ಶಿವಮೊಗ್ಗ : ಶಿವಮೊಗ್ಗದ ಯುವಜನತೆಗೆ ಒಂದು ಉತ್ತಮ ಉದ್ಯೋಗಾವಕಾಶ ಒದಗಿ ಬಂದಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ ವಿಶೇಷ ನೇರ ಸಂದರ್ಶನವನ್ನು ಹಮ್ಮಿಕೊಂಡಿದೆ.
ಶಿವಮೊಗ್ಗ ನಗರವೊಂದರಲ್ಲೇ 16,000 ಸಿಸಿಟಿವಿ ಇದೆ! ಜಿಲ್ಲೆಯಲ್ಲಿ 30000! ಏನಾಗ್ತಿದೆ! ಗೃಹಸಚಿವರಿಂದ ದೊಡ್ಡ ಸುದ್ದಿ!
ಮುಂಬರುವ ಮಾರ್ಚ್ 13 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ, ಗುತ್ಯಪ್ಪ ಕಾಲೋನಿ ಪಂಪಾ ನಗರದ 2ನೇ ಕ್ರಾಸ್‌ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಈ ಸಂದರ್ಶನದಲ್ಲಿ ಹೆಸರಾಂತ ಖಾಸಗಿ ಕಂಪನಿಗಳು ಪಾಲ್ಗೊಳ್ಳಲಿದ್ದು, ಅರ್ಹ ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳಲಿವೆ.
Shivamogga Careers ಯಾರೆಲ್ಲಾ ಭಾಗವಹಿಸಬಹುದು?
ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ ಸೇರಿದಂತೆ ಯಾವುದೇ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಸುಸಂದರ್ಭವನ್ನು ಬಳಸಿಕೊಳ್ಳಬಹುದು. ಅಭ್ಯರ್ಥಿಗಳ ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಸಂದರ್ಶನಕ್ಕೆ ಬರುವವರು ತಮ್ಮ ಇತ್ತೀಚಿನ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಮರೆಯದೆ ತರಬೇಕೆಂದು ಕೋರಲಾಗಿದೆ.
ಈ ಉದ್ಯೋಗ ಮೇಳಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ನೇರವಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ: 08182-255293, 9380663606 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
Shivamogga Careers Direct Recruitment for Companies


