್ದ ಅಡ್ಕಬಡ್ಕ, ಈಗ ನಡೆದಾಡುವಷ್ಟು ಸುಧಾರಿಸಿದೆ.

Elephant Camp ಬಾಲಣ್ಣ ಆನೆಯ ಮೊದಲ ಮತ್ತು ಈಗಿನ ಪೋಟೋ
Elephant CampElephant Camp ಬಾಲಣ್ಣ ಆನೆಯ ಮೊದಲ ಮತ್ತು ಈಗಿನ ಪೋಟೋ

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ವನ್ಯಜೀವಿ ವಲಯದಲ್ಲಿ ಸುಮಾರು 24 ಆನೆಗಳನ್ನು ಪಾಲನೆ-ಪೋಷಣೆ ಮಾಡಲಾಗುತ್ತಿದೆ. ಆನೆಗಳನ್ನು ಪೋಷಿಸುವ ಸಮಯದಲ್ಲಿ ಸಣ್ಣ ಪ್ರಮಾಣದ ಆರೋಗ್ಯ ವ್ಯತ್ಯಯವಾಗುವುದು ಸಾಮಾನ್ಯ. ಅಂತಹ ಆನೆಗಳಿಗೆ ವಿಶೇಷವಾಗಿ ನುರಿತ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತದೆ. ಅಂತೆಯೇ ಬಿಡಾರದ ಆನೆಗಳಾದ ಬಾಲಣ್ಣ, ವಿಕ್ರಾಂತ್, ಅಡ್ಕಬಡ್ಕ ಹಾಗೂ ಸಾಗರ್ ಆನೆಗಳ ಆರೋಗ್ಯದಲ್ಲೂ ವ್ಯತ್ಯಯ ಉಂಟಾಗಿತ್ತು. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ವ್ಯತಿರಿಕ್ತವಾಗಿ ಪ್ರಕಟವಾಗಿತ್ತು. ಈ ವರದಿಗಳ ಆಧಾರದ ಮೇಲೆ, ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಸಕ್ರೆಬೈಲು ಶಿಬಿರದ ಆನೆಗಳ ಆರೋಗ್ಯ ಮತ್ತು ಅಲ್ಲಿನ ವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸಲು ತಜ್ಞ ಪಶುವೈದ್ಯರ ಸಮಿತಿಯನ್ನು ಈ ಕೆಳಕಂಡಂತೆ ರಚಿಸಿದ್ದರು.

ಸಮಿತಿಯ ರಚನೆ
ಅಧ್ಯಕ್ಷರು: ಡಾ. ಎಲ್. ಚಟಿಯಪ್ಪ, ಉಪ ನಿರ್ದೇಶಕರು (ನಿವೃತ್ತ), ದುಬಾರೆ ಆನೆ ಶಿಬಿರ, ಮಡಿಕೇರಿ ವಿಭಾಗ.

ಸದಸ್ಯರು:

ಡಾ. ಆನಂದ್ (ಶಸ್ತ್ರಚಿಕಿತ್ಸೆ ಮತ್ತು ರೇಡಿಯಾಲಜಿ), ಪಶು ವೈದ್ಯಾಧಿಕಾರಿ, ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು.

ಡಾ. ರಮೇಶ್ ಹೆಚ್. (ಶಸ್ತ್ರಚಿಕಿತ್ಸೆ ಮತ್ತು ರೇಡಿಯಾಲಜಿ), ಪಶು ವೈದ್ಯಾಧಿಕಾರಿ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು.

ಡಾ. ಮಿರ್ಜಾ ವಾಸಿಮ್ (ಔಷಧಶಾಸ್ತ್ರ), ಪಶು ವೈದ್ಯಾಧಿಕಾರಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ.

ಡಾ. ಬಿ.ಆರ್. ಬಾಳಪ್ಪನವರ್, ಸಹಾಯಕ ಪ್ರಾಧ್ಯಾಪಕರು, ವಿ.ಎಸ್.ಆರ್. ಪಶು ವೈದ್ಯಕೀಯ ಕಾಲೇಜು, ಶಿವಮೊಗ್ಗ.

