astrology prediction /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಬಹುಳ ಅಷ್ಟಮಿ ತಿಥಿ ರಾತ್ರಿ 2.28 ರವರೆಗೆ ಇರಲಿದ್ದು, ಆ ನಂತರ ನವಮಿ ಆರಂಭವಾಗಲಿದೆ. ಜ್ಯೇಷ್ಠಾ ನಕ್ಷತ್ರವು ರಾತ್ರಿ 8.33 ರವರೆಗೆ ಇದ್ದು, ತದನಂತರ ಮೂಲ ನಕ್ಷತ್ರ ಇರಲಿದೆ. ಅಮೃತ ಘಳಿಗೆ: ಬೆಳಿಗ್ಗೆ 10.46 ರಿಂದ ಮಧ್ಯಾಹ್ನ 12.31 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಶಿವಮೊಗ್ಗ: ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ; ಮೋದಿ-ಟ್ರಂಪ್ ಅಣಕು ಪ್ರದರ್ಶನ!
ಇವತ್ತಿನ ರಾಶಿಫಲ/astrology prediction
ಮೇಷ / ವೆಚ್ಚದ ದಿನ. ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದ ವಿಷಯಗಳಲ್ಲಿ ಅಸಮಾಧಾನ ಮೂಡಬಹುದು. ಅನಾರೋಗ್ಯ. ಸಹೋದರರೊಂದಿಗೆ ಭಿನ್ನಾಭಿಪ್ರಾಯ.
ವೃಷಭ / ನೂತನ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಬಾಲ್ಯದ ಸ್ನೇಹಿತರ ಭೇಟಿ. ಆರ್ಥಿಕ ಲಾಭ, ವಾಹನ ಯೋಗ. ಉದ್ಯೋಗ ಮತ್ತು ವ್ಯಾಪಾರ ಚಟುವಟಿಕೆ ಅತ್ಯಂತ ಉತ್ಸಾಹದಾಯಕವಾಗಿ ಸಾಗಲಿವೆ.
ಮಿಥುನ/ ಹೊಸ ಯೋಜನೆಗಳಿಗೆ ಚಾಲನೆ ನೀಡಲು ಸುದಿನ. ಶುಭ ಸುದ್ದಿ ನಿಮ್ಮನ್ನು ತಲುಪಲಿವೆ.ಆದಾಯ ಹರಿದು ಬರಲಿದೆ. ಬಾಂಧವ್ಯ ವೃದ್ಧಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ.
ಕರ್ಕಾಟಕ /ಅನಿರೀಕ್ಷಿತವಾಗಿ ಪ್ರಯಾಣ. ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ. ಕೆಲಸದ ಸ್ಥಳದಲ್ಲಿ ಮತ್ತು ವ್ಯಾಪಾರದಲ್ಲಿ ಮಾನಸಿಕ ಒತ್ತಡ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.

ಶಿವಮೊಗ್ಗ : ಹೋಳಿ ಹಬ್ಬ & ಶೆಡ್ ಕೇಸ್! 10 ಮಂದಿ ಅರೆಸ್ಟ್!
ಸಿಂಹ / ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ. ಉದ್ಯೋಗ ಮತ್ತು ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅವಶ್ಯಕ. ಕೆಲಸದ ಒತ್ತಡವಿರಲಿದೆ. ಅನಿರೀಕ್ಷಿತ ಘಟನೆ
ಕನ್ಯಾ/ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳಲಿವೆ. ಹೊಸ ಉದ್ಯೋಗದ ಅವಕಾಶ ಹುಡುಕಿಕೊಂಡು ಬರಲಿವೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲ. ಅನಿರೀಕ್ಷಿತ ಆಮಂತ್ರಣ. ಉದ್ಯೊಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ.
ತುಲಾ/ ಸುದೀರ್ಘ ಪ್ರಯಾಣ. ಹಣದ ಅಪವ್ಯಯ. ಜವಾಬ್ದಾರಿ ಹೆಚ್ಚಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರುತ್ಸಾಹದ ವಾತಾವರಣ ಇರಲಿದೆ. ಯಶಸ್ಸು ನಿಮ್ಮದಾಗಲಿದೆ.
ವೃಶ್ಚಿಕ / ವ್ಯಾಪಾರ ವಹಿವಾಟು ಮತ್ತು ಉದ್ಯೋಗದಲ್ಲಿ ಚೈತನ್ಯವಿರಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರಭಾವ ಹೆಚ್ಚಾಗಲಿದೆ. ಕೈಗೊಂಡ ಕಾರ್ಯಗಳಲ್ಲಿ ವಿಜಯ. ಆಸ್ತಿ ಲಾಭ.
ಧನಸ್ಸು: ಹಠಾತ್ ಪ್ರಯಾಣ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಂದುಕೊಂಡ ಯಶಸ್ಸು. ಅನಾರೋಗ್ಯ. ಕುಟುಂಬದ ಸದಸ್ಯರೊಂದಿಗೆ ವಾಗ್ವಾದ. ಸಣ್ಣಪುಟ್ಟ ಬದಲಾವಣೆ.
ಶಿವಮೊಗ್ಗ: ಬೈಕ್ ಅಪಘಾತ ,ಬಿಟಿವಿ ವರದಿಗಾರ ಅನಿಲ್ ನಿಧನ
ಮಕರ / ಆಸ್ತಿಗೆ ಸಂಬಂಧಿಸಿದ ವಿವಾದ. ಆಲೋಚನೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿದೆ. ಪ್ರಯತ್ನಗಳಿಗೆ ತಕ್ಕ ಸಿದ್ಧಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪರಿಸ್ಥಿತಿ ಪೂರಕವಾಗಿರಲಿದೆ.
ಕುಂಭ / ಕೈಗೊಂಡ ಕೆಲಸಗಳಲ್ಲಿ ಯಶಸ್ಸು. ಉದ್ಯೋಗಕ್ಕಾಗಿ ನಡೆಸುವ ಪ್ರಯತ್ನ ಫಲ ನೀಡಲಿವೆ. ಹೊಸ ವ್ಯಕ್ತಿಗಳ ಪರಿಚಯ. ಮಿತ್ರರಿಂದ ಶುಭ ಸಮಾಚಾರ. ವೃತ್ತಿಜೀವನದಲ್ಲಿ ಮುನ್ನಡೆ.
ಮೀನ /ಅಡೆತಡೆ ಎದುರಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮಂದಗತಿ ಇರಲಿದ್ದು, ಧನಲಾಭವು ಆಗಲಿದೆ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದೀರಿ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.