ಭದ್ರಾವತಿ : ಭದ್ರಾವತಿ ನಗರದ ಜನ್ನಾಪುರದಲ್ಲಿರುವ ಮನೆಯೊಂದಕ್ಕೆ ನುಗ್ಗಿ ಚಿನ್ನದ ಸರವನ್ನು ದೋಚಿದ್ದ ಬೆಂಗಳೂರು ಮೂಲದ ಆರೋಪಿಯನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರಿನ ವಿವೇಕನಗರದ ನಿವಾಸಿ ಸೂರ್ಯ (28) ಎಂದು ಗುರುತಿಸಲಾಗಿದೆ.
ಶಿವಮೊಗ್ಗ ಚಡ್ಡಿ ಗ್ಯಾಂಗ್, ತೀರ್ಥಹಳ್ಳಿ ದರೋಡೆ! ವಿಧಾನ ಸಭೆಯಲ್ಲಿ ಚರ್ಚೆ,ಚರ್ಚೆ,ಚರ್ಚೆ
ಘಟನೆ ವಿವರ
ಕಳೆದ ಡಿಸೆಂಬರ್ 19, 2025 ರಂದು ಜನ್ನಾಪುರದ ಮನೆಯೊಂದರ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರ ಕಳ್ಳತನವಾಗಿತ್ತು. ಈ ಕುರಿತು ಮನೆಯ ಮಾಲೀಕರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಇದೀಗ ಆರೋಪಿ ಪೊಲೀಸರು ಬಲೆಗೆ ಬಿದ್ದಿದ್ದು ಆತನಿಂದ 1,40,000 ರೂ. ಮೌಲ್ಯದ 10 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
Bhadravathi Theft Case Delivery Boy Arrested