ಈ ತಜ್ಞರ ಸಮಿತಿಯು ದಿನಾಂಕ 26/10/2025 ರಂದು ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿ ಸಾಗರ್, ವಿಕ್ರಾಂತ್, ಅಡ್ಕಬಡ್ಕ ಮತ್ತು ಬಾಲಣ್ಣ ಆನೆಗಳ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ಬಾಲಣ್ಣ ಆನೆಯ ಆರೋಗ್ಯ ಸ್ಥಿತಿಗತಿ
ಬಾಲಣ್ಣ ಆನೆಯ ಕಾಲಿನ ನೋವಿಗಾಗಿ ಪಶುವೈದ್ಯರು ಕಿವಿಗೆ ಚುಚ್ಚುಮದ್ದು ನೀಡಿದ್ದರು. ಆನೆಯು ಕಿವಿಯನ್ನು ಮರಕ್ಕೆ ಉಜ್ಜಿಕೊಂಡ ಕಾರಣ ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ಗಾಯವಾಗಿತ್ತು. ಗಾಯ ಉಲ್ಬಣವಾಗಿದ್ದನ್ನು ಕಂಡು ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ. ಬಾಳಪ್ಪನವರ್, ಡಾ. ಮಹೇಶ್ವರಪ್ಪ (ನಿವೃತ್ತ ಉಪ ನಿರ್ದೇಶಕರು) ಹಾಗೂ ಬಿಡಾರದ ವೈದ್ಯಾಧಿಕಾರಿಗಳು ಪರಿಶೀಲಿಸಿ, ರಕ್ತ ಪರಿಚಲನೆ ಸ್ಥಗಿತಗೊಂಡು ‘ಡ್ರೈ ಗ್ಯಾಂಗ್ರಿನ್’ ಆಗಿರುವುದಾಗಿ ವರದಿ ನೀಡಿದ್ದರು. ತಜ್ಞರ ಸಮಿತಿಯು ಆನೆಯ ಜೀವಕ್ಕೆ ಅಪಾಯವಾಗದಂತೆ ಮತ್ತು ಗ್ಯಾಂಗ್ರಿನ್ ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಯಲು ಶಸ್ತ್ರಚಿಕಿತ್ಸೆಯ ಮೂಲಕ ಕಿವಿಯನ್ನು ಬೇರ್ಪಡಿಸಲು ಶಿಫಾರಸು ಮಾಡಿತು. ಅದರಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಕಿವಿಯನ್ನು ಬೇರ್ಪಡಿಸಲಾಯಿತು. ಪ್ರಸ್ತುತ ಬಾಲಣ್ಣ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ.

ಸಾಗರ್ ಆನೆಯ ಆರೋಗ್ಯ ಸ್ಥಿತಿಗತಿ
ದಿನಾಂಕ 10/10/2025 ರಂದು ಸಾಗರ್ ಆನೆಯ ಹಿಂಬದಿಯ ಕಾಲಿಗೆ ಕುರ (Abscess) ಉಂಟಾಗಿ ಕೀವು ತುಂಬಿಕೊಂಡಿತ್ತು. ಗಾಯವನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಡ್ರೆಸ್ಸಿಂಗ್ ಮಾಡಿದ ನಂತರ ಸಾಗರ್ ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.

Elephant Camp ಸಾಗರ್​ ಆನೆಯ ಪ್ರಸ್ತುತ ಫೋಟೋ
Elephant Camp Elephant Camp ಸಾಗರ್​ ಆನೆಯ ಪ್ರಸ್ತುತ ಫೋಟೋ

ವಿಕ್ರಾಂತ್ ಆನೆಯ ಆರೋಗ್ಯ ಸ್ಥಿತಿಗತಿ
ಹಾಸನ ಜಿಲ್ಲೆಯ ಬೇಲೂರು ವಲಯದಲ್ಲಿ ಉಪಟಳ ನೀಡುತ್ತಿದ್ದ ವಿಕ್ರಾಂತ್ ಆನೆಯನ್ನು 23/03/2025 ರಂದು ಸೆರೆಹಿಡಿದು ಸಕ್ರೆಬೈಲು ಬಿಡಾರದ ಕ್ರಾಲ್‌ನಲ್ಲಿ ಇರಿಸಲಾಗಿತ್ತು. ಸೆರೆಹಿಡಿಯುವ ಸಂದರ್ಭದಲ್ಲಿ ಹಣೆ, ಸೊಂಡಿಲು ಮತ್ತು ಕಾಲಿನ ಭಾಗದಲ್ಲಿ ಗಾಯಗಳಾಗಿದ್ದವು. ನಿಯಮಿತ ತಪಾಸಣೆ ಮತ್ತು ಚಿಕಿತ್ಸೆಯಿಂದಾಗಿ ವಿಕ್ರಾಂತ್ ಈಗ ಸುಸ್ಥಿತಿಯಲ್ಲಿದ್ದು, ಬಿಡಾರಕ್ಕೆ ಬಿಡಲಾಗಿದೆ.

Elephant Camp  ವಿಕ್ರಾಂತ್​​ ಆನೆಯ ಪ್ರಸ್ತುತ ಪೋಟೋ
Elephant Camp ವಿಕ್ರಾಂತ್​​ ಆನೆಯ ಪ್ರಸ್ತುತ ಪೋಟೋ

ಅಡ್ಕಬಡ್ಕ ಆನೆಯ ಆರೋಗ್ಯ ಸ್ಥಿತಿಗತಿ
05/06/2025 ರಂದು ಸಿದ್ದಾಪುರ ವಲಯದಲ್ಲಿ ಸೆರೆಹಿಡಿಯಲಾದ ಅಡ್ಕಬಡ್ಕ ಆನೆಯು 06/09/2025 ರಂದು ಜಾರಿ ಬಿದ್ದು ಎಡಗಾಲಿಗೆ ಪೆಟ್ಟು ಮಾಡಿಕೊಂಡಿತ್ತು. ಎಕ್ಸ್‌-ರೇ ತಪಾಸಣೆಯಲ್ಲಿ ‘Fracture at Left Olecranon process’ ಅಥವಾ ‘Radial nerve Paralysis’ ಆಗಿರಬಹುದು ಎಂದು ಶಂಕಿಸಲಾಗಿತ್ತು. ಅಲೋಪತಿ ಜೊತೆಗೆ ಆಯುರ್ವೇದ ಚಿಕಿತ್ಸೆಯನ್ನೂ ನೀಡಲಾಯಿತು. ತಜ್ಞರ ಸಲಹೆಯಂತೆ ‘ಹೈಡ್ರೋಥೆರಪಿ’ ಮತ್ತು ‘ಫೈಬರ್ ಗ್ಲಾಸ್ ಪ್ಲಾಸ್ಟರಿಂಗ್’ ಚಿಕಿತ್ಸೆ ನೀಡಲಾಗುತ್ತಿದ್ದು, ಆನೆಯು ಚೇತರಿಸಿಕೊಳ್ಳುತ್ತಿದೆ.

ಅಡ್ಕ ಬಡ್ಕ ಆನೆಯ ಪ್ರಸ್ತುತ ಪೋಟೋ
ಅಡ್ಕ ಬಡ್ಕ ಆನೆಯ ಪ್ರಸ್ತುತ ಪೋಟೋ

ನಾಲ್ಕು ಆನೆಗಳ ಆರೋಗ್ಯದ ವಿಷಯದಲ್ಲಿ ಅರಣ್ಯಾಧಿಕಾರಿಗಳು ಟೀಕೆಗೆ ಗುರಿಯಾಗಿದ್ದರು. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿದ ಸಿಸಿಎಫ್ ಹನುಮಂತಪ್ಪ, ಡಿಸಿಎಫ್ ಪ್ರಸನ್ನ ಪಟಗಾರ್ ಹಾಗೂ ಆರ್‌ಎಫ್‌ಒ ವಿನಯ್ ತಮ್ಮ ಸಿಬ್ಬಂದಿಯೊಂದಿಗೆ ವೈದ್ಯರ ನೆರವಿಗೆ ನಿಂತರು. ಸಕಾಲದಲ್ಲಿ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಿದ ಕಾರಣ ಆನೆಗಳು ಬದುಕುಳಿಯುವಂತಾಯಿತು. ಟೀಕೆಗಳಿಗೆ ಜಗ್ಗದೆ ಕರ್ತವ್ಯ ನಿರ್ವಹಿಸಿದ ಅರಣ್ಯಾಧಿಕಾರಿಗಳು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Elephant Camp Miraculous Recovery of Four Elephants

Elephant Camp
Elephant Camp